Telegram Join My Telegram WhatsApp Join My WhatsApp

ಭೂರಹಿತ ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್: ಜಮೀನು ಖರೀದಿಸಲು ಸರ್ಕಾರದಿಂದ ಸಿಗಲಿದೆ 25 ಲಕ್ಷ ರೂ. ಆರ್ಥಿಕ ನೆರವು!

ಭೂರಹಿತ ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್: ಜಮೀನು ಖರೀದಿಸಲು ಸರ್ಕಾರದಿಂದ ಸಿಗಲಿದೆ 25 ಲಕ್ಷ ರೂ. ಆರ್ಥಿಕ ನೆರವು!

ಹಗಲಿರುಳು ಬೇರೆಯವರ ಜಮೀನಿನಲ್ಲಿ ಬೆವರು ಸುರಿಸಿ ದುಡಿಯುವ ಕೃಷಿ ಕಾರ್ಮಿಕರಿಗೆ, ತಮ್ಮದೇ ಆದ ಒಂದು ತುಂಡು ಸ್ವಂತ ಜಮೀನು ಇರಬೇಕು ಎನ್ನುವುದು ಅತಿ ದೊಡ್ಡ ಕನಸು. ಅದರಲ್ಲೂ, ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬನೆ ಸಾಧಿಸಲು ಭೂಮಿಯ ಒಡೆತನ ಅತ್ಯಂತ ಅವಶ್ಯಕ.

ನಿಮ್ಮ ಈ ಕನಸನ್ನು ನನಸು ಮಾಡಲು ಇದೀಗ ಭರ್ಜರಿ ಗುಡ್ ನ್ಯೂಸ್ ಹೊರಬಿದ್ದಿದೆ. 2026ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗಾಗಿ ಅತ್ಯುತ್ತಮ ಕೊಡುಗೆಯೊಂದನ್ನು ಘೋಷಿಸಿದೆ. ಹಿಂದಿನಿಂದಲೂ ಜಾರಿಯಲ್ಲಿದ್ದ ಭೂ ಒಡೆತನ ಯೋಜನೆ ಯನ್ನು ಸರ್ಕಾರ ಇದೀಗ ಭಾರಿ ಮಟ್ಟದಲ್ಲಿ ಪರಿಷ್ಕರಿಸಿದೆ.

ಮಾರುಕಟ್ಟೆ ಬೆಲೆಗೆ ತಕ್ಕಂತೆ ಜಮೀನು ಖರೀದಿಸಲು ಅನುಕೂಲವಾಗುವಂತೆ ಸಹಾಯಧನದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದ್ದು, ಬಡ ಕೃಷಿಕರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ.

ಬೆವರು ಸುರಿಸುವವರೇ ಇನ್ಮುಂದೆ ಜಮೀನಿನ ಒಡೆಯರು

ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಬಹುತೇಕ ಕುಟುಂಬಗಳು ಈಗಲೂ ಕೃಷಿ ಕೂಲಿಯನ್ನೇ ನೆಚ್ಚಿಕೊಂಡು ಬದುಕುತ್ತಿವೆ. ತಲೆತಲಾಂತರಗಳಿಂದ ಇವರ ಬಳಿ ಸ್ವಂತ ಜಮೀನು ಇಲ್ಲದ ಕಾರಣ, ಸರ್ಕಾರದಿಂದ ಸಿಗುವ ಅನೇಕ ರೈತಪರ ಸೌಲಭ್ಯಗಳಿಂದಲೂ ಇವರು ವಂಚಿತರಾಗುತ್ತಿದ್ದರು.

