Telegram Join My Telegram WhatsApp Join My WhatsApp

Income Tax: ನಿಮ್ಮ ಬ್ಯಾಂಕ್ ಅಕೌಂಟ್ ಮೇಲೆ ಐಟಿ ಇಲಾಖೆಯ ಹದ್ದಿನ ಕಣ್ಣು ನೀವು ಐಟಿಆರ್ (ITR) ಫೈಲ್ ಮಾಡದಿದ್ದರೆ ಏನಾಗುತ್ತೆ

Income Tax: ನಿಮ್ಮ ಬ್ಯಾಂಕ್ ಅಕೌಂಟ್ ಮೇಲೆ ಐಟಿ ಇಲಾಖೆಯ ಹದ್ದಿನ ಕಣ್ಣು: ನೀವು ಐಟಿಆರ್ (ITR) ಫೈಲ್ ಮಾಡದಿದ್ದರೆ ಏನಾಗುತ್ತೆ

ನಮ್ಮಲ್ಲಿ ಅನೇಕರಿಗೆ ಇನ್ಕಮ್ ಟ್ಯಾಕ್ಸ್ (Income tax) ಅಂದರೆ ಒಂದು ರೀತಿಯ ಭಯ ಅಥವಾ ನಿರ್ಲಕ್ಷ್ಯ ನನ್ನ ಆದಾಯ 12 ಲಕ್ಷದ ಒಳಗಿದೆ, ನಾನು ಟ್ಯಾಕ್ಸ್ ಕಟ್ಟುವ ಅವಶ್ಯಕತೆಯೇ ಇಲ್ಲ ಎಂದು ಬಹಳಷ್ಟು ಜನ ಅಂದುಕೊಂಡಿರುತ್ತಾರೆ.

ಹೀಗಾಗಿ ಐಟಿಆರ್ (ITR – Income Tax Return) ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಣ್ಣು ಮುಚ್ಚಿ ಕೂತಿರುತ್ತಾರೆ. ಆದರೆ, ಈಗ ಕಾಲ ಬದಲಾಗಿದೆ. ನೀವು ಎಚ್ಚೆತ್ತುಕೊಳ್ಳಲೇಬೇಕಾದ ಸಮಯ ಬಂದಿದೆ. ನಿಮ್ಮ ಆದಾಯ 12 ಲಕ್ಷದ ಒಳಗಿರಲಿ ಅಥವಾ ಮೇಲಿರಲಿ, ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳಿವೆ.

ಜುಲೈ 31ರ ಒಳಗಾಗಿ ನೀವು ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ನಿಮಗೆ ಐಟಿ ಇಲಾಖೆಯಿಂದ ನೋಟಿಸ್ ಬರುವುದು ಗ್ಯಾರಂಟಿ. ಈಗ ಟ್ಯಾಕ್ಸ್ ಕಟ್ಟುವವರ ಮೇಲೆ ಮಾತ್ರವಲ್ಲ, ಟ್ಯಾಕ್ಸ್ ಕಟ್ಟದವರ ಮೇಲೂ ಐಟಿ ಡಿಪಾರ್ಟ್ಮೆಂಟ್ ಹದ್ದಿನ ಕಣ್ಣಿಟ್ಟಿದೆ.

ಬನ್ನಿ, ಯಾರೆಲ್ಲಾ ಅಲರ್ಟ್ ಆಗಬೇಕು, ನೋಟಿಸ್ ಬಂದರೆ ಆಗುವ ಆರ್ಥಿಕ ಪೆಟ್ಟು ಎಂಥದ್ದು ಎಂಬುದನ್ನು ಪ್ರತಿಯೊಂದು ಡೇಟಾ ಸಮೇತ ಬಿಡಿಸಿ ನೋಡೋಣ.

ಇದನ್ನೂ ಓದಿ: ಸರ್ಕಾರದ ಸೌಲಭ್ಯ ಪಡೀಬೇಕಾ ಹಾಗಾದ್ರೆ ನಿಮ್ಮತ್ರ ಸಣ್ಣ ರೈತ ಪ್ರಮಾಣ ಪತ್ರ ಇರಲೇಬೇಕು ಅರ್ಜಿ ಹಾಕೋದು ಹೆಂಗೆ ಇಲ್ಲಿದೆ ಮಾಹಿತಿ

ಟ್ಯಾಕ್ಸ್ ಕಟ್ಟುವುದಕ್ಕೂ ITR ಫೈಲ್ ಮಾಡುವುದಕ್ಕೂ ಇರುವ ವ್ಯತ್ಯಾಸ

ಭಾರತದಲ್ಲಿ ಬಹಳಷ್ಟು ಜನರಿಗೆ ಇರುವ ದೊಡ್ಡ ಕನ್ಫ್ಯೂಷನ್ ಇದು. ಟ್ಯಾಕ್ಸ್ ಕಟ್ಟುವುದು (Paying Tax) ಬೇರೆ, ಐಟಿಆರ್ ಫೈಲ್ ಮಾಡುವುದು (Filing ITR) ಬೇರೆ.

