ಉದ್ಯೋಗಿನಿ ಯೋಜನೆ 2026: ಮಹಿಳೆಯರಿಗೆ ಉದ್ಯಮ ಆರಂಭಿಸಲು ₹3 ಲಕ್ಷವರೆಗೆ ಸಾಲ ಮತ್ತು ಸಬ್ಸಿಡಿ
ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಸರ್ಕಾರದ ಬಲವಾದ ಹೆಜ್ಜೆ
ಇಂದು ಅನೇಕ ಮಹಿಳೆಯರು “ನನಗೂ ಒಂದು ಸ್ವಂತ ಕೆಲಸ ಇರಬೇಕು, ನನ್ನ ಕಾಲಿನ ಮೇಲೆ ನಾನೇ ನಿಲ್ಲಬೇಕು” ಎಂದು ಕನಸು ಕಾಣುತ್ತಾರೆ. ಆದರೆ ಆ ಕನಸಿಗೆ ದೊಡ್ಡ ಅಡ್ಡಗೋಡೆಯಾಗುವುದು ಹಣಕಾಸಿನ ಕೊರತೆ. ಇದೇ ಸಮಸ್ಯೆಗೆ ಪರಿಹಾರವಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಯೇ ಉದ್ಯೋಗಿನಿ ಯೋಜನೆ.
ಈ ಯೋಜನೆಯ ಮೂಲಕ ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಿ ಸಬಲರಾಗಲು ಸರ್ಕಾರ ನೇರವಾಗಿ ಬೆಂಬಲ ನೀಡುತ್ತದೆ. ಗ್ರಾಮೀಣವಾಗಲಿ, ನಗರವಾಗಲಿ – ಹಿಂದುಳಿದ ಪ್ರದೇಶಗಳ ಮಹಿಳೆಯರಿಗೆ ಇದು ಹೊಸ ಬದುಕಿನ ದಾರಿ ತೆರೆದಿದೆ,ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ತಮ್ಮ ಕುಟುಂಬಗಳೊಂದಿಗೆ ಜೀವನಬಂಡಿಯನ್ನು ಒಂದು ದಡಕ್ಕೆ ನಿಲ್ಲಿಸುವಲ್ಲಿ ಈ ಒಂದು ಯೋಜನೆ ಸಹಾಯಕಾರಿಯಾಗಿದೆ.
ಈ ಯೋಜನೆಯ ಉದ್ದೇಶ ಏನು?
ಸರಳವಾಗಿ ಹೇಳಬೇಕು ಅಂದ್ರೆ, ಮಹಿಳೆಯರು ಖಾಸಗಿ ಸಾಲಗಾರರ ಬಳಿ ಹೆಚ್ಚಿನ ಬಡ್ಡಿಗೆ ಹಣ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯನ್ನು ತಪ್ಪಿಸುವುದೇ ಈ ಯೋಜನೆಯ ಉದ್ದೇಶ.
ಕಡಿಮೆ ಬಡ್ಡಿಯ ಬ್ಯಾಂಕ್ ಸಾಲ, ಅದಕ್ಕೆ ಜೊತೆಗೆ ಸರ್ಕಾರದಿಂದ ಸಬ್ಸಿಡಿ – ಇದುವೇ ಈ ಯೋಜನೆಯ ಪ್ರಮುಖ ಶಕ್ತಿ. ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸಿ, ಸ್ವಂತ ಆದಾಯದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಲು ತುಂಬಾ ಸಹಾಯಕಾರಿಯಾಗಿದೆ
ಈ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಯೋಜನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿದೆ. ವಾಣಿಜ್ಯ ಬ್ಯಾಂಕುಗಳು, ಜಿಲ್ಲಾ ಸಹಕಾರಿ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮೂಲಕ ಸಾಲ ವಿತರಣೆ ಮಾಡಲಾಗುತ್ತದೆ.
ಸಣ್ಣ ವ್ಯಾಪಾರ ಅಥವಾ ಸೇವಾ ವಲಯದಲ್ಲಿ ಉದ್ಯಮ ಆರಂಭಿಸಲು ಇಚ್ಛಿಸುವ ಮಹಿಳೆಯರಿಗೆ ಇದು ಅತ್ಯಂತ ಉಪಯುಕ್ತ ಯೋಜನೆ.