ಗ್ರಾಮೀಣ ಭಾಗದ ಈ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಬೇರೆಯವರ ಜಮೀನಿನಲ್ಲಿ ಬೆವರು ಸುರಿಸುವ ಕೃಷಿ ಕಾರ್ಮಿಕರನ್ನೇ ನಿಜವಾದ ಭೂಮಾಲೀಕರನ್ನಾಗಿ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಪ್ರಸ್ತುತ 2026ರ ಸಾಲಿನಲ್ಲಿ ಈ ಯೋಜನೆಗೆ ಹೊಸ ರೂಪ ನೀಡಲಾಗಿದೆ. ಇಂದಿನ ಮಾರುಕಟ್ಟೆ ಬೆಲೆಗೆ ತಕ್ಕಂತೆ ಭೂಮಿ ಖರೀದಿಸಲು ಬೇಕಾದ ಆರ್ಥಿಕ ನೆರವನ್ನು (Financial Assistance) ಸರ್ಕಾರ ಗಣನೀಯವಾಗಿ ಹೆಚ್ಚಿಸಿದ್ದು, ಇದು ಬಡವರ ಸ್ವಂತ ಜಮೀನಿನ ಕನಸಿಗೆ ಜೀವ ತುಂಬಿದೆ.

ಹಿರಿಯ ಮಹಿಳೆಯ ಹೆಸರಿನಲ್ಲೇ ಆಗಲಿದೆ ಜಮೀನು ರಿಜಿಸ್ಟ್ರೇಷನ್!

ದಿನವಿಡೀ ಬೇರೆಯವರ ಹೊಲದಲ್ಲಿ ಬೆವರು ಸುರಿಸಿ ದುಡಿಯುವ ಮಹಿಳಾ ಕೃಷಿ ಕಾರ್ಮಿಕರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ಈ ಬೃಹತ್ ಯೋಜನೆಯ ಅತಿ ದೊಡ್ಡ ಉದ್ದೇಶವಾಗಿದೆ.ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಶೇಷವೆಂದರೆ, ಈ ಯೋಜನೆಯಡಿ ಸರ್ಕಾರದಿಂದ ನೆರವು ಪಡೆದು ಖರೀದಿಸುವ ಜಮೀನು ನೇರವಾಗಿ ಕುಟುಂಬದ ಹಿರಿಯ ಮಹಿಳೆಯ ಹೆಸರಿನಲ್ಲೇ ನೋಂದಣಿ (Registration) ಆಗುತ್ತದೆ.

ಇದರಿಂದ ಹಳ್ಳಿಯ ಬಡ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಒಂದು ವಿಶೇಷ ಗೌರವ ಹಾಗೂ ಆರ್ಥಿಕ ಭದ್ರತೆ ಸಿಗಲಿದೆ. ಪ್ರತಿದಿನ ಕೂಲಿಗಾಗಿ ಬೇರೆಯವರ ಜಮೀನಿಗೆ ಹೋಗುವ ಬದಲು, ತಾವೇ ಸ್ವಂತ ಜಮೀನಿನಲ್ಲಿ ಇಷ್ಟವಾದ ಬೆಳೆ ಬೆಳೆದು, ಸ್ವಾಭಿಮಾನದಿಂದ ನೆಮ್ಮದಿಯ ಜೀವನ ನಡೆಸಲು ಇದೊಂದು ಅತ್ಯುತ್ತಮ ವೇದಿಕೆಯಾಗಲಿದೆ.

ಇದನ್ನೂ ಓದಿ: ಊರಿನ ಗೊಬ್ಬರ, ಹೊಲಕ್ಕ ಬಂಗಾರ! ಕಾಸಿಲ್ಲದೆ ಭೂಮಿತಾಯಿಗೆ ಮರುಜೀವ ನೀಡುವ ಜಬರ್ದಸ್ತ್ ಟ್ರಿಕ್ ಇಲ್ಲಿದೆ ನೋಡ್ರಿ….