ಕೇಂದ್ರ ಸರ್ಕಾರದ ಡೇಟಾ ಪ್ರಕಾರ, 2024-25ನೇ ಸಾಲಿನಲ್ಲಿ ಬರೋಬ್ಬರಿ 8 ಕೋಟಿಗೂ ಅಧಿಕ ಜನ ಐಟಿಆರ್ ಫೈಲ್ ಮಾಡಿದ್ದಾರೆ. ಆದರೆ, ಈ 8 ಕೋಟಿ ಜನರೂ ಟ್ಯಾಕ್ಸ್ ಕಟ್ಟಿದ್ದಾರೆ ಎಂದು ಅರ್ಥವಲ್ಲ

ಇವರಲ್ಲಿ ಅನೇಕರು ಕೇವಲ ರಿಟರ್ನ್ಸ್ ಮಾತ್ರ ಫೈಲ್ ಮಾಡಿದ್ದಾರೆ. ಅಂದರೆ, ನನಗೆ ಇಷ್ಟಿಷ್ಟು ಆದಾಯ ಬಂದಿದೆ, ಆದರೆ ಅದು ಟ್ಯಾಕ್ಸ್ ಕಟ್ಟುವ ಲಿಮಿಟ್ ಒಳಗಿದೆ ಎಂದು ಸರ್ಕಾರಕ್ಕೆ ಅಧಿಕೃತವಾಗಿ ಲೆಕ್ಕ ಕೊಟ್ಟಿದ್ದಾರೆ ಅಷ್ಟೇ.

ITR ಕಡ್ಡಾಯ ಈ 4 ರೂಲ್ಸ್ ಮರೆಯದಿರಿ

ಇನ್ಕಮ್ ಟ್ಯಾಕ್ಸ್ ಕಾಯ್ದೆಯ ಸೆಕ್ಷನ್ 139(1) ಪ್ರಕಾರ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳಿವೆ. ನಿಮ್ಮ ಆದಾಯ ಸಂಪೂರ್ಣ ಶೂನ್ಯ (Zero) ಆಗಿದ್ದರೂ ಸರಿ, ಅಥವಾ ಟ್ಯಾಕ್ಸ್ ಫ್ರೀ ಲಿಮಿಟ್ ಒಳಗಿದ್ದರೂ ಸರಿ.

ಈ ಕೆಳಗಿನ 4 ಕಂಡೀಷನ್‌ಗಳಲ್ಲಿ ಯಾವುದಾದರೂ ಒಂದು ನಿಮಗೆ ಅನ್ವಯವಾದರೆ, ನೀವು ಕಡ್ಡಾಯವಾಗಿ ITR ಫೈಲ್ ಮಾಡಲೇಬೇಕು. ಇದಕ್ಕೆ ಯಾವುದೇ ಎಕ್ಸ್‌ಕ್ಯೂಸ್ ಇಲ್ಲ

ರೂಲ್ 1: ಬ್ಯಾಂಕ್ ಡೆಪಾಸಿಟ್

  • ಒಂದೇ ವರ್ಷದಲ್ಲಿ ನಿಮ್ಮ ಬ್ಯಾಂಕ್‌ನ ಕರೆಂಟ್ ಅಕೌಂಟ್ (Current Account) ಗೆ 1 ಕೋಟಿ ರೂ. ಗಿಂತ ಹೆಚ್ಚು ಹಣ ಡೆಪಾಸಿಟ್ ಆಗಿದ್ದರೆ ನೀವು ಐಟಿಆರ್ ಮಾಡಲೇಬೇಕು.

ರೂಲ್ 2: ವಿದೇಶಿ ಪ್ರವಾಸ

  • ನೀವು ಅಥವಾ ನಿಮ್ಮ ಕುಟುಂಬದವರು ವಿದೇಶಿ ಪ್ರವಾಸಕ್ಕೆ (Foreign Trip) 2 ಲಕ್ಷ ರೂ. ಗಿಂತ ಹೆಚ್ಚು ಖರ್ಚು ಮಾಡಿದ್ದರೆ ಐಟಿಆರ್ ಕಡ್ಡಾಯ.

  • ಗಮನಿಸಿ: ನೀವು ಬೇರೆಯವರ ಟಿಕೆಟ್ ಬುಕ್ ಮಾಡಿಕೊಟ್ಟಿದ್ದರೂ ಸಹ ಅದು ನಿಮ್ಮ ಲೆಕ್ಕಕ್ಕೇ ಬರುತ್ತದೆ.

ರೂಲ್ 3: ಕರೆಂಟ್ ಬಿಲ್

  • ಒಂದು ವರ್ಷದಲ್ಲಿ ನಿಮ್ಮ ಮನೆಯ ಅಥವಾ ಆಫೀಸ್‌ನ ವಿದ್ಯುತ್ ಬಿಲ್ (Electricity Bill) 1 ಲಕ್ಷ ರೂ. ದಾಟಿದ್ದರೆ, ಸರ್ಕಾರಕ್ಕೆ ನೀವು ಲೆಕ್ಕ ಕೊಡಲೇಬೇಕು.

