Telegram Join My Telegram WhatsApp Join My WhatsApp

Jolada Rotti: ಉತ್ತರ ಕರ್ನಾಟಕದ ಹೆಮ್ಮೆಯ ಜೋಳದ ರೊಟ್ಟಿ ಇದನ್ನ ತಿಂದ್ರೆ ನಿಮ್ಮ ಆರೋಗ್ಯಕ್ಕಿದೆ ನೂರಾರು ಲಾಭ

Jolada Rotti: ಉತ್ತರ ಕರ್ನಾಟಕದ ಹೆಮ್ಮೆಯ ಜೋಳದ ರೊಟ್ಟಿ ಇದನ್ನ ತಿಂದ್ರೆ ನಿಮ್ಮ ಆರೋಗ್ಯಕ್ಕಿದೆ ನೂರಾರು ಲಾಭ

ಕರ್ನಾಟಕದ ಅಡುಗೆಯ ಬಗ್ಗೆ ನೆನಪಾದಾಗಲೆಲ್ಲಾ ನಮಗೆ ಮೊದಲು ನೆನಪಾಗುವುದೇ ಬಿಸಿ ಬಿಸಿ ಜೋಳದ ರೊಟ್ಟಿ. ಅದರ ಜೊತೆಗೆ ಖಾರವಾದ ಶೇಂಗಾ ಚಟ್ನಿ ಅಥವಾ ಎಣ್ಣೆಗಾಯಿ ಪಲ್ಯ ಇದ್ದರಂತೂ ಊಟದ ಮಜಾವೇ ಬೇರೆ.

ಇದು ಕೇವಲ ಬಾಯಿಗೆ ರುಚಿ ನೀಡುವ ಆಹಾರವಷ್ಟೇ ಅಲ್ಲ, ನಮ್ಮ ದೇಹಕ್ಕೆ ಶಕ್ತಿ ತುಂಬುವ ಸಂಜೀವಿನಿ. ಉತ್ತರ ಕರ್ನಾಟಕದ ಕಡೆಗಂತೂ ಈ ರೊಟ್ಟಿ ಇಲ್ಲದೆ ಜನರಿಗೆ ದಿನವೇ ಕಳೆಯುವುದಿಲ್ಲ.

ಅನ್ನ, ಚಪಾತಿ ಅಥವಾ ರಾಗಿ ಮುದ್ದೆ ಎಷ್ಟೇ ತಿಂದರೂ, ಅವರಿಗೆ ಅಸಲಿ ಶಕ್ತಿ ಮತ್ತು ತೃಪ್ತಿ ಸಿಗುವುದು ಜೋಳದ ರೊಟ್ಟಿಯಿಂದಲೇ. ಹಾಗಾದರೆ, ಈ ಬಿಳಿ ಜೋಳದಲ್ಲಿ ಅಂಥದ್ದೇನಿದೆ ಇದನ್ನು ತಿಂದರೆ ನಮ್ಮ ದೇಹಕ್ಕೆ ಆಗುವ ಲಾಭಗಳೇನು ಬನ್ನಿ, ವಿವರವಾಗಿ ತಿಳಿಯೋಣ.

ಜೋಳದ ವಿಧಗಳು

ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ಎರಡು ರೀತಿಯ ಜೋಳದ ಕೃಷಿಯನ್ನು ನಾವು ನೋಡುತ್ತೇವೆ. ಒಂದು ಮೆಕ್ಕೆಜೋಳ (Sweet corn). ಇದರ ಕಾಳುಗಳು ದಪ್ಪಗಿರುತ್ತವೆ.

ಇದನ್ನು ಹೆಚ್ಚಾಗಿ ರಸ್ತೆ ಬದಿಯಲ್ಲಿ ಸುಟ್ಟು ತಿನ್ನಲು ಅಥವಾ ದನಗಳ ಮೇವಿಗಾಗಿ ಬಳಸಲಾಗುತ್ತದೆ. ಎರಡನೆಯದು ‘ಬಿಳಿ ಜೋಳ’. ಇದರ ಕಾಳುಗಳು ಸಣ್ಣದಾಗಿರುತ್ತವೆ.