ಸೌಲಭ್ಯಗಳು / ಅನುದಾನ ವಿವರಗಳು

ಈ ಯೋಜನೆಯಡಿ ಫಲಾನುಭವಿಗಳಿಗೆ ಎರಡು ಪ್ರಮುಖ ಹಂತಗಳಲ್ಲಿ ಭರ್ಜರಿ ಆರ್ಥಿಕ ನೆರವು ಸಿಗಲಿದೆ

  • ಮೊದಲನೇ ವರ್ಗ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜಮೀನು ಖರೀದಿಸಲು ಒಟ್ಟು 25 ಲಕ್ಷ ರೂ. ನಿಗದಿ ಮಾಡಲಾಗಿದೆ. ಇದರಲ್ಲಿ 12.5 ಲಕ್ಷ ರೂ. ಸಂಪೂರ್ಣ ಉಚಿತ ಸಹಾಯಧನ  ಮತ್ತು ಉಳಿದ 12.5 ಲಕ್ಷ ರೂ. ಸಾಲವಾಗಿ ಸಿಗುತ್ತದೆ.

  • ಎರಡನೇ ವರ್ಗ: ರಾಜ್ಯದ ಉಳಿದ 27 ಜಿಲ್ಲೆಗಳಿಗೆ ಒಟ್ಟು 20 ಲಕ್ಷ ರೂ. ನಿಗದಿಪಡಿಸಲಾಗಿದೆ. ಇಲ್ಲಿ 10 ಲಕ್ಷ ರೂ. ಉಚಿತ ಸಬ್ಸಿಡಿ ಹಾಗೂ ಬಾಕಿ 10 ಲಕ್ಷ ರೂ. ಸಾಲದ ರೂಪದಲ್ಲಿ ದೊರೆಯಲಿದೆ.

  • ಬಡ್ಡಿ ಹಾಗೂ ಮರುಪಾವತಿ: ಸರ್ಕಾರ ನೀಡುವ ಸಾಲದ ಮೊತ್ತಕ್ಕೆ ವಾರ್ಷಿಕ ಕೇವಲ 6% ರಷ್ಟು ಅತ್ಯಲ್ಪ ಬಡ್ಡಿ ಇರುತ್ತದೆ. ಸಾಲವನ್ನು ಒಮ್ಮೇಲೆ ಕಟ್ಟುವ ತಲೆಬಿಸಿ ಇಲ್ಲ, ಬದಲಾಗಿ 10 ರಿಂದ 20 ಕಂತುಗಳಲ್ಲಿ (ಬರೋಬ್ಬರಿ 10 ವರ್ಷಗಳ ಸುದೀರ್ಘ ಅವಧಿಯಲ್ಲಿ) ಆರಾಮಾಗಿ ಮರುಪಾವತಿ ಮಾಡಬಹುದು.

  • ಭೂಮಿಯ ವಿಸ್ತೀರ್ಣ: ಮಳೆ ಆಶ್ರಯದ ಕುಷ್ಕಿ ಜಮೀನು (Dry land) ಆದರೆ ಕನಿಷ್ಠ 2 ಎಕರೆ, ನೀರಾವರಿ ಸೌಲಭ್ಯವಿರುವ ತರಿ ಜಮೀನು (Irrigated land) ಆದರೆ 1 ಎಕರೆ ಹಾಗೂ ತೋಟಗಾರಿಕಾ ಜಮೀನು (Plantation) ಆದರೆ ಕನಿಷ್ಠ 20 ಗುಂಟೆ ಖರೀದಿಸಲು ಅವಕಾಶವಿದೆ.

  • ಉಚಿತ ಬೋರ್‌ವೆಲ್: ಭೂಮಿ ಖರೀದಿಸಿದ ಮೇಲೆ, ಅಲ್ಲಿ ನೀರಿಲ್ಲದಿದ್ದರೆ ಗಂಗಾ ಕಲ್ಯಾಣ ಯೋಜನೆ ಯಡಿ ಸರ್ಕಾರವೇ ಉಚಿತವಾಗಿ ಬೋರ್‌ವೆಲ್ ಕೊರೆಸಿಕೊಡುತ್ತದೆ.

 ಈ ನಿಯಮಗಳನ್ನುಪಾಲಿಸುವವರಿಗೆ ಮಾತ್ರ ಸಿಗಲಿದೆ ಸ್ವಂತ ಜಮೀನು!

