Perents Law: ಹೆತ್ತವರನ್ನು ಬೀದಿಗೆ ತಳ್ಳುವ ಮಕ್ಕಳಿಗೆ ತಕ್ಕ ಪಾಠ ಸಂಬಳ ಕಟ್ ಮಾಡುವ ಐತಿಹಾಸಿಕ ಕಾನೂನು ಜಾರಿ
ತಮ್ಮ ಇಡೀ ಜೀವನವನ್ನು ಸವೆಸಿ, ರಕ್ತವನ್ನೇ ಬೆವರಾಗಿ ಹರಿಸಿ ಮಕ್ಕಳನ್ನು ಸಾಕುವವರು ತಂದೆ-ತಾಯಿ. ತಮಗೆ ತಿನ್ನಲು ಅನ್ನವಿಲ್ಲದಿದ್ದರೂ, ಮಕ್ಕಳಿಗೆ ಮಾತ್ರ ಯಾವುದೇ ಕೊರತೆಯಾಗದಂತೆ ಬೆಳೆಸುತ್ತಾರೆ.
ಆದರೆ, ಅದೇ ಮಕ್ಕಳು ಕೈತುಂಬಾ ಸಂಬಳ ಬರುವ ಕೆಲಸಕ್ಕೆ ಸೇರಿದ ಮೇಲೆ ಹೆತ್ತವರನ್ನೇ ಮರೆಯುತ್ತಾರೆ. ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡು, ಮದುವೆಯಾದ ಬಳಿಕ ಅಪ್ಪ-ಅಮ್ಮ ಅವರಿಗೆ ದೊಡ್ಡ ಭಾರವಾಗುತ್ತಾರೆ.
ಯಾವ ಕೈಗಳು ಇವರನ್ನು ಎತ್ತಿ ಮುದ್ದಾಡಿದವೋ, ಅದೇ ಕೈಗಳಿಗೆ ಚಿಪ್ಪು ಕೊಟ್ಟು ವೃದ್ಧಾಶ್ರಮಕ್ಕೆ ತಳ್ಳುವವರ ಸಂಖ್ಯೆ ಇಂದು ಹೆಚ್ಚಾಗಿದೆ. ಇಂದಿನ ಆಧುನಿಕ ಸಮಾಜದಲ್ಲಿ ನೂರಕ್ಕೆ 60ರಷ್ಟು ಮನೆಗಳಲ್ಲಿ ನಡೆಯುತ್ತಿರುವ ಕರಾಳ ಸತ್ಯ ಇದು.
ಇಂತಹ ಅದೆಷ್ಟೋ ವಯಸ್ಸಾದ ಜೀವಗಳು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲಾಗದೆ, ಅನ್ನಕ್ಕೂ ಗತಿ ಇಲ್ಲದೆ ಅನಾಥರಂತೆ ಬೀದಿಯಲ್ಲಿ ಪ್ರಾಣ ಬಿಡುತ್ತಿದ್ದಾರೆ. ಆದರೆ, ಇನ್ನು ಮುಂದೆ ಈ ಕರುಣಾಜನಕ ಕಥೆಗೆ ಮತ್ತು ಪಾಪಿ ಮಕ್ಕಳ ಅಟ್ಟಹಾಸಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ.
ಇದನ್ನೂ ಓದಿ: ನಿಮ್ಮ ಜೇಬಿನಲ್ಲೇ ಇರಲಿ ಬ್ಯಾಂಕ್: ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದರೆ ಸಾಲಕ್ಕೆ ಅಲೆದಾಡಬೇಕಿಲ್ಲ! ಪಡೆಯುವ ಸರಳ ವಿಧಾನ ಇಲ್ಲಿದೆ.
ತೆಲಂಗಾಣ ಸರ್ಕಾರದ ಐತಿಹಾಸಿಕ ಹೆಜ್ಜೆ ಏನಿದು ಹೊಸ ಕಾನೂನು
ಹೆತ್ತವರನ್ನು ನಿರ್ಲಕ್ಷ್ಯ ಮಾಡುವ ಮತ್ತು ಬೀದಿಗೆ ತಳ್ಳುವ ಅಯೋಗ್ಯ ಮಕ್ಕಳಿಗೆ ತಕ್ಕ ಪಾಠ ಕಲಿಸಲು ನೆರೆಯ ತೆಲಂಗಾಣ ಸರ್ಕಾರ ಮುಂದಾಗಿದೆ.