ನಾವು ದಿನನಿತ್ಯ ರೊಟ್ಟಿ ಮಾಡಲು ಬಳಸುವ ಹಿಟ್ಟು ತಯಾರಾಗುವುದು ಇದೇ ಬಿಳಿ ಜೋಳದಿಂದ. ಇದು ಸಿರಿಧಾನ್ಯಗಳ (Millets) ಗುಂಪಿಗೆ ಸೇರುವ ಅತ್ಯಂತ ಪೌಷ್ಟಿಕಾಂಶಯುಕ್ತ ಆಹಾರವಾಗಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ: ಏನಿದು 2026ರ ಹೊಸ ಕಡಕ್ ರೂಲ್ಸ್ ನ ಬಗ್ಗೆ ಸಂಪೂರ್ಣ ಮಾಹಿತಿ

ಪೋಷಕಾಂಶಗಳ ಭಂಡಾರ

ಬಿಳಿ ಜೋಳವು ಕೇವಲ ಹೊಟ್ಟೆ ತುಂಬಿಸುವ ಆಹಾರವಲ್ಲ, ಅದೊಂದು ಪೋಷಕಾಂಶಗಳ ಗಣಿ. ಇದರಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್, ನಾರಿನಂಶ (Fiber) ಮತ್ತು ಖನಿಜಾಂಶಗಳು ಹೇರಳವಾಗಿವೆ. ನಾವು 100 ಗ್ರಾಂ ಜೋಳವನ್ನು ತೆಗೆದುಕೊಂಡರೆ, ಅದರಲ್ಲಿ ಸಿಗುವ ಪೋಷಕಾಂಶಗಳು ಹೀಗಿವೆ:

  • ಕ್ಯಾಲೋರಿ: 320 ರಿಂದ 330 ಕಿಲೋ ಕ್ಯಾಲೋರಿ ಶಕ್ತಿ ಸಿಗುತ್ತದೆ.

  • ಕಾರ್ಬೋಹೈಡ್ರೇಟ್: ಸುಮಾರು 72 ರಿಂದ 75 ಗ್ರಾಂ ನಷ್ಟು ಇರುತ್ತದೆ.

  • ಪ್ರೊಟೀನ್: ಬರೋಬ್ಬರಿ 10 ಗ್ರಾಂ ಪ್ರೊಟೀನ್ ಇರುತ್ತದೆ. (ಅನ್ನದಲ್ಲಿ ಕೇವಲ 1-4 ಗ್ರಾಂ ಇರುತ್ತದೆ).

  • ಫೈಬರ್: 6.5 ರಿಂದ 7 ಗ್ರಾಂ ನಷ್ಟು ಅತ್ಯುತ್ತಮ ನಾರಿನಂಶ ಇರುತ್ತದೆ.

  • ಫ್ಯಾಟ್: 2 ರಿಂದ 4 ಗ್ರಾಂ ನಷ್ಟು ಒಳ್ಳೆಯ ಕೊಬ್ಬಿನಂಶ (Good fat) ಇರುತ್ತದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರೊಟೀನ್ ಮತ್ತು ಶಕ್ತಿ ಇರುವುದರಿಂದಲೇ, ಜೋಳದ ರೊಟ್ಟಿ ತಿನ್ನುವವರು ಅತ್ಯಂತ ಗಟ್ಟಿಮುಟ್ಟಾಗಿರುತ್ತಾರೆ.

ಮಧುಮೇಹಕ್ಕೆ ಮದ್ದು

ಇಂದು ಪ್ರತಿಯೊಂದು ಮನೆಯಲ್ಲೂ ಸಕ್ಕರೆ ಕಾಯಿಲೆ (Diabetes) ಇರುವವರನ್ನು ನಾವು ನೋಡಬಹುದು. ಮಧುಮೇಹ ಇರುವವರಿಗೆ ವೈದ್ಯರು ಮೊದಲನೆಯದಾಗಿ ಅನ್ನ ಬಿಟ್ಟು ರೊಟ್ಟಿ ತಿನ್ನಲು ಹೇಳುತ್ತಾರೆ.