ರೂಲ್ 4: ಸೇವಿಂಗ್ಸ್ ಅಕೌಂಟ್

  • ನಿಮ್ಮ ಉಳಿತಾಯ ಖಾತೆಯಲ್ಲಿ (Savings Account) 50 ಲಕ್ಷ ರೂ. ಗಿಂತ ಅಧಿಕ ಹಣ ಡೆಪಾಸಿಟ್ ಇದ್ದರೆ ಐಟಿಆರ್ ಮಾಡುವುದು ಮ್ಯಾಂಡೇಟರಿ.ಈ ಮೇಲಿನ ಯಾವುದೇ ಕೆಟಗರಿಗೆ ನೀವು ಸೇರಿದ್ದರೂ, “ನಾನು ಟ್ಯಾಕ್ಸ್ ಸ್ಲ್ಯಾಬ್‌ಗೆ ಬರಲ್ಲ” ಎಂದು ನೆಪ ಹೇಳುವಂತಿಲ್ಲ.

ನೀವು ಫೈಲ್ ಮಾಡದಿದ್ದರೆ, ಸಿಬಿಡಿಟಿ (CBDT) ತನ್ನ ಸಿಸ್ಟಮ್ ಮೂಲಕ ಆಟೋಮ್ಯಾಟಿಕ್ ಆಗಿ ಸೆಕ್ಷನ್ 142(1) ಅಡಿಯಲ್ಲಿ ನಿಮಗೆ ನೋಟಿಸ್ ಕಳಿಸುತ್ತದೆ.

ಇದನ್ನೂ ಓದಿ: E-Chavadi: ಇ ಚಾವಡಿ ಮಾಹಿತಿ ನಮ್ಮೂರ ಜಮೀನಿನ ಜಾತಕ ಈಗ ನಿಮ್ಮ ಮೊಬೈಲ್‌ನಲ್ಲೇ

ಐಟಿ ಇಲಾಖೆಯ ಡೇಂಜರಸ್ ಟೆಕ್ನಾಲಜಿ

ಹಿಂದೆಲ್ಲಾ ಬ್ಯಾಂಕ್‌ನಲ್ಲಿ ಸುಮ್ಮನೆ ಕ್ಯಾಶ್ ಡೆಪಾಸಿಟ್ ಮಾಡಿದರೆ ಯಾರಿಗೂ ತಿಳಿಯುತ್ತಿರಲಿಲ್ಲ. ಅಥವಾ ಯಾರಿಗೂ ಗೊತ್ತಾಗದ ಹಾಗೆ ಬ್ಲಾಕ್ ಮನಿ ಕೊಟ್ಟು ಪ್ರಾಪರ್ಟಿ ತಗೊಂಡರೆ, “ಸರ್ಕಾರಕ್ಕೆ ಎಲ್ಲಿಂದ ಗೊತ್ತಾಗುತ್ತೆ?” ಅನ್ನೋ ಧೈರ್ಯ ಜನರಿಗಿತ್ತು.

ನಾನೇನು ರಿಪೋರ್ಟ್ ಮಾಡಲ್ಲ, ಅವರಿಗೆ ಹೆಂಗೆ ಗೊತ್ತಾಗುತ್ತೆ ಅಂತ ಆರಾಮಾಗಿ ಇರ್ತಾ ಇದ್ರು. ಆದರೆ, ಈಗ ಆ ಆಟ ನಡೆಯಲ್ಲ ಇನ್ಕಮ್ ಟ್ಯಾಕ್ಸ್ ಇಲಾಖೆ ಈಗ ಅತ್ಯಾಧುನಿಕ ಸಾಫ್ಟ್‌ವೇರ್, ಆಲ್ಗೋರಿದಂ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸುತ್ತಿದೆ.

ಪ್ರಾಜೆಕ್ಟ್ ಇನ್ಸೈಟ್ ಎಂಬ ಬ್ರಹ್ಮಾಸ್ತ್ರ

ಸರ್ಕಾರವು ಪ್ರಾಜೆಕ್ಟ್ ಇನ್ಸೈಟ್ (Project Insight) ಅನ್ನೋ ಬೃಹತ್ ಟೂಲ್ ಅನ್ನು ಯೂಸ್ ಮಾಡುತ್ತಿದೆ. ಇದು ನಿಮ್ಮ ಪ್ರತಿಯೊಂದು ಹಣಕಾಸಿನ ಹೆಜ್ಜೆಯನ್ನು ಟ್ರ್ಯಾಕ್ ಮಾಡುವ ಅತ್ಯಾಧುನಿಕ AI ಸಿಸ್ಟಮ್.