ಯಾವ ರೀತಿಯ ಉದ್ಯಮಗಳಿಗೆ ಸಹಾಯ ಸಿಗುತ್ತದೆ?
ಉದ್ಯೋಗಿನಿ ಯೋಜನೆಯಡಿ ಮನೆಯಲ್ಲಿಯೇ ಆರಂಭಿಸಬಹುದಾದ ಹಲವು ಉದ್ಯಮಗಳಿಗೆ ಅವಕಾಶ ಇದೆ. ಉದಾಹರಣೆಗೆ:
-
ಪಾಪಡ್, ಉಪ್ಪಿನಕಾಯಿ, ಜಾಮ್–ಜೆಲ್ಲಿ ತಯಾರಿಕೆ
-
ಬುಕ್ ಬೈಂಡಿಂಗ್, ನೋಟ್ಬುಕ್ ತಯಾರಿಕೆ
-
ಹೊಲಿಗೆ, ಕಸೂತಿ, ಸೀರೆ ಕೆಲಸ
-
ಬಟ್ಟೆ ಮುದ್ರಣ, ಬಣ್ಣ ಕೆಲಸ
-
ಉಣ್ಣೆ ನೇಯ್ಗೆ, ಸೀಮೆಸುಣ್ಣ–ಕ್ರೇಯಾನ್ ನಿರ್ಮಾಣ
ಇವುಗಳಂತಹ ಉದ್ಯಮಗಳನ್ನು ಮಹಿಳೆಯರು ಮನೆಯಲ್ಲೇ ನಡೆಸಿ ಆದಾಯ ಗಳಿಸಬಹುದು.
ಸಾಲ ಮತ್ತು ಸಬ್ಸಿಡಿ ವಿವರಗಳು ಈ ಕೆಳಗಿನಂತಿವೆ
-
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಮಹಿಳೆಯರಿಗೆ
-
₹1 ಲಕ್ಷದಿಂದ ₹3 ಲಕ್ಷವರೆಗೆ ಘಟಕ ವೆಚ್ಚ
-
ಸಾಲದ ಮೊತ್ತದ 50% ವರೆಗೆ ಸಬ್ಸಿಡಿ
-
ಕುಟುಂಬ ವಾರ್ಷಿಕ ಆದಾಯ ₹2 ಲಕ್ಷದೊಳಗೆ ಇರಬೇಕು
-
-
ಸಾಮಾನ್ಯ ಮತ್ತು ವಿಶೇಷ ವರ್ಗದ ಮಹಿಳೆಯರಿಗೆ
-
ಗರಿಷ್ಠ ₹3 ಲಕ್ಷ ಘಟಕ ವೆಚ್ಚ
-
30% ಅಥವಾ ಗರಿಷ್ಠ ₹90,000 ಸಬ್ಸಿಡಿ
-
ಆಯ್ಕೆಯಾದ ಮಹಿಳೆಯರಿಗೆ ಅಗತ್ಯವಿದ್ದರೆ ಉದ್ಯಮಾಭಿವೃದ್ಧಿ ತರಬೇತিও ನೀಡಲಾಗುತ್ತದೆ.