ಇದಕ್ಕೆ ಮುಖ್ಯ ಕಾರಣ ಜೋಳದಲ್ಲಿರುವ ವಿಶೇಷವಾದ ರೆಸಿಸ್ಟೆಂಟ್ ಸ್ಟಾರ್ಚ್ (Resistant Starch).ನಾವು ಜೋಳದ ರೊಟ್ಟಿಯನ್ನು ತಿಂದಾಗ, ಅದು ಹೊಟ್ಟೆಯಲ್ಲಿ ತಕ್ಷಣವೇ ಕರಗುವುದಿಲ್ಲ. ಬದಲಾಗಿ, ಬಹಳ ನಿಧಾನವಾಗಿ ಜೀರ್ಣವಾಗುತ್ತದೆ.

ಇದರಿಂದ ನಮ್ಮ ರಕ್ತಕ್ಕೆ ಗ್ಲೂಕೋಸ್ ಅಂಶವು ಏಕಾಏಕಿ ಸೇರ್ಪಡೆಯಾಗುವುದಿಲ್ಲ. ರಕ್ತದಲ್ಲಿ ಸಕ್ಕರೆಯ ಮಟ್ಟವು ಸದಾ ಹತೋಟಿಯಲ್ಲಿರುತ್ತದೆ. ಆದ್ದರಿಂದ ಡಯಾಬಿಟಿಸ್ ರೋಗಿಗಳಿಗೆ ಇದು ಹೇಳಿಮಾಡಿದ ಆಹಾರ.

ಎಷ್ಟು ತಿನ್ನಬೇಕು

ಕೆಲವರು ಡಯೆಟ್ ಮಾಡುತ್ತೇನೆ ಎಂದು ಹೇಳಿ ಅನ್ನವನ್ನು ಸಂಪೂರ್ಣವಾಗಿ ಬಿಡುತ್ತಾರೆ. ಆದರೆ, ಅದರ ಬದಲಿಗೆ ದಿನಕ್ಕೆ 4-5 ಜೋಳದ ರೊಟ್ಟಿಗಳನ್ನು ತಿನ್ನುತ್ತಾರೆ

ಇದು ಖಂಡಿತವಾಗಿಯೂ ತಪ್ಪು. ಜೋಳದಲ್ಲಿಯೂ ಕ್ಯಾಲೋರಿಗಳು ಹೆಚ್ಚಿರುತ್ತವೆ ಎಂಬುದನ್ನು ಮರೆಯಬಾರದು. ಅತಿಯಾಗಿ ರೊಟ್ಟಿ ತಿಂದರೆ ಅದು ಕೂಡ ಶುಗರ್ ಮತ್ತು ಬೊಜ್ಜನ್ನು ಹೆಚ್ಚಿಸುತ್ತದೆ.

ವೈದ್ಯರು ರೊಟ್ಟಿ ತಿನ್ನಲು ಹೇಳುವುದು ಏಕೆಂದರೆ, ರೊಟ್ಟಿ ಮಾಡುವಾಗ ಹಿಟ್ಟಿನ ಪ್ರಮಾಣ ನಮಗೆ ಕರಾರುವಕ್ಕಾಗಿ ತಿಳಿದಿರುತ್ತದೆ. ದಿನಕ್ಕೆ ಕೇವಲ ಎರಡು ರೊಟ್ಟಿ ತಿಂದರೆ, ನಮ್ಮ ಕ್ಯಾಲೋರಿ ಸೇವನೆ ಮಿತಿಯಲ್ಲಿರುತ್ತದೆ. ಇದರ ಜೊತೆಗೆ ಪಲ್ಯಗಳನ್ನು ಹೆಚ್ಚಾಗಿ ತಿಂದರೆ, ಸಕ್ಕರೆ ಕಾಯಿಲೆ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ.

ಗ್ಲುಟೆನ್ ಮುಕ್ತ

ನಾವು ನಿತ್ಯ ಬಳಸುವ ಗೋಧಿ ಅಥವಾ ಚಪಾತಿಯಲ್ಲಿ ಗ್ಲುಟೆನ್ (Gluten) ಎನ್ನುವ ಪ್ರೊಟೀನ್ ಇರುತ್ತದೆ. ಇದು ಕೆಲವರಿಗೆ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆಗಳು ಬರುತ್ತವೆ.