ಸರ್ಕಾರ ಇಷ್ಟೊಂದು ದೊಡ್ಡ ಮೊತ್ತದ ಸಹಾಯಧನ ಕೊಡ್ತಿದೆ ಅಂದ್ಮೇಲೆ, ಇದಕ್ಕೆ ನಾವೂ ಅರ್ಜಿ ಹಾಕಬಹುದಾ? ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು ಅಲ್ವಾ?

ಹೌದು, ಈ ಯೋಜನೆಯ ಸೌಲಭ್ಯ ನಿಜವಾದ ಬಡ ಕೃಷಿ ಕಾರ್ಮಿಕರಿಗೆ ತಲುಪಬೇಕು ಅನ್ನೋ ಸದುದ್ದೇಶದಿಂದ, ಸರ್ಕಾರ ಕೆಲವೊಂದು ಪಕ್ಕಾ ನಿಯಮಗಳನ್ನುರೂಪಿಸಿದೆ. ಆ ಷರತ್ತುಗಳು ಹೀಗಿವೆ:

  • ಮೀಸಲಾತಿ ಕಡ್ಡಾಯ: ಅರ್ಜಿ ಸಲ್ಲಿಸುವ ಮಹಿಳೆಯರು ಕಡ್ಡಾಯವಾಗಿ ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡ (ST) ಸಮುದಾಯಕ್ಕೆ ಸೇರಿದವರಾಗಿರಲೇಬೇಕು.

  • ಪಕ್ಕಾ ಭೂರಹಿತರಾಗಿರಬೇಕು: ಮನೆಯಲ್ಲಿ ಗಂಡ, ಮಕ್ಕಳು ಅಥವಾ ಇನ್ಯಾರ ಹೆಸರಲ್ಲೂ ಒಂದು ಗುಂಟೆ ಕೂಡ ಸ್ವಂತ ಜಮೀನು ಇರಬಾರದು. ಕೇವಲ ಕೃಷಿ ಕೂಲಿ (Agricultural Laborers) ಮಾಡಿಕೊಂಡೇ ಬದುಕುತ್ತಿರುವವರು ಮಾತ್ರ ಇದಕ್ಕೆ ಅರ್ಹರು.

  • ನಮ್ಮ ರಾಜ್ಯದವರೇ ಆಗಿರಬೇಕು: ಅರ್ಜಿದಾರರು ನಮ್ಮ ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರುವುದು ಕಡ್ಡಾಯ.

  • ಸರ್ಕಾರಿ ನೌಕರಿ ಇರಬಾರದು: ಅರ್ಜಿ ಹಾಕುವವರ ಕುಟುಂಬದಲ್ಲಿ ಯಾರೇ ಆಗಲಿ, ಸರ್ಕಾರಿ ಅಥವಾ ಅರೆ-ಸರ್ಕಾರಿ (Semi-Govt) ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅಂತವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

  • ಗಮನಿಸಬೇಕಾದ ಅತಿ ಮುಖ್ಯ ನಿಯಮ: ನೀವು ಯಾರಿಂದ ಜಮೀನನ್ನು ಖರೀದಿಸಲು ಮುಂದಾಗಿದ್ದೀರೋ, ಆ ಹೊಲದ ಮೂಲ ಮಾಲೀಕರು ಯಾವುದೇ ಕಾರಣಕ್ಕೂ SC ಅಥವಾ ST ಜಾತಿಗೆ ಸೇರಿದವರಾಗಿರಬಾರದು.