ಮಕ್ಕಳ ಜೇಬಿಗೆ ಕತ್ತರಿ ಹಾಕುವಂತಹ ಒಂದು ಐತಿಹಾಸಿಕ, ದಿಟ್ಟ ಹಾಗೂ ಇಡೀ ದೇಶವೇ ಬೆರಗಾಗಿ ನೋಡುವಂತಹ ಮಸೂದೆಯನ್ನು ಜಾರಿಗೆ ತಂದಿದೆ. ತೆಲಂಗಾಣ ವಿಧಾನಸಭೆಯಲ್ಲಿ ಈ ಕುರಿತ ಕಠಿಣ ಬಿಲ್ ಸರ್ವಾನುಮತದಿಂದ ಪಾಸ್ ಆಗಿದೆ.
ಕೇಂದ್ರ ಸರ್ಕಾರದ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007’ ಈಗಾಗಲೇ ಚಾಲ್ತಿಯಲ್ಲಿದೆ. ಆದರೆ, ಆ ಕಾನೂನಿನಲ್ಲಿ ಸಾಕಷ್ಟು ಲೋಪಗಳಿದ್ದವು. ಹೀಗಾಗಿ ಮಕ್ಕಳು ಸುಲಭವಾಗಿ ಅದರಿಂದ ನುಣುಚಿಕೊಳ್ಳುತ್ತಿದ್ದರು.
ಇದನ್ನು ಅರಿತ ತೆಲಂಗಾಣ ಸರ್ಕಾರ, ಇದಕ್ಕಿಂತ 10 ಪಟ್ಟು ಹೆಚ್ಚು ಕಠಿಣವಾದ ಹಾಗೂ ನೇರವಾಗಿ ಮಕ್ಕಳ ಜೇಬಿಗೆ ಕೈ ಹಾಕುವ ಹೊಸ ಮಸೂದೆಯನ್ನು ತಂದಿದೆ.
ಮಕ್ಕಳ ಸಂಬಳ ಕಟ್ ಆಗುವುದು ಹೇಗೆ
ಈ ಹೊಸ ಮಸೂದೆಯ ಅಸಲಿ ತಾಕತ್ತಿರುವುದೇ ಇದರ ಶಿಕ್ಷೆಯ ಪ್ರಮಾಣದಲ್ಲಿ. ಈ ಹೊಸ ಕಾನೂನು ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಉದ್ಯೋಗಿಗೂ ಅನ್ವಯವಾಗುತ್ತದೆ.
ತನ್ನ ವಯಸ್ಸಾದ ತಂದೆ-ತಾಯಿಯನ್ನು ಆರ್ಥಿಕವಾಗಿ ನೋಡಿಕೊಳ್ಳಲು ವಿಫಲವಾದರೆ ಅಥವಾ ಅವರನ್ನು ನಿರ್ಲಕ್ಷ್ಯ ಮಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ.
-
ಶೇಕಡಾ 15ರಷ್ಟು ಕಡಿತ: ಉದ್ಯೋಗಿ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಆತನ ಒಟ್ಟು ತಿಂಗಳ ಸಂಬಳದಲ್ಲಿ ಶೇಕಡ 15ರಷ್ಟು ಅಥವಾ ಕನಿಷ್ಠ 10,000 ರೂ. ಹಣವನ್ನು ನೇರವಾಗಿ ಕಟ್ ಮಾಡಲಾಗುವುದು.