ಪ್ರಮುಖ ಸೂಚನೆಗಳು
-
ಯಾವುದೇ ನಿಗದಿತ ಕೊನೆಯ ದಿನಾಂಕ ಇಲ್ಲ
-
ವರ್ಷದ ಯಾವುದೇ ಸಮಯದಲ್ಲೂ ಅರ್ಜಿ ಸಲ್ಲಿಸಬಹುದು
-
ಜಿಲ್ಲೆಯ ಗುರಿ ಪೂರ್ಣವಾದರೆ ತಾತ್ಕಾಲಿಕವಾಗಿ ಅರ್ಜಿ ಸ್ಥಗಿತವಾಗಬಹುದು
-
ಏಪ್ರಿಲ್ ರಿಂದ ಡಿಸೆಂಬರ್ ಒಳಗೆ ಅರ್ಜಿ ಸಲ್ಲಿಸುವುದು ಉತ್ತಮ
ಯಾರೆಲ್ಲ ಅರ್ಜಿ ಹಾಕಬಹುದು ಇಲ್ಲಿ ತಿಳಿದುಕೊಳ್ಳಿ
-
ಅರ್ಜಿದಾರರು ಮಹಿಳೆಯಾಗಿರಬೇಕು
-
ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
-
ವಯಸ್ಸು 18 ರಿಂದ 55 ವರ್ಷಗಳ ನಡುವೆ
-
ಸಾಮಾನ್ಯ ವರ್ಗದವರಿಗೆ ಕುಟುಂಬ ಆದಾಯ ₹1.5 ಲಕ್ಷದೊಳಗೆ
-
ವಿಧವೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಆದಾಯ ಮಿತಿ ಇಲ್ಲ
-
ಹಿಂದಿನ ಯಾವುದೇ ಬ್ಯಾಂಕ್ ಸಾಲ ಬಾಕಿ ಉಳಿದಿರಬಾರದು
ಯಾರಿಗೆಲ್ಲ ಮೊದಲ ಆದ್ಯತೆ?
ಅತ್ಯಂತ ಬಡವರು, ವಿಧವೆಯರು, ನಿರ್ಗತಿಕರು ಹಾಗೂ ಅಂಗವಿಕಲ ಮಹಿಳೆಯರಿಗೆ ಮೊದಲ ಆದ್ಯತೆ ಸಿಗುತ್ತದೆ.
ಸ್ವಶಕ್ತಿ, ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ಹಾಗೂ ತರಬೇತಿ ಪಡೆದ ಮಹಿಳೆಯರಿಗೆ ಹೆಚ್ಚುವರಿ ಲಾಭ ದೊರೆಯುತ್ತದೆ.
ಇದನ್ನುಓದಿ SBI CBO ನೇಮಕಾತಿ 2026: ಸರ್ಕಾರಿ ಬ್ಯಾಂಕ್ ಉದ್ಯೋಗದ ಕನಸಿಗೆ ಸ್ಪಷ್ಟ ದಾರಿ
ಈ ಯೋಜನೆಗೆ ಅರ್ಜಿ ಹೇಗೆ ಹಾಕಬೇಕು ಎಂದು ವಿವರಿಸಲಾಗಿದೆ (ಸರಳ ಹಂತಗಳಲ್ಲಿ)
ಹಂತ 1: ಉದ್ಯಮ ಆಯ್ಕೆ
ಮೊದಲು ನೀವು ಆರಂಭಿಸಬೇಕಾದ ಉದ್ಯಮವನ್ನು ಸ್ಪಷ್ಟವಾಗಿ ನಿರ್ಧರಿಸಿ. ಅದು ಲಾಭದಾಯಕವಾಗಿರಬೇಕು ಮತ್ತು ಸ್ಥಳೀಯ ಮಾರುಕಟ್ಟೆಗೆ ಹೊಂದಿಕೊಳ್ಳಬೇಕು,ನಿಮ್ಮ ಮನೆಯಲ್ಲಿಯೇ ತಯಾರಿಸುವ ವಸ್ತುಗಳಾಗಿರಬೇಕು ಉದಾ: ಪಾಪಡ್ ತಯಾರಿಕೆ, ಉಪ್ಪಿನಕಾಯಿ ಉತ್ಪಾದನೆ, ಕಸೂತಿ,ಊದಬತ್ತಿ ತಯಾರಿಕೆ, ಮೇಣದ ಬತ್ತಿ ತಯಾರಿಕೆ ಮುಂತಾದವುಗಳು.
ಹಂತ 2: ಯೋಜನಾ ವರದಿ (DPR)
ಉದ್ಯಮದ ವೆಚ್ಚ, ಸಾಧನಗಳು, ಲಾಭಾಂಶ ಮತ್ತು ಮರುಪಾವತಿ ಸಾಮರ್ಥ್ಯವನ್ನು ಒಳಗೊಂಡ ವರದಿ ತಯಾರಿಸಬೇಕು. ಇದು ಬ್ಯಾಂಕ್‌ಗೆ ಬಹಳ ಮುಖ್ಯ.