ಹಾಗೂ ಐಬಿಎಸ್ (IBS – Irritable Bowel Syndrome) ನಂತಹ ಕರುಳಿನ ತೊಂದರೆ ಇರುವವರಿಗೆ ಗ್ಲುಟೆನ್ ಆಗಿಬರುವುದಿಲ್ಲ. ಆದರೆ, ಖುಷಿಯ ವಿಚಾರ ಎಂದರೆ ನಮ್ಮ ಜೋಳವು 100% ‘ಗ್ಲುಟೆನ್-ಫ್ರೀ’ ಆಹಾರವಾಗಿದೆ.

ಇದನ್ನು ತಿಂದರೆ ಹೊಟ್ಟೆಗೆ ಯಾವುದೇ ರೀತಿಯ ಕಿರಿಕಿರಿಯಾಗುವುದಿಲ್ಲ. ಜೀರ್ಣಕ್ರಿಯೆ ಸುಗಮವಾಗುತ್ತದೆ. ಜೊತೆಗೆ, ದೇಹವು ವಿಟಮಿನ್ ಬಿ2 ಅನ್ನು ಸರಿಯಾಗಿ ಹೀರಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಮಲಬದ್ಧತೆಗೆ ಮುಕ್ತಿ

ಬೆಳಿಗ್ಗೆ ಎದ್ದ ತಕ್ಷಣ ಮೋಷನ್ ಸರಿಯಾಗಿ ಆಗದೆ ಕಷ್ಟಪಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಮಲಬದ್ಧತೆ (Constipation) ಸಮಸ್ಯೆಗೆ ಮೂಲ ಕಾರಣ ನಮ್ಮ ಆಹಾರದಲ್ಲಿ ನಾರಿನಂಶದ ಕೊರತೆ.

ಆದರೆ, ಜೋಳದಲ್ಲಿ ಇನ್ಸಾಲ್ಯುಬಲ್ ಫೈಬರ್ (ಕರಗದ ನಾರಿನಂಶ) ವಿಪುಲವಾಗಿದೆ. ಇದು ನಾವು ತಿಂದ ಆಹಾರದ ಜೊತೆ ಸೇರಿ, ಹೊಟ್ಟೆಯಲ್ಲಿರುವ ನೀರಿನಂಶವನ್ನು ತನ್ನತ್ತ ಎಳೆದುಕೊಳ್ಳುತ್ತದೆ.

ಇದರಿಂದ ಮಲವು ಮೃದುವಾಗಿ, ವಿಸರ್ಜನೆಯು ಅತ್ಯಂತ ಸುಲಭವಾಗಿ ಆಗುತ್ತದೆ. ಕರುಳಿನ ಆರೋಗ್ಯ ಕಾಪಾಡಲು ಇದು ಬೆಸ್ಟ್.

ತೂಕ ಮತ್ತು ಕೊಲೆಸ್ಟ್ರಾಲ್

ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕರಗಿಸುವಲ್ಲಿ ಜೋಳದ ಪಾತ್ರ ಬಹಳ ದೊಡ್ಡದಿದೆ. ಜೋಳದಲ್ಲಿರುವ ಅಪಾರ ಫೈಬರ್ ಅಂಶವು ದೇಹದಲ್ಲಿ ಬೈಲ್ (Bile) ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಇದು ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕಲು ನೆರವಾಗುತ್ತದೆ. ಜೊತೆಗೆ, ಒಂದು ರೊಟ್ಟಿ ತಿಂದ ತಕ್ಷಣ ಹೊಟ್ಟೆ ಬೇಗ ತುಂಬಿದಂತಹ ಅನುಭವ (Satiety) ನಮಗಾಗುತ್ತದೆ.

ಇದರಿಂದ ನಾವು ಪದೇ ಪದೇ ಬೇರೆ ತಿಂಡಿಗಳನ್ನು ತಿನ್ನುವುದು ತಪ್ಪುತ್ತದೆ. ನಮ್ಮ ಒಟ್ಟಾರೆ ಕ್ಯಾಲೋರಿ ಸೇವನೆ ಕಡಿಮೆಯಾಗುವುದರಿಂದ, ಸಹಜವಾಗಿಯೇ ತೂಕ ಇಳಿಸಲು (Weight Loss) ಇದು ಬಹಳ ಸಹಕಾರಿಯಾಗಿದೆ.

