Telegram Join My Telegram WhatsApp Join My WhatsApp

About Us

ನಮ್ಮಬಗ್ಗೆ

ನಮಸ್ಕಾರ, ನಾನು N B REDDY

ನಾನೇನು ದೊಡ್ಡ ಸಾಹಿತಿಯಲ್ಲ ಅಥವಾ ಅತಿರಥ ಮಹಾರಥ ಬರಹಗಾರನೂ ಅಲ್ಲ. ಹಳ್ಳಿಯ ಮಣ್ಣಿನಲ್ಲಿ ಹುಟ್ಟಿ, ಜನರ ಕಷ್ಟ-ಸುಖಗಳನ್ನು ಕಣ್ಣಾರೆ ಕಂಡು ಬೆಳೆದ ಸಾಮಾನ್ಯ ಕನ್ನಡಿಗ. ನಮ್ಮೂರಿನ ಕನ್ನಡ ಶಾಲೆಯಲ್ಲಿ ಅ ಆ ಕಲಿತು, ಪಕ್ಕದೂರಿಗೆ ದಿನಾಲೂ ಎದ್ನೋ ಬಿದ್ನೋ ಅಂತ ಕಾಲ್ನಡಿಗೆಯಲ್ಲೇ ಹೋಗಿ ಪ್ರೌಢ ಶಿಕ್ಷಣ ಮುಗಿಸಿದವನು.

ನಾನು ಮನೆಯವರ ಒತ್ತಾಯಕ್ಕೆ ಪದವಿ ಪಡೆದರೂ, ನನ್ನ ಮನಸ್ಸು ಮಾತ್ರ ಯಾವತ್ತೂ ತುಡಿಯುತ್ತಿದ್ದುದು ನಮ್ಮ ಕನ್ನಡ ಭಾಷೆಗಾಗಿ.ನಮ್ಮ ಜನರಿಗೆ ಸರ್ಕಾರದ ಯೋಜನೆಗಳಾಗಲಿ ಅಥವಾ ಇನ್ಯಾವುದೇ ಉಪಯುಕ್ತ ಮಾಹಿತಿಯಾಗಲಿ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿತ್ತು.

ಇದೇ ಕಾರಣಕ್ಕೆ, ಕನ್ನಡಿಗರಿಗಾಗಿಯೇ ಒಂದು ಸ್ಪಷ್ಟ ಹಾಗೂ ನಿಖರವಾದ ವೇದಿಕೆಯನ್ನು ಸೃಷ್ಟಿಸಬೇಕೆಂಬ ಹಂಬಲದಿಂದ ಹುಟ್ಟಿಕೊಂಡಿದ್ದೇ ಈ ಮಾಹಿತಿ ಸಂಚಾರಿ.

ಏನಿದು ಮಾಹಿತಿ ಸಂಚಾರಿ

ಮಾಹಿತಿ ಸಂಚಾರಿ ಎಂಬುದು ಕೇವಲ ಒಂದು ವೆಬ್‌ಸೈಟ್ ಅಲ್ಲಇದು ಸಾರ್ವಜನಿಕರಿಗೆ ಅಗತ್ಯವಿರುವ ವಿವರಗಳನ್ನು ಪಾರದರ್ಶಕವಾಗಿ ಮತ್ತು ಜವಾಬ್ದಾರಿಯುತವಾಗಿ ತಲುಪಿಸುವ ಒಂದು ಸ್ವತಂತ್ರ ಡಿಜಿಟಲ್ ವೇದಿಕೆ. ಸಾಮಾನ್ಯ ನಾಗರಿಕರಿಗೂ ಸುಲಭವಾಗಿ ಅರ್ಥವಾಗುವಂತೆ, ಸರಳ ಕನ್ನಡದಲ್ಲಿ ಮಾಹಿತಿ ನೀಡುವುದೇ ನಮ್ಮ ಪ್ರಧಾನ ಉದ್ದೇಶ.

ನಾವು ಏನೆಲ್ಲಾ ಮಾಹಿತಿ ನೀಡುತ್ತೇವೆ

ನಮ್ಮ ವೇದಿಕೆಯಲ್ಲಿ ನೀವು ಕೆಳಕಂಡ ವಿಷಯಗಳ ಬಗ್ಗೆ ನಿಖರವಾದ ವಿವರಗಳನ್ನು ಪಡೆಯಬಹುದು:

  • ಸರ್ಕಾರಿ ಯೋಜನೆಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಹೊಸ ಅಧಿಸೂಚನೆಗಳು.

  • ಉದ್ಯೋಗಾವಕಾಶ: ಉದ್ಯೋಗ ವಾರ್ತೆ, ನೇಮಕಾತಿ ಪರೀಕ್ಷೆಗಳು ಮತ್ತು ಫಲಿತಾಂಶಗಳ ಅಪ್‌ಡೇಟ್ಸ್.

  • ಕೃಷಿ ಮಾಹಿತಿ: ಹಳ್ಳಿಯ ಬದುಕಿನ ಬೆನ್ನೆಲುಬಾದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ಹೊಸ ಹಾದಿಗಳು.

  • ಹಣಕಾಸು ಮಾರ್ಗದರ್ಶನ: ಬ್ಯಾಂಕಿಂಗ್, ತೆರಿಗೆ ಮತ್ತು ಉಳಿತಾಯದ ಕುರಿತು ಸರಳ ಸೂತ್ರಗಳು.

  • ಸಾರ್ವಜನಿಕ ಹಿತಾಸಕ್ತಿ: ನಾಗರಿಕರಿಗೆ ನಿತ್ಯ ಬದುಕಿನಲ್ಲಿ ನೆರವಾಗುವ ಸಾಮಾನ್ಯ ಮಾಹಿತಿ ಹಾಗೂ ಪ್ರಕಟಣೆಗಳು.