  • ಹತ್ತಿರದಲ್ಲೇ ಇರಬೇಕು ಹೊಲ: ನೀವು ಖರೀದಿಸಲು ಇಚ್ಛಿಸುವ ಜಮೀನು, ನೀವು ವಾಸವಾಗಿರುವ ಊರಿನಿಂದ ಅಥವಾ ಮನೆಯಿಂದ ಗರಿಷ್ಠ 10 ಕಿಲೋಮೀಟರ್ (10 KM) ವ್ಯಾಪ್ತಿಯೊಳಗೇ ಇರಬೇಕು. ದೂರದ ಊರಿನಲ್ಲಿ ಜಮೀನು ತಗೊಳ್ತೀನಿ ಅಂದರೆ ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಸುತ್ತಿದ್ದೀರಾ? ಈ ಕಾಗದ-ಪತ್ರಗಳು ನಿಮ್ಮ ಬಳಿ ಇರಲೇಬೇಕು!

ಸರ್ಕಾರದ ಈ ಬಂಪರ್ ಯೋಜನೆಗೆ ಸುಮ್ಮನೆ ಅರ್ಜಿ ಹಾಕಿದರೆ ಸಾಲದು, ಸರಿಯಾದ ದಾಖಲೆಗಳನ್ನು (Documents) ಒದಗಿಸುವುದು ಬಹಳ ಮುಖ್ಯ. ಅರ್ಜಿ ಸಲ್ಲಿಸಲು ಆನ್‌ಲೈನ್ ಕೇಂದ್ರಕ್ಕೆ ಹೋಗುವ ಮುನ್ನ, ನಿಮ್ಮ ಬಳಿ ಈ ಕೆಳಗಿನ ಎಲ್ಲಾ ಕಾಗದ-ಪತ್ರಗಳು ರೆಡಿ ಇವೆಯಾ ಅಂತ ಒಮ್ಮೆ ಚೆಕ್ ಮಾಡಿಕೊಳ್ಳಿ.

ಇದನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು:

1. ಅರ್ಜಿದಾರರ (ನಿಮ್ಮ) ಸ್ವಂತ ದಾಖಲೆಗಳು:

  • ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್ ಮತ್ತು ಮನೆಯ ರೇಷನ್ ಕಾರ್ಡ್.

  • ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣಪತ್ರ (ಇದರಲ್ಲಿ RD ನಂಬರ್ ಇರುವುದು ಕಡ್ಡಾಯ).

  • ನೀವು ನಿಜವಾಗಿಯೂ ಭೂರಹಿತರು ಎಂಬುದನ್ನು ಸಾಬೀತುಪಡಿಸಲು, ತಹಸೀಲ್ದಾರ್ ಅವರಿಂದ ಪಡೆದ ‘ಭೂಹೀನ ಕೃಷಿ ಕಾರ್ಮಿಕ’ ದೃಢೀಕರಣ ಪತ್ರ.

  • ಸಹಾಯಧನ ಜಮಾ ಆಗಲು ಬ್ಯಾಂಕ್ ಪಾಸ್‌ಬುಕ್‌ನ ಮುಂಭಾಗದ ಜೆರಾಕ್ಸ್.

  • ನೀವೇ ಖುದ್ದಾಗಿ ಸಹಿ ಮಾಡಿದ ಅಥವಾ ಹೆಬ್ಬೆಟ್ಟು ಒತ್ತಿದ ಸ್ವಯಂ ಘೋಷಣಾ ಪತ್ರ (Affidavit).

2. ನೀವು ಖರೀದಿಸಲು ಮುಂದಾಗಿರುವ ಜಮೀನಿನ ದಾಖಲೆಗಳು:

  • ನೀವು ಯಾವ ಜಮೀನು ಖರೀದಿಸುತ್ತೀರೋ, ಆ ಜಾಗದ ಸಂಪೂರ್ಣ ವಿವರ ಮತ್ತು ಒಂದು ಸಣ್ಣ ಪ್ರಾಜೆಕ್ಟ್ ರಿಪೋರ್ಟ್ (Project Report).

  • ಜಮೀನಿನ ಮೂಲ ಮಾಲೀಕರ ವಂಶಾವಳಿ (ಇದಕ್ಕೆ ಗ್ರಾಮ ಲೆಕ್ಕಾಧಿಕಾರಿ ಅಂದರೆ VA ಅವರ ಸಹಿ ಕಡ್ಡಾಯವಾಗಿ ಇರಬೇಕು).