ಇದನ್ನೂ ಓದಿ:  ಆರ್.ಟಿ.ಇ ಅರ್ಜಿ2026-27: ಖಾಸಗಿ ಶಾಲೆಯಲ್ಲಿ ಫೀಸ್ ಇಲ್ಲದೆ ಓದಿಸಬೇಕೆ ಹಾಗಾದ್ರೆ ಅರ್ಜಿ ಬಗ್ಗೆಈಗಲೇ ತಿಳಿಯಿರಿ

ಮೂಳೆಗಳ ಬಲವರ್ಧನೆ

ವಯಸ್ಸಾದಂತೆ ಮೂಳೆಗಳು ಸವೆದು, ಕೀಲು ನೋವು ಬರುವುದು ಈಗ ಎಲ್ಲೆಡೆ ಸಾಮಾನ್ಯ. ಆದರೆ ನಿರಂತರವಾಗಿ ಜೋಳದ ರೊಟ್ಟಿ ತಿನ್ನುವ ಉತ್ತರ ಕರ್ನಾಟಕದ ಜನರಲ್ಲಿ ಈ ಸಮಸ್ಯೆ ಬಹಳ ಕಡಿಮೆ.

ಇದಕ್ಕೆ ಕಾರಣ ಜೋಳದಲ್ಲಿರುವ ಮಿನರಲ್ಸ್. ಇದರಲ್ಲಿ ಕ್ಯಾಲ್ಸಿಯಂ, ರಂಜಕ (Phosphorus), ಮತ್ತು ಮೆಗ್ನೀಸಿಯಂ ಹೇರಳವಾಗಿದೆ. ನಮ್ಮ ದೇಹದಲ್ಲಿರುವ ಮೂಳೆಗಳಿಗೆ ಕ್ಯಾಲ್ಸಿಯಂ ಸೇರಬೇಕಾದರೆ ವಿಟಮಿನ್ ಡಿ ಅವಶ್ಯಕ.

ಆ ವಿಟಮಿನ್ ಡಿ ಯನ್ನು ದೇಹ ಹೀರಿಕೊಳ್ಳಲು ಮೆಗ್ನೀಸಿಯಂ ಬೇಕೇ ಬೇಕು. ಜೋಳದಲ್ಲಿ ಇವೆಲ್ಲವೂ ಒಟ್ಟಿಗೆ ಸಿಗುವುದರಿಂದ ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗುತ್ತವೆ.

ರಕ್ತಹೀನತೆಗೆ ರಾಮಬಾಣ

ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿ ಸುಸ್ತು, ಆಯಾಸ ಕಾಡುವುದೇ ರಕ್ತಹೀನತೆ (Anemia). ಹೆಚ್ಚಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಇವರಿಗೂ ಕೂಡ ಜೋಳ ಅತ್ಯುತ್ತಮ ಆಹಾರ.

ಜೋಳದಲ್ಲಿ ಕಬ್ಬಿಣಾಂಶ (Iron) ಕೂಡ ಅಧಿಕ ಪ್ರಮಾಣದಲ್ಲಿ ಅಡಗಿದೆ. ಇದನ್ನು ಸರಿಯಾದ ಕಾಂಬಿನೇಷನ್ ಜೊತೆ ತಿಂದರೆ ರಕ್ತಹೀನತೆ ಬೇಗನೆ ದೂರವಾಗುತ್ತದೆ.

ಸಾಫ್ಟ್ ಆದ ಜೋಳದ ರೊಟ್ಟಿಯನ್ನು ಮೆಂತ್ಯ ಸೊಪ್ಪು, ಪಾಲಕ್ ಅಥವಾ ಹರಿವೆ ಸೊಪ್ಪಿನ ಪಲ್ಯದೊಂದಿಗೆ ತಿಂದರೆ, ದೇಹಕ್ಕೆ ಐರನ್ ಅಂಶ ದುಪ್ಪಟ್ಟಾಗಿ ಸಿಗುತ್ತದೆ.