ಹಂತ 3: ಅರ್ಜಿ ನಮೂನೆ
1.ಹತ್ತಿರದ ವಾಣಿಜ್ಯ ಬ್ಯಾಂಕ್ ಶಾಖೆಜಿಲ್ಲಾ ಸಹಕಾರಿ ಬ್ಯಾಂಕ್
2.ಪ್ರಾದೇಶಿಕ ಗ್ರಾಮೀಣ ಬ್ಯಾಂಕ್
3.ಉಪ ನಿರ್ದೇಶಕರ ಕಚೇರಿ ಅಥವಾ ಸಿಡಿಪಿಒ ಕಚೇರಿ
4.ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧಿಕೃತ ಜಾಲತಾಣ
ಅರ್ಜಿ ನಮೂನೆಯನ್ನು ಸರಿಯಾಗಿ ಓದಿ, ಯಾವುದೇ ತಪ್ಪಿಲ್ಲದೆ ಭರ್ತಿ ಮಾಡುವುದು ಅಗತ್ಯ.
ಹಂತ 4: ಅರ್ಜಿ ಭರ್ತಿ
ಅರ್ಜಿ ನಮೂನೆಯಲ್ಲಿ ವೈಯಕ್ತಿಕ ಮಾಹಿತಿ, ಕುಟುಂಬದ ಆದಾಯ ವಿವರ, ಆಯ್ಕೆ ಮಾಡಿದ ಉದ್ಯಮದ ಮಾಹಿತಿ ಮತ್ತು ಸಾಲದ ಮೊತ್ತವನ್ನುತಪ್ಪದೆ ಅರ್ಜಿಯಲ್ಲಿ ಬರೆಯಬೇಕು, ನಂತರ ಬೇಕಾಗಿರುವ ಕಾಗದಗಳನ್ನು ಅರ್ಜಿಯೊಂದಿಗೆ ಜೋಡಿಸಬೇಕು. ಎಲ್ಲಾ ಕಾಗದಗಳು ಸ್ಪಷ್ಟವಾಗಿರಬೇಕು ಮತ್ತು ನಕಲು ಪ್ರತಿಗಳು ಸರಿಯಾಗಿರಬೇಕು.
ಹಂತ 5: ಬ್ಯಾಂಕ್‌ಗೆ ಸಲ್ಲಿಕೆ
ಸರಿಯಾಗಿ ತುಂಬಿದ ಅರ್ಜಿ ನಮೂನೆ ಮತ್ತು ಕಾಗದಗಳೊಂದಿಗೆ ಹತ್ತಿರದ ಬ್ಯಾಂಕ್ ಅಥವಾ ಕೆಎಸ್ಎಫ್ಸಿ ಶಾಖೆಗೆ ಅರ್ಜಿ ಸಲ್ಲಿಸಬೇಕು. ಬ್ಯಾಂಕ್ ಅಧಿಕಾರಿಗಳು ಅರ್ಜಿಯನ್ನು ಸ್ವೀಕರಿಸಿ ಪ್ರಥಮ ಹಂತದ ಪರಿಶೀಲನೆ ನಡೆಸುತ್ತಾರೆ. ಅರ್ಜಿಕೊಟ್ಟವರ ಅರ್ಹತೆ ಮತ್ತು ಯೋಜನೆಯ ಯೋಗ್ಯತೆಯನ್ನು ಈ ಹಂತದಲ್ಲಿಪರಿಶೀಲನೆ ಮಾಡಲಾಗುತ್ತದೆ.
ಹಂತ 6: ಪರಿಶೀಲನೆ
ಬ್ಯಾಂಕ್ ಅಧಿಕಾರಿಗಳು ಅಗತ್ಯಬಿದ್ದರೆ ಅರ್ಜಿದಾರರ ಮನೆ ಅಥವಾ ಉದ್ಯಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬಹುದು. ಯೋಜನಾ ವರದಿ, ಆದಾಯ ಪ್ರಮಾಣಪತ್ರ ಮತ್ತು ಸಾಲ ಮರುಪಾವತಿ ಸಾಮರ್ಥ್ಯವನ್ನು ಇಲ್ಲಿ ಪರಿಶೀಲನೆ ಮಾಡುತ್ತಾರೆ, ಈ ಹಂತದಲ್ಲಿ ಯಾವುದೇ ತಪ್ಪು ಮಾಹಿತಿ ಇದ್ದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ.