  • ಆ ಜಮೀನಿನ ಮೇಲೆ ಯಾವುದೇ ಸಾಲ, ಕ್ಯಾತೆ ಇಲ್ಲ ಎಂಬುದನ್ನು ಖಚಿತಪಡಿಸುವ ಕಳೆದ 13 ವರ್ಷಗಳ ಇಸಿ (EC).

  • ಜಮೀನು ಮಾರಾಟ ಮಾಡುವ ಮಾಲೀಕರು ಬರೆದುಕೊಟ್ಟ ಒಪ್ಪಿಗೆ ಮುಚ್ಚಳಿಕೆ ಪತ್ರ.

  • ಕೊನೆಯದಾಗಿ, ಜಮೀನಿನ ಗಡಿ ಗುರುತು ಮಾಡಿ ಹಸ್ತಾಂತರಿಸಿರುವ ಬಗ್ಗೆ ಇರುವ ಮಹಜರು ಪ್ರತಿ (Mahazar Copy).

ಅರ್ಜಿ ಸಲ್ಲಿಸುವ ವಿಧಾನ (ಹಂತ ಹಂತವಾಗಿ)

ಅರ್ಹರು ಯಾವುದೇ ಗೊಂದಲವಿಲ್ಲದೆ ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಪ್ರಕ್ರಿಯೆ ಇಲ್ಲಿದೆ:

  • ಹಂತ 1: ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಸೇವಾ ಸಿಂಧು (Seva Sindhu) ಅಧಿಕೃತ ವೆಬ್‌ಸೈಟ್‌ (sevasindhu.karnataka.gov.in) ತೆರೆಯಿರಿ.

  • ಹಂತ 2: ನೀವು ಹೊಸ ಬಳಕೆದಾರರಾಗಿದ್ದರೆ, ಅಗತ್ಯ ಮಾಹಿತಿ ನೀಡಿ ನೋಂದಣಿ (Registration) ಮಾಡಿಕೊಳ್ಳಿ. ಬಳಿಕ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಒಳಪ್ರವೇಶಿಸಿ.

  • ಹಂತ 3: ಅಲ್ಲಿರುವ ‘ಇಲಾಖೆಗಳು ಮತ್ತು ಸೇವೆಗಳು’ ವಿಭಾಗಕ್ಕೆ ಹೋಗಿ, “ಭೂಮಾಲಿಕತ್ವ ಯೋಜನೆ” ಎಂದು ಟೈಪ್ ಮಾಡಿ ಹುಡುಕಿ (Search).

  • ಹಂತ 4: ಯೋಜನೆಯ ಹೆಸರಿನ ಪಕ್ಕದಲ್ಲಿರುವ ‘ಆನ್‌ಲೈನ್‌ನಲ್ಲಿ ಅನ್ವಯಿಸು (Apply Online) ಬಟನ್ ಮೇಲೆ ಕ್ಲಿಕ್ ಮಾಡಿ.

  • ಹಂತ 5: ತೆರೆದುಕೊಳ್ಳುವ ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು, ಆಧಾರ್, ವಿಳಾಸ ಹಾಗೂ ಜಾತಿ/ಆದಾಯ ಪತ್ರದ RD ಸಂಖ್ಯೆಗಳನ್ನು ನಿಖರವಾಗಿ ಭರ್ತಿ ಮಾಡಿ.

  • ಹಂತ 6: ಮೊದಲೇ ಸಿದ್ಧಪಡಿಸಿಕೊಂಡ ಕಡ್ಡಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ (Upload) ಮಾಡಿ.