ನಿಮ್ಮ ಪ್ರತಿಯೊಂದು ಟ್ರಾನ್ಸಾಕ್ಷನ್ ಎಐಎಸ್ (AIS – Annual Information Statement) ನಲ್ಲಿ ಆಟೋಮ್ಯಾಟಿಕ್ ಆಗಿ ಬಂದು ಕೂತಿರುತ್ತದೆ. ಇದಕ್ಕೊಂದು ಚಿಕ್ಕ ಉದಾಹರಣೆ ಇಲ್ಲಿದೆ:

  • ನೀವು 10 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಪ್ರಾಪರ್ಟಿ ರಿಜಿಸ್ಟರ್ ಮಾಡಿದರೆ.

  • ಬ್ಯಾಂಕ್‌ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಎಫ್‌ಡಿ (Fixed Deposit) ಮಾಡಿದರೆ.

  • ಶೇರ್ ಮಾರ್ಕೆಟ್ ಅಥವಾ ಮ್ಯೂಚುವಲ್ ಫಂಡ್‌ನಲ್ಲಿ 1 ಲಕ್ಷಕ್ಕಿಂತ ಹೆಚ್ಚು ಇನ್ವೆಸ್ಟ್ ಮಾಡಿದರೆ.

  • ನಿಮ್ಮ ಕ್ರೆಡಿಟ್ ಕಾರ್ಡ್ (Credit Card) ಬಿಲ್ 1 ಲಕ್ಷ ದಾಟಿದ್ದರೆ.

ಇವೆಲ್ಲವೂ ನೇರವಾಗಿ AI ಸಿಸ್ಟಮ್ ಕಣ್ಣಿಗೆ ಬೀಳುತ್ತದೆ ಮತ್ತು ರಿಪೋರ್ಟ್ ಜನರೇಟ್ ಆಗುತ್ತದೆ.

ಇದನ್ನೂ ಓದಿ: Medical inflation in India: ಖಾಸಗಿ ಆಸ್ಪತ್ರೆಗಳ ಬಿಲ್‌ಗೆ ಬ್ರೇಕ್ ವೈದ್ಯರ ಫೀಸ್ ನಿಗದಿಪಡಿಸಲು ಸರ್ಕಾರದ ಹೊಸ ಪ್ಲಾನ್

ಡೇಟಾ ಮ್ಯಾಚ್ ಆಗದಿದ್ದರೆ ತೊಂದರೆ

ಹಾಗಂತ ನೀವಿಲ್ಲಿ ಟ್ಯಾಕ್ಸ್ ಕಟ್ಟಲೇಬೇಕು ಅಂತೇನಿಲ್ಲ. ನಿಮ್ಮ ಆದಾಯದ ಲಿಮಿಟ್ 12 ಲಕ್ಷದ ಒಳಗಡೆ ಇದ್ದರೆ, ನೀವು ಆರಾಮಾಗಿ ಟ್ಯಾಕ್ಸ್ ವಿನಾಯಿತಿಯನ್ನು ಪಡೆದುಕೊಳ್ಳಬಹುದು.

ಆದರೆ, ಸರ್ಕಾರಕ್ಕೆ ಎಲ್ಲಿಂದ ಎಷ್ಟು ಆದಾಯ ಬಂತು, ಆಕ್ಚುವಲ್ ಇನ್ಕಮ್ ಎಷ್ಟು ಅನ್ನೋ ಲೆಕ್ಕವನ್ನು ಅಧಿಕೃತವಾಗಿ ITR ಮೂಲಕ ಕೊಡಲೇಬೇಕು.

ಡೆಡ್‌ಲೈನ್ ಮಿಸ್ ಮಾಡಿದರೆ ಬೀಳುವ ದಂಡಗಳೇನು

ಜುಲೈ 31ರ ಡೆಡ್‌ಲೈನ್ ಮಿಸ್ ಮಾಡಿದರೆ ಮುಂದೆ ಏನಾಗುತ್ತೆ ಗೊತ್ತಾ ನೀವು ಡೆಡ್‌ಲೈನ್ ಮಿಸ್ ಮಾಡಿದ ತಕ್ಷಣ ನಿಮ್ಮನ್ನು ಹುಡುಕಿಕೊಂಡು ಬಂದು ಜೈಲಿಗೆ ಹಾಕಲ್ಲ. ಆದರೆ ಆರ್ಥಿಕವಾಗಿ ಭಾರಿ ಪೆಟ್ಟು ಬೀಳುತ್ತದೆ.

ಪೆಟ್ಟು 1: ಲೇಟ್ ಫೀಸ್ (Late Fees)

  • ಸೆಕ್ಷನ್ 234F ಅಡಿಯಲ್ಲಿ ನೀವು 5000 ರೂ. ಲೇಟ್ ಫೀಸ್ ದಂಡ ಕಟ್ಟಬೇಕು.

  • ಒಂದು ವೇಳೆ ನಿಮ್ಮ ಆದಾಯ 5 ಲಕ್ಷದ ಒಳಗಡೆ ಇದ್ದರೆ, 1000 ರೂ. ಫೈನ್ ಬೀಳುತ್ತದೆ.