-
ಹೆಚ್ಆರ್ (HR) ಮೂಲಕ ನೇರ ವರ್ಗಾವಣೆ: ಈ ಕಟ್ ಆದ ಹಣವನ್ನು ಆ ಪಾಪಿ ಮಗನ ಕೈಗೆ ಕೊಡುವುದಿಲ್ಲ. ಬದಲಾಗಿ, ಕಂಪನಿಯ ಹೆಚ್ಆರ್ (HR) ಅಥವಾ ಹಣಕಾಸು ವಿಭಾಗವೇ ಆ ದುಡ್ಡನ್ನು ನೇರವಾಗಿ ನೊಂದ ತಂದೆ-ತಾಯಿಯ ಬ್ಯಾಂಕ್ ಅಕೌಂಟ್ಗೆ ಟ್ರಾನ್ಸ್ಫರ್ ಮಾಡುತ್ತದೆ.
-
ಅನುಮತಿ ಬೇಕಿಲ್ಲ: ಅಂದರೆ ಮಗನ ಹಂಗಿಲ್ಲದೆ, ಮಗನ ಯಾವುದೇ ಅನುಮತಿ ಇಲ್ಲದೆ ಹೆತ್ತವರ ಅಕೌಂಟ್ಗೆ ಪ್ರತಿ ತಿಂಗಳು ಹಣ ಬಂದು ಬೀಳುತ್ತದೆ.
ಶಾಸಕ, ಸಂಸದ, ಮಂತ್ರಿಗಳಿಗೂ ತಪ್ಪಿದ್ದಲ್ಲ ಶಿಕ್ಷೆ
ಸಾಮಾನ್ಯವಾಗಿ ದೇಶದಲ್ಲಿ ಯಾವುದೇ ಕಾನೂನು ಬಂದರೂ ಅದು ಬಡವರಿಗೆ, ಮಧ್ಯಮ ವರ್ಗದವರಿಗೆ ಮಾತ್ರ ಸೀಮಿತ ಎಂಬ ಮಾತಿದೆ. ಆದರೆ, ತೆಲಂಗಾಣ ಸರ್ಕಾರ ತಂದಿರುವ ಈ ಬಿಲ್ ಇಡೀ ವ್ಯವಸ್ಥೆಯನ್ನೇ ಆಳುವ ರಾಜಕಾರಣಿಗಳಿಗೂ ಅನ್ವಯವಾಗುತ್ತದೆ!
ಹೌದು, ಹೆತ್ತವರನ್ನು ನಿರ್ಲಕ್ಷ್ಯ ಮಾಡಿದರೆ ಕೇವಲ ಐಟಿ ಉದ್ಯೋಗಿ, ಸರ್ಕಾರಿ ನೌಕರರಿಗೆ ಮಾತ್ರವಲ್ಲ. ಶಾಸಕ, ಸಂಸದ, ಗ್ರಾಮ ಪಂಚಾಯಿತಿಯಿಂದ ಹಿಡಿದು ಮಹಾನಗರ ಪಾಲಿಕೆಯವರೆಗಿನ ಯಾವುದೇ ಚುನಾಯಿತ ಪ್ರತಿನಿಧಿಗಳಾಗಿದ್ದರೂ ಸರಿಯೇ, ಅವರ ವೇತನ-ಭತ್ಯೆಯಲ್ಲೂ ಶೇಕಡ 15ರಷ್ಟು ಕಡಿತವನ್ನು ನಿರ್ದಾಕ್ಷಿಣ್ಯವಾಗಿ ಮಾಡಲಾಗುತ್ತದೆ.
-
ಮಲತಾಯಿ-ಮಲತಂದೆಗೂ ಹಕ್ಕು: ಈ ಕಾನೂನು ಕೇವಲ ಜನ್ಮದಾತರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಮಲತಾಯಿ ಅಥವಾ ಮಲತಂದೆಗೂ ಈ ಕಾನೂನಿನ ಅಡಿ ಪರಿಹಾರ ಕೇಳುವ ಮತ್ತು ಹಣ ಪಡೆಯುವ ಸಂಪೂರ್ಣ ಹಕ್ಕನ್ನು ನೀಡಲಾಗಿದೆ. ಇದು ಅತ್ಯಂತ ಮಾನವೀಯತೆಯ ಅಂಶವಾಗಿದೆ.