  • ಹಂತ 7: ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಸರಿಯಾಗಿ ಪರಿಶೀಲಿಸಿಕೊಂಡು ‘ಸಲ್ಲಿಸು’ (Submit) ಬಟನ್ ಒತ್ತಿ. ಅರ್ಜಿ ಸಲ್ಲಿಕೆಯಾದ ನಂತರ ಸಿಗುವ ಸ್ವೀಕೃತಿ ಪತ್ರವನ್ನು (Acknowledgement) ಮುಂದಿನ ಉಲ್ಲೇಖಕ್ಕಾಗಿ ಸುರಕ್ಷಿತವಾಗಿ ಸೇವ್ ಮಾಡಿಕೊಳ್ಳಿ.

ಈ ಯೋಜನೆಯ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? 

ಈಗಾಗಲೇ 2026ನೇ ಸಾಲಿನ ಈ ಬೃಹತ್ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಸದ್ಯಕ್ಕೆ ಅರ್ಜಿ ಸಲ್ಲಿಕೆ ಚಾಲ್ತಿಯಲ್ಲಿದೆ.ಆದರೆ ನೆನಪಿರಲಿ, ಸರ್ಕಾರವು ಪ್ರತಿ ಜಿಲ್ಲೆಗೂ ಇಂತಿಷ್ಟು ಎಂದು ಗುರಿ  ಹಾಗೂ ಅನುದಾನವನ್ನು ಮೊದಲೇ ನಿಗದಿಪಡಿಸಿರುತ್ತದೆ.

ಆ ಗುರಿ ತಲುಪಿದ ತಕ್ಷಣವೇ ಅಥವಾ ಅನುದಾನ ಮುಗಿದ ಕೂಡಲೇ ಅರ್ಜಿ ಸಲ್ಲಿಕೆಯನ್ನು ದಿಢೀರನೆ ನಿಲ್ಲಿಸುವ ಸಾಧ್ಯತೆ ಇರುತ್ತದೆ.ಹೀಗಾಗಿ, ಇನ್ನೂ ಟೈಮ್ ಇದೆ ಬಿಡು ಎಂದು ನಿರ್ಲಕ್ಷ್ಯ ಮಾಡದೆ, ಆದಷ್ಟು ಬೇಗ ಅಗತ್ಯ ದಾಖಲೆಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಇಂದೇ ಅರ್ಜಿ ಹಾಕುವುದು ಜಾಣತನ.

ಕೇವಲ ಯೋಜನೆಯಲ್ಲ, ಬಡವರ ಬದುಕನ್ನೇ ಬದಲಾಯಿಸುವ ಕ್ರಾಂತಿ!

ಮೇಲ್ನೋಟಕ್ಕೆ ಇದೊಂದು ಸಾಧಾರಣ ಆರ್ಥಿಕ ನೆರವಿನ ಕಾರ್ಯಕ್ರಮದಂತೆ ಕಂಡರೂ, ವಾಸ್ತವದಲ್ಲಿ ಇದೊಂದು ಗ್ರಾಮೀಣ ಮಟ್ಟದ ಅತಿದೊಡ್ಡ ಸಾಮಾಜಿಕ ಕ್ರಾಂತಿ.ತಲೆತಲಾಂತರಗಳಿಂದ ಪರರ ಜಮೀನಿನಲ್ಲಿ ಬೆವರು ಸುರಿಸುತ್ತಿದ್ದ ಶೋಷಿತ ಮತ್ತು ಬಡ ಸಮುದಾಯಗಳಿಗೆ, ತಮ್ಮದೇ ಆದ ಸ್ವಂತ ನೆಲೆ ಕಲ್ಪಿಸಿಕೊಡುವುದು ಈ ಯೋಜನೆಯ ಅತಿದೊಡ್ಡ ಸಾಧನೆ.