ಕೂದಲು ತ್ವಚೆ ಕಾಂತಿ

ನಿಮ್ಮ ಕೂದಲು ವಿಪರೀತವಾಗಿ ಉದುರುತ್ತಿದೆಯೇ? ತ್ವಚೆಯ ಹೊಳಪು ಕಡಿಮೆಯಾಗಿದೆಯೇ ದುಬಾರಿ ಕ್ರೀಮ್‌ಗಳನ್ನು ಬಳಸುವ ಬದಲು ನಿಮ್ಮ ಆಹಾರದಲ್ಲಿ ಜೋಳದ ರೊಟ್ಟಿಯನ್ನು ಸೇರಿಸಿ ನೋಡಿ.

ಜೋಳದಲ್ಲಿ ಜಿಂಕ್ (Zinc), ಸೆಲೆನಿಯಂ (Selenium) ಮತ್ತು ವಿಟಮಿನ್ ಇ (Vitamin E) ಅಂಶಗಳಿವೆ. ಇವು ಕೂದಲಿನ ಬೇರುಗಳನ್ನು (Hair follicles) ಬಲಪಡಿಸುತ್ತವೆ. ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ.

ಜೊತೆಗೆ, ಇದರಲ್ಲಿರುವ ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು ಚರ್ಮದ ಆರೋಗ್ಯವನ್ನು ಕಾಪಾಡಿ, ತ್ವಚೆಗೆ ನೈಸರ್ಗಿಕ ಕಾಂತಿಯನ್ನು ನೀಡುತ್ತವೆ.

ನರಗಳ ಶಾಂತತೆ

ಇಂದಿನ ಧಾವಂತದ ಬದುಕಿನಲ್ಲಿ ಒತ್ತಡ (Stress) ಮತ್ತು ನರಗಳ ದೌರ್ಬಲ್ಯ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಜೋಳದಲ್ಲಿರುವ ಮೆಗ್ನೀಸಿಯಂ ಅಂಶವು ನಮ್ಮ ನರಮಂಡಲಕ್ಕೆ ವಿಶೇಷವಾದ ಶಮನವನ್ನು ನೀಡುತ್ತದೆ.

ಇದು ನರಗಳ ಉರಿಯೂತವನ್ನು (Nerve Irritation) ಕಡಿಮೆ ಮಾಡುತ್ತದೆ. ಮೈಕೈ ನೋವು, ಸುಸ್ತು, ಆಯಾಸವನ್ನು ದೂರ ಮಾಡಿ, ಇಡೀ ದಿನ ದೇಹವನ್ನು ಚಟುವಟಿಕೆಯಿಂದ (Active) ಇರುವಂತೆ ಮಾಡುತ್ತದೆ.

ಹೇಗೆ ಸವಿಯಬೇಕು

ಜೋಳದ ರೊಟ್ಟಿಯ ಸಂಪೂರ್ಣ ಲಾಭ ನಮ್ಮ ದೇಹಕ್ಕೆ ಸಿಗಬೇಕಾದರೆ ಅದನ್ನು ಸರಿಯಾದ ರೀತಿಯಲ್ಲಿ ತಿನ್ನಬೇಕು. ಅದರ ಜೊತೆಗೆ ನಾವು ಬಳಸುವ ಸೈಡ್ ಡಿಶ್‌ಗಳು ಕೂಡ ಬಹಳ ಮುಖ್ಯವಾಗುತ್ತವೆ.

  • ಕಡಕ್ ರೊಟ್ಟಿ: ಇದನ್ನು ಶೇಂಗಾ (ಕಡಲೆಕಾಯಿ) ಚಟ್ನಿ ಅಥವಾ ಅಗಸೆ ಬೀಜದ ಚಟ್ನಿ ಜೊತೆಗೆ ತಿನ್ನಬೇಕು.