ವೃದ್ಧರಿಗೆ ಕೇವಲ 60 ದಿನಗಳಲ್ಲಿ ಸಿಗಲಿದೆ ಪಕ್ಕಾ ನ್ಯಾಯ
ಹಾಗಾದರೆ, ಮಕ್ಕಳಿಂದ ಮೋಸ ಹೋದ, ನಿರ್ಲಕ್ಷ್ಯಕ್ಕೆ ಒಳಗಾದ ವೃದ್ಧರು ನ್ಯಾಯಕ್ಕಾಗಿ ಎಲ್ಲಿ ಹೋಗಬೇಕು? ಕೋರ್ಟ್ ಮೆಟ್ಟಿಲೇರಿ ವರ್ಷಗಟ್ಟಲೆ ಕಾಯಬೇಕಾ? ಖಂಡಿತ ಇಲ್ಲ.
ಯಾವ ತಂದೆ-ತಾಯಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೋ, ಅವರು ನೇರವಾಗಿ ತಮ್ಮ ವ್ಯಾಪ್ತಿಯ ಜಿಲ್ಲಾಧಿಕಾರಿಗೆ (DC) ಒಂದು ಅರ್ಜಿಯನ್ನು ಸಲ್ಲಿಸಬಹುದು.
-
ಅರ್ಜಿ ಸಲ್ಲಿಕೆ: ಅರ್ಜಿಯಲ್ಲಿ ತಮ್ಮ ಆದಾಯದ ಮೂಲವೇನು ಮತ್ತು ತಾವು ಯಾಕೆ ಮಕ್ಕಳ ಸಂಬಳದಲ್ಲಿ ಪಾಲು ಕೇಳುತ್ತಿದ್ದೇವೆ ಎಂಬ ಕಾರಣವನ್ನು ಸ್ಪಷ್ಟಪಡಿಸಬೇಕು.
-
60 ದಿನಗಳ ಗಡುವು: ಒಮ್ಮೆ ಅರ್ಜಿ ಸಲ್ಲಿಕೆಯಾದ ಮೇಲೆ ಜಿಲ್ಲಾಧಿಕಾರಿಯು ಕೇವಲ 60 ದಿನಗಳ ಒಳಗಾಗಿ ಈ ಅರ್ಜಿಯನ್ನು ಇತ್ಯರ್ಥಪಡಿಸಲೇಬೇಕು.
-
ಮುಖಾಮುಖಿ ವಿಚಾರಣೆ: ಈ 60 ದಿನಗಳ ಒಳಗೆ ಪೋಷಕರು ಮತ್ತು ಮಕ್ಕಳನ್ನು ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಿ, ಅಂತಿಮವಾಗಿ ಹಣ ಕಡಿತಗೊಳಿಸುವ ಅಧಿಕೃತ ಆದೇಶವನ್ನು ಜಿಲ್ಲಾಧಿಕಾರಿ ಹೊರಡಿಸುತ್ತಾರೆ.
ಒಂದು ವೇಳೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಅನ್ಯಾಯವಾಗಿದೆ ಅನ್ನಿಸಿದರೆ, ಮೇಲ್ಮನವಿ ಸಲ್ಲಿಸಲು ರಾಜ್ಯ ಮಟ್ಟದಲ್ಲಿ ‘ಹಿರಿಯ ನಾಗರಿಕರ ಆಯೋಗ’ವನ್ನು ಸ್ಥಾಪಿಸಲು ಈ ಮಸೂದೆ ಪ್ರಸ್ತಾಪಿಸಿದೆ. ಈ ಆಯೋಗಕ್ಕೆ ಸಿವಿಲ್ ಕೋರ್ಟ್ನ ಪವರ್ ನೀಡಲಾಗಿದೆ. ಇದು ಯಾರನ್ನಾದರೂ ವಿಚಾರಣೆಗೆ ಕರೆಯಬಹುದು, ಸುಳ್ಳು ಹೇಳಿದರೆ ದಂಡವನ್ನೂ ವಿಧಿಸಬಹುದು.