ಪೆಟ್ಟು 2: ಬಡ್ಡಿಯ ದಂಡ (Interest Penalty)

  • ಸೆಕ್ಷನ್ 234A ಪ್ರಕಾರ, ನೀವು ಕಟ್ಟಬೇಕಾದ ಟ್ಯಾಕ್ಸ್ ಏನಾದ್ರು ಬಾಕಿ ಇದ್ದರೆ, ಆ ದುಡ್ಡಿನ ಮೇಲೆ ಪ್ರತಿ ತಿಂಗಳಿಗೆ 1% ಬಡ್ಡಿ ಕಟ್ಟಬೇಕು.

ಪೆಟ್ಟು 3: ಕ್ಯಾರಿ ಫಾರ್ವರ್ಡ್ ಲಾಸ್ ಕಡಿತ

  • ಇದು ಅತ್ಯಂತ ಡೇಂಜರಸ್ ಪೆಟ್ಟು.

  • ನೀವೇನಾದ್ರೂ ಶೇರ್ ಮಾರ್ಕೆಟ್ ಅಥವಾ ಬಿಸಿನೆಸ್‌ನಲ್ಲಿ 1 ಲಕ್ಷ ರೂ. ಲಾಸ್ ಮಾಡಿಕೊಂಡಿದ್ದೀರಿ ಎಂದುಕೊಳ್ಳಿ.

  • ಆ ಲಾಸ್ ಅನ್ನು ಮುಂದಿನ ವರ್ಷ ಬರುವ ಲಾಭದೊಂದಿಗೆ ಅಡ್ಜಸ್ಟ್ ಮಾಡಿಕೊಳ್ಳುವ ಅವಕಾಶ ಇರುತ್ತದೆ.

  • ಆದರೆ, ಸೆಕ್ಷನ್ 139(3) ಪ್ರಕಾರ ನೀವು ಡೆಡ್‌ಲೈನ್ ಒಳಗಡೆ ITR ಫೈಲ್ ಮಾಡಲಿಲ್ಲ ಅಂದ್ರೆ, ಆ ಲಾಸ್ ಅನ್ನು ಮುಂದಿನ 8 ವರ್ಷಗಳವರೆಗೆ ಕ್ಯಾರಿ ಫಾರ್ವರ್ಡ್ ಮಾಡಲು ಸರ್ಕಾರ ಬಿಡಲ್ಲ!

  • ಅಂದರೆ, ಮಾರ್ಕೆಟ್‌ನಲ್ಲೂ ಲಾಸ್, ಟ್ಯಾಕ್ಸ್‌ನಲ್ಲೂ ಲಾಸ್.. ಪಕ್ಕಾ ಡಬಲ್ ಡ್ಯಾಮೇಜ್!

ಪೆಟ್ಟು 4: ಜೈಲು ಶಿಕ್ಷೆ

  • ಕಳ್ಳ ಲೆಕ್ಕ ಕೊಟ್ಟು, ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆ (Tax Evasion) ಮಾಡಿದರೆ ಸೆಕ್ಷನ್ 276CC ಅಡಿಯಲ್ಲಿ ಕಠಿಣ ಕಾನೂನುಗಳಿವೆ.

  • ಬರೀ ಫೈನ್ ಅಷ್ಟೇ ಅಲ್ಲ, ಜೈಲು ಶಿಕ್ಷೆ ಕೂಡ ಆಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Canara Bank FD: ಕೆನರಾ ಬ್ಯಾಂಕ್ ತಿಂಗಳ ಆದಾಯ ಯೋಜನೆ ಯಾವುದೇ ರಿಸ್ಕ್ ಇಲ್ಲದೆ ಪ್ರತಿ ತಿಂಗಳು ಆದಾಯ ಪಡೆಯುವುದು ಹೇಗೆ

ITR ಕೇವಲ ಟ್ಯಾಕ್ಸ್ ಅಲ್ಲ ಅದೊಂದು ಆರ್ಥಿಕ ಪಾಸ್‌ಪೋರ್ಟ್

ಇಷ್ಟೆಲ್ಲಾ ಫೈನ್, ಜೈಲು ಅಂತ ಕೇಳಿ ಹೆದರಬೇಕಾಗಿಲ್ಲ. ಯಾಕಂದ್ರೆ, ITR ಫೈಲ್ ಮಾಡೋದ್ರಿಂದ ನಿಮಗೆ ಸಿಗುವ ಲಾಭಗಳು (Benefits) ತುಂಬಾನೇ ಇವೆ. ಜನ ITR ಅಂದರೆ ಬರೀ ಸರ್ಕಾರಕ್ಕೆ ದುಡ್ಡು ಕಟ್ಟುವುದು ಅಂತ ಅಂದುಕೊಂಡಿದ್ದಾರೆ.

ಆದರೆ ಇದು ನಿಮ್ಮ ‘ಫೈನಾನ್ಸಿಯಲ್ ಸ್ಟೆಬಿಲಿಟಿಯ ಪಾಸ್‌ಪೋರ್ಟ್’ ಇದ್ದ ಹಾಗೆ.