  • ಮೊಸರಿನ ಸಾಥ್: ಈ ಚಟ್ನಿಗಳ ಜೊತೆಗೆ ಸ್ವಲ್ಪ ಮೊಸರು ಸೇರಿಸಿ ತಿಂದರೆ, ದೇಹಕ್ಕೆ ಪ್ರೊಬಯೋಟಿಕ್ಸ್ ಮತ್ತು ಒಳ್ಳೆಯ ಫ್ಯಾಟ್ ಸಿಗುತ್ತದೆ.

  • ಸಾಫ್ಟ್ ರೊಟ್ಟಿ: ಮೆದುವಾದ ರೊಟ್ಟಿ ತಿನ್ನುವಾಗ ಕೇವಲ ಸಾರು ಅಥವಾ ತಿಳಿ ಸಾಂಬಾರ್ ಬಳಸಬೇಡಿ.

  • ಪಲ್ಯಗಳ ಬಳಕೆ: ಅದರ ಬದಲು ಹಸಿರು ಸೊಪ್ಪಿನ ಪಲ್ಯಗಳು, ಕಾಳುಗಳ ಪಲ್ಯಗಳನ್ನು ಹೆಚ್ಚಾಗಿ ಬಳಸಿ. ಇದರಿಂದ ವಿಟಮಿನ್ಸ್ ಮತ್ತು ನಾರಿನಂಶ ಹೆಚ್ಚಾಗಿ ಸಿಗುತ್ತದೆ.

ಇದನ್ನೂ ಓದಿ: ಪೌತಿ ಖಾತೆ :ಸತ್ತವರ ಹೆಸರಲ್ಲಿರೋ ಜಮೀನು ನಿಮ್ಮ ಹೆಸರಿಗೆ ಮಾಡ್ಕೊಳ್ಳೋದು ಹೆಂಗೆ ಪೌತಿ ಖಾತೆ ಬಗ್ಗೆ ಸರಳವಾಗಿ ತಿಳಿಯಿರಿ

ಆಸ್ಪತ್ರೆ ಖರ್ಚು ಉಳಿಸುವ ಸಂಜೀವಿನಿ

ನಮ್ಮದೇ ನೆಲದಲ್ಲಿ, ನಮ್ಮದೇ ಮಣ್ಣಿನಲ್ಲಿ ಬೆಳೆಯುವ ಈ ಬಿಳಿ ಜೋಳವು ಕೇವಲ ಒಂದು ಸಾಧಾರಣ ಆಹಾರವಲ್ಲ. ಅದೊಂದು ಪ್ರಕೃತಿ ನಮಗೆ ನೀಡಿರುವ ಅತ್ಯಮೂಲ್ಯವಾದ ಔಷಧಿ ಎಂದರೆ ತಪ್ಪಾಗಲಾರದು.

ಪ್ರತಿದಿನ ನಿಯಮಿತವಾಗಿ ಜೋಳದ ರೊಟ್ಟಿಯನ್ನು ಊಟದಲ್ಲಿ ಸೇರಿಸಿಕೊಳ್ಳುವುದರಿಂದ, ನಾವು ಆಸ್ಪತ್ರೆಗೆ ಅಲೆಯುವ ಎಷ್ಟೋ ಖರ್ಚನ್ನು ಉಳಿಸಬಹುದು.

ಆದರೆ, ಅತಿಯಾದರೆ ಅಮೃತವೂ ವಿಷ ಎಂಬುದನ್ನು ಸದಾ ನೆನಪಿನಲ್ಲಿಡಿ. ರುಚಿಯಾಗಿದೆ ಎಂದು ಮಿತಿಮೀರಿ ತಿನ್ನದೆ, ಹಿತವಾಗಿ ಹಾಗೂ ಮಿತವಾಗಿ ತಿಂದು ಅದರ ಅದ್ಭುತ ಆರೋಗ್ಯ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಿ.

ಇಂದೇ ನಿಮ್ಮ ಮನೆಯ ಅಡುಗೆಮನೆಯಲ್ಲಿ ಜೋಳದ ರೊಟ್ಟಿಯ ಘಮಲು ಪಸರಿಸಲಿ. ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯಕರ ಜೀವನದ ಪಯಣ ಇಲ್ಲಿಂದಲೇ ಶುರುವಾಗಲಿ

Leave a Comment