ಹಂತ 7: ಸಬ್ಸಿಡಿ ಶಿಫಾರಸು
ಬ್ಯಾಂಕ್ ಅರ್ಜಿಯನ್ನು ಅನುಮೋದಿಸಿದ ನಂತರ, ಸಬ್ಸಿಡಿ ಬಿಡುಗಡೆಗಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಶಿಫಾರಸು ಪತ್ರವನ್ನು ಕಳುಹಿಸುತ್ತದೆ. ನಿಗಮವು ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಬ್ಸಿಡಿ ಮಂಜೂರು ಮಾಡುತ್ತದೆ.
ಹಂತ 8: ಹಣ ಬಿಡುಗಡೆ
ಸಬ್ಸಿಡಿ ಮಂಜೂರಾದ ಬಳಿಕ ಸಾಲದ ಮೊತ್ತ ಖಾತೆಗೆ ಜಮಾ ಆಗುತ್ತದೆ.
ಹಂತ 9: ಉದ್ಯಮ ಆರಂಭ
ಉದ್ಯಮ ಆರಂಭಿಸಿ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ಮಾಹಿತಿ
-
ಕೊನೆಯ ದಿನಾಂಕ ಇಲ್ಲ
-
ವರ್ಷದ ಯಾವುದೇ ಸಮಯದಲ್ಲೂ ಅರ್ಜಿ ಹಾಕಬಹುದು
-
ಏಪ್ರಿಲ್–ಡಿಸೆಂಬರ್ ನಡುವೆ ಅರ್ಜಿ ಹಾಕುವುದು ಉತ್ತಮ
-
ಜಿಲ್ಲಾ ಗುರಿ ತುಂಬಿದರೆ ತಾತ್ಕಾಲಿಕವಾಗಿ ಅರ್ಜಿ ಸ್ಥಗಿತವಾಗಬಹುದು
ಬೇಕಾಗುವ ದಾಖಲೆಗಳ ಪಟ್ಟಿ
-
ಪಾಸ್ಪೋರ್ಟ್ ಗಾತ್ರದ ಫೋಟೋ
-
ಆದಾಯ ಮತ್ತು ಜಾತಿ ಪ್ರಮಾಣಪತ್ರ
-
ಗುರುತಿನ ಚೀಟಿ
-
ಯೋಜನಾ ವರದಿ
-
ತರಬೇತಿ / ಅನುಭವ ಪ್ರಮಾಣಪತ್ರ (ಇದ್ದರೆ)
ಗ್ರಾಮೀಣ ಮಹಿಳೆಯರಿಗೆ ಆಶಾಕಿರಣ
ಉದ್ಯೋಗಿನಿ ಯೋಜನೆ ಮಹಿಳೆಯರಿಗೆ ಕೇವಲ ಸಾಲವಲ್ಲ, ಹೊಸ ಬದುಕಿನ ಅವಕಾಶ. ಸ್ವಂತ ಉದ್ಯಮ ಆರಂಭಿಸುವ ಕನಸಿದ್ದರೆ ಈ ಯೋಜನೆ ನಿಮ್ಮ ಪಾಲಿಗೆ ದೊಡ್ಡ ನೆರವಾಗಬಹುದು. ಸರ್ಕಾರದ ಈ ಬೆಂಬಲವನ್ನು ಸರಿಯಾಗಿ ಬಳಸಿಕೊಂಡರೆ ಮಹಿಳೆಯರು ಸ್ವಾವಲಂಬಿಗಳಾಗಿ ಕುಟುಂಬ ಮತ್ತು ಸಮಾಜ ಎರಡಕ್ಕೂ ಶಕ್ತಿ ನೀಡಬಹುದು.