ಅದರಲ್ಲೂ ವಿಶೇಷವಾಗಿ, ಖರೀದಿಸುವ ಜಮೀನು ನೇರವಾಗಿ ಮನೆಯ ಮಹಿಳೆಯರ ಹೆಸರಿನಲ್ಲಿಯೇ ರಿಜಿಸ್ಟರ್  ಆಗುವುದರಿಂದ, ಇದು ನಮ್ಮ ಹಳ್ಳಿಗಳಲ್ಲಿ ನಿಜವಾದ ಮಹಿಳಾ ಸಬಲೀಕರಣಕ್ಕೆ  ಮುನ್ನುಡಿ ಬರೆಯಲಿದೆ. ಕೃಷಿ ಕಾರ್ಮಿಕ ಮಹಿಳೆಯರು ಸ್ವಂತ ಕಾಲಿನ ಮೇಲೆ ನಿಲ್ಲಲು ಇದು ಭದ್ರ ಬುನಾದಿಯಾಗಿದೆ.

ಸುವರ್ಣಾವಕಾಶ ಕೈತಪ್ಪುವ ಮುನ್ನ ಇಂದೇ ಅರ್ಜಿ ಸಲ್ಲಿಸಿ

ಒಂದು ತುಂಡು ಜಮೀನಿಗಾಗಿ ದಶಕಗಳಿಂದ ಕನಸು ಕಾಣುತ್ತಿರುವ ಮಹಿಳಾ ಕೃಷಿ ಕಾರ್ಮಿಕರಿಗೆ, ಇದಕ್ಕಿಂತ ದೊಡ್ಡ ಸುವರ್ಣಾವಕಾಶ ಮತ್ತೊಂದಿಲ್ಲ.ಮೇಲೆ ನಾವು ತಿಳಿಸಿದ ಎಲ್ಲಾ ಅರ್ಹತೆಗಳು ಮತ್ತು ಕಾಗದ-ಪತ್ರಗಳು ನಿಮ್ಮ ಬಳಿ ಇದ್ದರೆ, ವಿಳಂಬ ಮಾಡದೆ ನಿಮ್ಮ ಹತ್ತಿರದ ‘ಗ್ರಾಮ ಒನ್’ (Grama One) ಕೇಂದ್ರ ಅಥವಾ ಆನ್‌ಲೈನ್ ಸೆಂಟರ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಈ ಯೋಜನೆ ಬಗ್ಗೆ ನಿಮಗೆ ಇನ್ನೇನಾದರೂ ಗೊಂದಲಗಳಿದ್ದರೆ, ಸರ್ಕಾರದ ಅಧಿಕೃತ ಸಹಾಯವಾಣಿ ಸಂಖ್ಯೆ 9482300400 ಗೆ ನೇರವಾಗಿ ಕರೆ ಮಾಡಿ ನಿಖರವಾದ ಮಾಹಿತಿಯನ್ನು ಪಡೆಯಬಹುದು.

ಮತ್ತೊಂದು ಮುಖ್ಯವಾದ ವಿಚಾರವೆಂದರೆ, ಇಂತಹ ಸರ್ಕಾರದ ಉಪಯುಕ್ತ ಮಾಹಿತಿಗಳು ಹಳ್ಳಿಯ ಮೂಲೆ ಮೂಲೆಯಲ್ಲಿರುವ ನಿಜವಾದ ಭೂರಹಿತ ಬಡ ಕೃಷಿಕರಿಗೆ ತಲುಪಬೇಕು. ಹೀಗಾಗಿ ಮಾಹಿತಿ ಸಂಚಾರಿ ಓದುಗರಾದ ನೀವು, ಈ ಲೇಖನವನ್ನು ನಿಮ್ಮೂರಿನ ವಾಟ್ಸಾಪ್ ಗ್ರೂಪ್‌ಗಳಲ್ಲಿ (WhatsApp Groups) ತಪ್ಪದೆ ಶೇರ್ ಮಾಡಿ. ನಿಮ್ಮ ಒಂದು ಶೇರ್, ಬಡ ಕುಟುಂಬವೊಂದರ ಪಾಲಿಗೆ ದೊಡ್ಡ ಆಸರೆಯಾಗಬಹುದು!

Leave a Comment