ನಮ್ಮ ಮಾಹಿತಿ ಎಷ್ಟು ವಿಶ್ವಾಸಾರ್ಹ

ಇಂದಿನ ಡಿಜಿಟಲ್ ಯುಗದಲ್ಲಿ ತಪ್ಪು ಮಾಹಿತಿಗಳ ಹಾವಳಿ ಹೆಚ್ಚು. ಆದರೆ ‘ಮಾಹಿತಿ ಸಂಚಾರಿ’ಯಲ್ಲಿ ಪ್ರಕಟವಾಗುವ ಪ್ರತಿಯೊಂದು ಲೇಖನವೂ ಅಧಿಕೃತ ಸರ್ಕಾರಿ ಪ್ರಕಟಣೆಗಳು ಮತ್ತು ವಿಶ್ವಾಸಾರ್ಹ ಮೂಲಗಳ ಆಧಾರದ ಮೇಲೆಯೇ ಸಿದ್ಧವಾಗುತ್ತದೆ.

ನಮ್ಮ ಬದ್ಧತೆ ಹೀಗಿದೆ:

  1. ನಿಖರತೆ: ಪ್ರತಿಯೊಂದು ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಕಟಿಸುತ್ತೇವೆ.

  2. ಸರಳತೆ: ಎಂತಹ ಸಂಕೀರ್ಣ ವಿಷಯವನ್ನಾದರೂ ಸಾಮಾನ್ಯರಿಗೂ ಅರ್ಥವಾಗುವ ಕನ್ನಡದಲ್ಲಿ ಕಟ್ಟಿಕೊಡುತ್ತೇವೆ.

  3. ನೈಜತೆ: ಯಾವುದೇ ವದಂತಿ ಅಥವಾ ಸುಳ್ಳು ಸುದ್ದಿಗಳಿಗೆ ನಮ್ಮಲ್ಲಿ ಜಾಗವಿಲ್ಲ.

ನಮ್ಮಗುರಿ ಮತ್ತು ಉದ್ದೇಶ

ನಾಗರಿಕರು ಮಾಹಿತಿ ಕೊರತೆಯಿಂದ ಯಾವುದೇ ಸೌಲಭ್ಯದಿಂದ ವಂಚಿತರಾಗಬಾರದು ಎಂಬುದು ನನ್ನ ಆಶಯ. ಮಾಹಿತಿ ಆಧಾರಿತ ನಿರ್ಧಾರಗಳನ್ನು ಕೈಗೊಳ್ಳಲು ನಮ್ಮ ಜನರಿಗೆ ಸಹಾಯ ಮಾಡುವುದು ಮತ್ತು ಒಂದು ಜವಾಬ್ದಾರಿಯುತ ಮಾಹಿತಿ ವೇದಿಕೆಯಾಗಿ ನಿಲ್ಲುವುದು ‘ಮಾಹಿತಿ ಸಂಚಾರಿ’ಯ ಪರಮ ಗುರಿ.

ಓದುಗರಿಗಾಗಿ ಒಂದು ಸಣ್ಣ ಸೂಚನೆ: ನಾವು ಮಾಹಿತಿ ನೀಡುವ ಉದ್ದೇಶದಿಂದ ಈ ವೇದಿಕೆಯನ್ನು ನಡೆಸುತ್ತಿದ್ದೇವೆ. ಇದು ಯಾವುದೇ ಸರ್ಕಾರಿ ಇಲಾಖೆಯ ಅಧಿಕೃತ ಜಾಲತಾಣವಲ್ಲ. ನಾವು ಮಾಹಿತಿಯನ್ನು ಅಧಿಕೃತ ಮೂಲಗಳಿಂದಲೇ ಸಂಗ್ರಹಿಸಿದರೂ, ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಆಯಾ ಇಲಾಖೆಯ ಅಧಿಕೃತ ಪ್ರಕಟಣೆಯನ್ನು ಒಮ್ಮೆ ಪರಿಶೀಲಿಸುವಂತೆ ವಿನಂತಿಸುತ್ತೇವೆ.

ಮಾಹಿತಿ ಸಂಚಾರಿ ಕನ್ನಡಿಗರ ಹಿತಾಸಕ್ತಿಗೆ ನಿಷ್ಠವಾಗಿರುವ ವೇದಿಕೆ. ಇಲ್ಲಿ ಸಿಗುವ ಪ್ರತಿ ಮಾಹಿತಿಯೂ ನಿಮ್ಮ ಏಳಿಗೆಗಾಗಿ ಇರುತ್ತದೆ. ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆಯೇ ಇರಲಿ. ಕನ್ನಡ ಬೆಳೆಯಲಿ, ಕನ್ನಡಿಗರು ಗೆಲ್ಲಲಿ ನಿಮ್ಮ ಬೆಂಬಲಕ್ಕೆ ಸದಾ ಅಭಾರಿ,

ಕನ್ನಡಿಗರ ಏಳಿಗೆಗಾಗಿ, ನೈಜ ಮಾಹಿತಿಯೊಂದಿಗೆ ನಿಮ್ಮ ಮಾಹಿತಿ ಸಂಚಾರಿ ಸದಾ ನಿಮ್ಮ ಜೊತೆ. ನಿಮಗೆ ಈ ವೇದಿಕೆ ಇಷ್ಟವಾದರೆ, ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಳ್ಳಿ. ನಿಮಗೆ ಏನಾದರೂ ಪ್ರಶ್ನೆಗಳಿದ್ದರೆ ಅಥವಾ ಮಾಹಿತಿ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ.

                                              N B REDDY  ಸಂಸ್ಥಾಪಕರು, ಮಾಹಿತಿ ಸಂಚಾರಿ.