1. ಸುಲಭವಾಗಿ ಲೋನ್ ಅಪ್ರೂವಲ್

ನೀವು ಮನೆ ಕಟ್ಟೋಕೆ ಹೋಮ್ ಲೋನ್ (Home Loan) ಅಥವಾ ಬಿಸಿನೆಸ್ ಲೋನ್ ಕೇಳಿಕೊಂಡು ಬ್ಯಾಂಕಿಗೆ ಹೋದರೆ ಅವರು ಮೊದಲು ಕೇಳುವುದೇನು

ನಿಮ್ಮ ಕಳೆದ 3 ವರ್ಷದ ITR ಇದೆಯಾ ಅಂತ. ಇದು ಬ್ಯಾಂಕ್‌ಗಳಿಗೆ ಗೋಲ್ಡ್ ಸ್ಟ್ಯಾಂಡರ್ಡ್ ಪ್ರೂಫ್ ಇದು ಕರೆಕ್ಟ್ ಆಗಿದ್ದರೆ ನಿಮ್ಮ ಪ್ರೊಫೈಲ್ ಸ್ಟ್ರಾಂಗ್ ಇದೆ ಎಂದರ್ಥ. ಆಗ ನಿಮ್ಮ ಲೋನ್ ಅಪ್ರೂವಲ್ ಬಹಳ ಫಾಸ್ಟ್ ಆಗಿ ಆಗುತ್ತದೆ.

2. ವೀಸಾ ಪಡೆಯಲು ಸುಲಭ 

ನೀವು ಅಮೆರಿಕಾ, ಯುಕೆ ಅಥವಾ ಯುರೋಪ್ ರಾಷ್ಟ್ರಗಳಿಗೆ ಹೋಗಲು ವೀಸಾಗೆ ಅಪ್ಲೈ ಮಾಡಿದಾಗ ಎಂಬಸ್ಸಿಗಳು ನಿಮ್ಮ ಬ್ಯಾಕ್ ಗ್ರೌಂಡ್ ಚೆಕ್ ಮಾಡುತ್ತವೆ.

ನಿಮ್ಮ ಆರ್ಥಿಕ ಸ್ಥಿತಿಗತಿ ಚೆಕ್ ಮಾಡಲು ITR ರಿಪೋರ್ಟ್ ಅನ್ನು ಕಡ್ಡಾಯವಾಗಿ (Mandatory) ಕೇಳುತ್ತಾರೆ. ಇದು ಇಲ್ಲ ಅಂದರೆ ವೀಸಾ ರಿಜೆಕ್ಟ್ ಆಗೋ ಚಾನ್ಸಸ್ ಹೆಚ್ಚು.

3. TDS ಮತ್ತು TCS ರಿಫಂಡ್ 

ನಿಮ್ಮ ಸಂಬಳದಲ್ಲಿ ಕಟ್ ಆಗುವ TDS ಹಣ, ಅಥವಾ ನೀವು ಎಫ್‌ಡಿ ಮೇಲೆ ಬ್ಯಾಂಕ್‌ಗೆ ಕಟ್ಟಿರುವ ಎಕ್ಸ್‌ಟ್ರಾ ಟ್ಯಾಕ್ಸ್ ವಾಪಸ್ ಪಡೆಯಲು ITR ಬೇಕೇ ಬೇಕು.

  • ಉದಾಹರಣೆಗೆ ಕಾರು ಖರೀದಿ: ತುಂಬಾ ಜನ ಹೊಸ ಕಾರು ತಗೊಂಡಿರುತ್ತಾರೆ. ಕಾರು ಖರೀದಿಸುವಾಗ TCS ಕಟ್ಟಿರುತ್ತಾರೆ. ಅದು ಕಾರಿನ ದುಡ್ಡು ಅಂತಲೇ ಅಂದುಕೊಂಡಿರುತ್ತಾರೆ. ಆದರೆ ಇಲ್ಲ! ಆ ಹಣ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್‌ನಲ್ಲಿ ಕೂತಿರುತ್ತದೆ. ನೀವು 12 ಲಕ್ಷದ ಲಿಮಿಟ್ ಒಳಗಡೆ ಬರುವವರಾದರೆ, ಆ TCS ಅಮೌಂಟ್ ನಿಮಗೆ ವಾಪಸ್ (Refund) ಬರುತ್ತದೆ.

  • ಕನ್ಸಲ್ಟೆಂಟ್ಸ್ ಗೆ ಲಾಭ: ಯಾವುದೇ ಕಂಪನಿಯಲ್ಲಿ ಎಂಪ್ಲಾಯಿ ಆಗಿಲ್ಲದೆ, ಕನ್ಸಲ್ಟೆಂಟ್ (Consultant) ಆಗಿ ಕೆಲಸ ಮಾಡುವವರಿಗೆ 10% TDS ಕಟ್ ಆಗಿರುತ್ತದೆ. ಕೆಲವರದು ಲಕ್ಷಗಟ್ಟಲೆ ಕಟ್ ಆಗಿರುತ್ತದೆ. ನೀವು ITR ಫೈಲ್ ಮಾಡಿದರೆ, ಲೆಕ್ಕಾಚಾರ ಮಾಡಿ ಆ ಹಣವನ್ನು ನಿಮ್ಮ ಅಕೌಂಟ್‌ಗೆ ವಾಪಸ್ ಜಮಾ ಮಾಡುತ್ತಾರೆ.