ಇದನ್ನೂ ಓದಿ: ಪ್ರತಿ ತಿಂಗಳು ಕೈತುಂಬಾ ಹಣ ಬೇಕೆ? ಅಂಚೆ ಕಚೇರಿಯ ಈ ಸೂಪರ್ ಯೋಜನೆಯಲ್ಲಿ ಇಂದೇ ಹೂಡಿಕೆ ಮಾಡಿ
ಒಟ್ಟಾರೆ ಸಮಾಜಕ್ಕೆ ಕನ್ನಡಿ ಹಿಡಿದ ಕಾನೂನು
ಈ ಕಾನೂನಿಗೆ ಆಡಳಿತ ಪಕ್ಷ ಮಾತ್ರವಲ್ಲದೆ, ವಿರೋಧ ಪಕ್ಷಗಳು ಕೂಡ ಸಂಪೂರ್ಣ ಬೆಂಬಲ ನೀಡಿವೆ. ಇಡೀ ದೇಶದಲ್ಲೇ ಇದೊಂದು ಮೊಟ್ಟಮೊದಲ ಕ್ರಾಂತಿಕಾರಿ ಪ್ರಯತ್ನವಾಗಿದೆ.
ಮುಪ್ಪಿನ ಕಾಲದಲ್ಲಿ ಒಂದು ತುತ್ತು ಅನ್ನಕ್ಕಾಗಿ, ಮೆಡಿಕಲ್ ಖರ್ಚಿಗಾಗಿ ಮಕ್ಕಳ ಮುಂದೆ ಕೈಯೊಡ್ಡಿ ಕಣ್ಣೀರು ಹಾಕುತ್ತಿದ್ದ ಲಕ್ಷಾಂತರ ವಯಸ್ಸಾದ ಜೀವಗಳಿಗೆ, ತೆಲಂಗಾಣ ಸರ್ಕಾರದ ಈ ಕಾನೂನು ನಿಜಕ್ಕೂ ಒಂದು ಸಂಜೀವನಿಯಾಗಿದೆ.
ಪಾಪಿ ಮಕ್ಕಳಿಗೆ ನೈತಿಕತೆಯ ಪಾಠ ಕಲಿಸಲು ಕಾನೂನಿನ ಚಾವಟಿಯೇ ಬೇಕು ಎಂಬುದನ್ನು ಈ ಬಿಲ್ ಸಾಬಿತು ಮಾಡಿದೆ. ತಮಗೆ ಜನ್ಮ ನೀಡಿದ ಪೋಷಕರನ್ನು ಹೊರೆ ಎಂದು ಭಾವಿಸುವ ಅಯೋಗ್ಯ ಮಕ್ಕಳಿಗೆ ಇದೊಂದು ಕಠಿಣ ಎಚ್ಚರಿಕೆಯಾಗಿದೆ.
ಕಾನೂನಿನ ಮೂಲಕ ಹಣವನ್ನು ಕೊಡಿಸಬಹುದು, ಆದರೆ ಕಳೆದುಹೋದ ಪ್ರೀತಿ ಮತ್ತು ನಲುಗಿದ ಸಂಬಂಧಗಳನ್ನು ಬೆಸೆಯಲು ಸಾಧ್ಯವಿಲ್ಲ ಎಂಬುದು ವಿಷಾದನೀಯ ಸಂಗತಿ. ಆದರೂ, ಅಸಹಾಯಕ ವೃದ್ಧರ ಪಾಲಿಗೆ ಈ ಕಾನೂನು ಬದುಕಿನ ಸಂಧ್ಯಾಕಾಲದ ಭದ್ರತೆಯಾಗಿದೆ.
ನಿಮ್ಮ ಅಭಿಪ್ರಾಯವೇನು?
ತೆಲಂಗಾಣದಲ್ಲಿ ಜಾರಿಯಾಗಿರುವ ಈ ಕಠಿಣ ಹಾಗೂ ಅದ್ಭುತವಾದ ಕಾನೂನು ನಮ್ಮ ಕರ್ನಾಟಕದಲ್ಲೂ ಜಾರಿಯಾಗಬೇಕಾ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.