ಇದಕ್ಕೆಲ್ಲಾ ಆಡಿಟರ್‌ಗಳು ಅಥವಾ ಸಿಎ (CA) ಗಳ ಸಹಾಯ ಪಡೆದು ITR ಫೈಲಿಂಗ್ ಮಾಡುವುದೊಂದೇ ದಾರಿ.

ಇದನ್ನೂ ಓದಿ: India Monsoon Crisis: ಮುಂಗಾರು ಮಳೆಗೆ ಎಲ್ ನಿನೊ ಗ್ರಹಣ11 ವರ್ಷಗಳ ದಾಖಲೆ ಬ್ರೇಕ್ ಕೃಷಿ ವಲಯಕ್ಕೆ ಕಾದಿದೆಯಾ ಭಾರಿ ಗಂಡಾಂತರ

ಕುಟುಂಬದ ಭದ್ರತೆಗೆ ಇನ್ಶೂರೆನ್ಸ್ ಅನಿವಾರ್ಯ

ನಾವು ಟ್ಯಾಕ್ಸ್, ನೋಟಿಸ್, ಫೈನಾನ್ಸಿಯಲ್ ರಿಸ್ಕ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ಅದೇ ಟೈಮ್‌ನಲ್ಲಿ ನಮ್ಮ ಫ್ಯಾಮಿಲಿಯ ಲೈಫ್ ರಿಸ್ಕ್ ಬಗ್ಗೆ ಕೂಡ ಗಮನ ಹರಿಸಬೇಕಲ್ವಾ

ನಾವು ಕಷ್ಟಪಟ್ಟು ದುಡಿಯೋದೇ ಫ್ಯಾಮಿಲಿಗೋಸ್ಕರ. ನಾಳೆ ನಮಗೇನಾದ್ರೂ ದಿಡೀರ್ ಅಂತ ಹೆಚ್ಚು ಕಮ್ಮಿ ಆದ್ರೆ ಅವರ ಗತಿ ಏನು ಒಂದು ಕ್ರಿಟಿಕಲ್ ಕಾಯಿಲೆ ಬಂದ್ರೆ ಹಾಸ್ಪಿಟಲ್ ಬಿಲ್ ಲಕ್ಷ ಲಕ್ಷ ದಾಟುತ್ತೆ.

ಅದಕ್ಕೆ ಇವತ್ತು ಪ್ರತಿಯೊಬ್ಬರಿಗೂ ಒಂದು ‘ಟರ್ಮ್ ಇನ್ಶೂರೆನ್ಸ್’ ಮತ್ತು ‘ಹೆಲ್ತ್ ಇನ್ಶೂರೆನ್ಸ್’ ಅತ್ಯಂತ ಅನಿವಾರ್ಯ.

  • ಟರ್ಮ್ ಇನ್ಶೂರೆನ್ಸ್: ಬರಿ 600-700 ರೂಪಾಯಿಗೆಲ್ಲ ಒಂದು ಕೋಟಿ ರೂಪಾಯಿ ಕವರೇಜ್ ಸಿಗುವ ಟರ್ಮ್ ಇನ್ಶೂರೆನ್ಸ್ ಮಾಡಿಸಬಹುದು. ನಮಗೆ ಏನಾದರೂ ಹೆಚ್ಚು ಕಮ್ಮಿಯಾದರೆ ಫ್ಯಾಮಿಲಿಗೆ ಟ್ಯಾಕ್ಸ್ ಫ್ರೀ ಆಗಿ ದೊಡ್ಡ ಮೊತ್ತ ಸಿಗುತ್ತದೆ.

  • ಹೆಲ್ತ್ ಇನ್ಶೂರೆನ್ಸ್: ಒಂದು ತಿಂಗಳಿಗೆ 600-700 ರೂ. ಕಟ್ಟಿದರೆ, 5 ರಿಂದ 10 ಲಕ್ಷ ರೂಪಾಯಿವರೆಗಿನ ಕವರೇಜ್ ಇರುವ ಹೆಲ್ತ್ ಇನ್ಶೂರೆನ್ಸ್ ಮಾಡಿಸಬಹುದು. ಹಾಸ್ಪಿಟಲ್ ಸೇರೋ ಪರಿಸ್ಥಿತಿ ಬಂದ್ರೆ ಬಿಲ್ ಕಟ್ಟುವ ಭಯ ಇರೋದಿಲ್ಲ.

ವಯಸ್ಸು ಜಾಸ್ತಿ ಆಗ್ತಾ ಹೋದಾಗ ಪ್ರೀಮಿಯಂ ಕೂಡ ರಾಕೆಟ್ ವೇಗದಲ್ಲಿ ಜಾಸ್ತಿ ಆಗುತ್ತದೆ. ಹಾಗಾಗಿ ಎಷ್ಟು ಬೇಗ ಮಾಡಿಸ್ತೀರೋ ಅಷ್ಟು ಒಳ್ಳೆಯದು. ಆನ್‌ಲೈನ್‌ನಲ್ಲಿ ಬೇರೆ ಬೇರೆ ಕಂಪನಿಗಳ ಪ್ಲಾನ್‌ಗಳನ್ನು ಕಂಪೇರ್ ಮಾಡಿ ಬೆಸ್ಟ್ ಇನ್ಶೂರೆನ್ಸ್ ಆಯ್ಕೆ ಮಾಡಿಕೊಳ್ಳಿ.

ಕೊನೆಯ ದಿನಾಂಕ ಮರೆಯದಿರಿ

ಅಸೆಸ್ಮೆಂಟ್ ಇಯರ್ 2026-27 ರ ITR ಫೈಲಿಂಗ್ ಆಲ್ರೆಡಿ ಓಪನ್ ಆಗಿದೆ.

  • ಸ್ಯಾಲರಿಡ್ ಎಂಪ್ಲಾಯಿಸ್: ಆಡಿಟ್ ಅಗತ್ಯವಿಲ್ಲದ ಸಾಮಾನ್ಯ ವ್ಯಕ್ತಿಗಳಿಗೆ ಜುಲೈ 31 ಕಡೆ ದಿನಾಂಕ.

  • ಬಿಸಿನೆಸ್ ಮಾಡುವವರಿಗೆ: ಆಡಿಟ್ ಮಾಡಿಸಬೇಕಾದ ಬಿಸಿನೆಸ್ ಪೀಪಲ್ ಗೆ ಸೆಪ್ಟೆಂಬರ್ 30 ರವರೆಗೆ ಟೈಮ್ ಇದೆ.

ಹೊಸ ಟ್ಯಾಕ್ಸ್ ರಿಜೀಮ್ ಡಿಫಾಲ್ಟ್

ಇನ್ನೊಂದು ಮೇಜರ್ ಅಪ್ಡೇಟ್ ಅಂದ್ರೆ, ಈಗ ‘ಹೊಸ ಟ್ಯಾಕ್ಸ್ ರಿಜೀಮ್’ (New Tax Regime) ಅನ್ನೋದು ಡಿಫಾಲ್ಟ್ ಸಿಸ್ಟಮ್ ಆಗಿದೆ.

ಹೀಗಾಗಿ ನೀವೇನಾದ್ರು ಹಳೆ ಟ್ಯಾಕ್ಸ್ ಸಿಸ್ಟಮ್‌ನಲ್ಲಿ ಡಿಡಕ್ಷನ್ ಕ್ಲೈಮ್ ಮಾಡ್ಬೇಕು ಅಂದ್ರೆ ತುಂಬಾ ಹುಷಾರಾಗಿ ಫೈಲ್ ಮಾಡಬೇಕು. ರೂಲ್ಸ್ ತುಂಬಾ ಸ್ಟ್ರಿಕ್ಟ್ ಆಗಿದೆ.

ಇದನ್ನೂ ಓದಿ: Cow Purchase Scheme: ಮಹಿಳೆಯರಿಗೆ ಹಸು ಖರೀದಿಸಲು ಬರೋಬ್ಬರಿ ₹56,700 ಸಹಾಯಧನ ಬಂತು ಹೊಸ ಯೋಜನೆ

ಸರ್ವರ್ ಡೌನ್ ಆಗುವ ಮುನ್ನ ಎಚ್ಚೆತ್ತುಕೊಳ್ಳಿ

ಯಾವುದೇ ಕಾರಣಕ್ಕೂ ಲಾಸ್ಟ್ ಡೇಟ್ ವರೆಗೂ ಕಾಯಬೇಡಿ. ಕೊನೆಯ 48 ಗಂಟೆಗಳಲ್ಲಿ ಈ ಫೈಲಿಂಗ್ ಪೋರ್ಟಲ್‌ಗೆ ವಿಪರೀತ ಟ್ರಾಫಿಕ್ ಬರುತ್ತದೆ. ಎಲ್ಲರೂ ಒಮ್ಮೆಲೇ ಮುಗಿ ಬೀಳುವುದರಿಂದ ಸರ್ವರ್ ಡೌನ್ ಆಗುತ್ತದೆ.

ಆಗ ಫೈಲಿಂಗ್ ಮಾಡೋಕೆ ಆಗದೇ ಇರೋ ರಿಸ್ಕ್ ಕೂಡ ಇರುತ್ತದೆ. ಆದ್ದರಿಂದ ಆದಷ್ಟು ಬೇಗನೆ ನಿಮ್ಮ ITR ಮುಗಿಸಿಕೊಳ್ಳಿ, ದಂಡ ಕಟ್ಟುವುದರಿಂದ ಪಾರಾಗಿ ಮತ್ತು ಟೆನ್ಶನ್ ಫ್ರೀ ಆಗಿರಿ

Leave a Comment