Telegram Join My Telegram WhatsApp Join My WhatsApp

ರೈತರಿಗೊಂದು ಬಂಪರ್ ಆಫರ್ ಬರೀ 20% ದುಡ್ಡು ಕೊಡಿ 80% ಸಬ್ಸಿಡೀಲಿ ಸೋಲಾರ್ ಪಂಪ್ ನಿಮ್ಮದಾಗಿಸಿಕೊಳ್ಳಿ.

ರೈತರಿಗೊಂದು ಬಂಪರ್ ಆಫರ್! ಬರೀ 20% ದುಡ್ಡು ಕೊಡಿ, 80% ಸಬ್ಸಿಡೀಲಿ ಸೋಲಾರ್ ಪಂಪ್ ನಿಮ್ಮದಾಗಿಸಿಕೊಳ್ಳಿ

ನಮ್ಮ ಹಳ್ಳಿ ಕಡೆ ರೈತರಿಗೆ ಯಾವಾಗ್ಲೂ ಒಂದಲ್ಲಾ ಒಂದು ಚಿಂತೆ ಇದ್ದೇ ಇರತೈತೆ. ಭೂಮಿತಾಯಿ ನಂಬಿ ಕಷ್ಟಪಟ್ಟು ಬಿತ್ತನೆ ಮಾಡಿರ್ತೀವಿ, ಬೆಳೆನೂ ನಳನಳಿಸ್ತಾ ಇರುತ್ತೆ. ಆದರೆ ಸರಿಯಾದ ಟೈಮ್‌ಗೆ ಮಳೆ ಬರಲ್ಲ. ಸರಿ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೋರ್‌ವೆಲ್ ಹಾಕಿಸ್ತೀವಿ.

ಆದರೆ, ನೀರೈತೆ ಅಂತ ಖುಷಿ ಪಡೋಷ್ಟರಲ್ಲಿ ಈ ಕರೆಂಟ್‌ನವರ ಕಾಟ ಶುರುವಾಗುತ್ತೆ ನೋಡಿ! ಹಗಲೊತ್ತು ಕರೆಂಟ್ ಇರಲ್ಲ, ರಾತ್ರಿ ಹೊತ್ತು ಮೂರು ಫೇಸ್ (3-phase) ಕರೆಂಟ್ ಕೊಡ್ತಾರೆ. ಮಧ್ಯರಾತ್ರಿ ಚಳೀಲಿ, ಹಾವೋ-ಚೇಳೋ ಅಂತ ಭಯಪಡ್ಕೊಂಡು ಹೊಲಕ್ಕೆ ನೀರು ಹಾಯಿಸೋಕೆ ಹೋಗೋ ಕಷ್ಟ ಆ ಶಿವನಿಗೇ ಪ್ರೀತಿ! ಇನ್ನು ಕೆಲವರು ಡೀಸೆಲ್ ಇಂಜಿನ್ ಇಟ್ಕೊಂಡು ನೀರು ಎತ್ತೋಣ ಅಂದ್ರೆ, ಡೀಸೆಲ್ ರೇಟು ಕೇಳಿದ್ರೇನೆ ತಲೆ ತಿರುಗುತ್ತೆ.

ಇದಕ್ಕೆಲ್ಲಾ ಪರಿಹಾರ ಇಲ್ವಾ ಅಂತ ತಲೆಮೇಲೆ ಕೈಹೊತ್ತು ಕೂತಿದ್ದೀರಾ? ಖಂಡಿತಾ ಇದೆ! ಇನ್ಮೇಲೆ ಆ ಕರೆಂಟ್ ಬಿಲ್ ಕಟ್ಟೋ ಚಿಂತೆ, ಮಧ್ಯರಾತ್ರಿ ಎದ್ದೇಳೋ ಚಿಂತೆ ಎಲ್ಲವನ್ನೂ ಬಿಟ್ಟುಬಿಡಿ. ನಿಮಗೊಂದು ಭರ್ಜರಿ ಸಿಹಿಸುದ್ದಿ ತಂದಿದ್ದೀನಿ. ನಮ್ಮ ಸರ್ಕಾರ ರೈತರಿಗಾಗಿಯೇ ಒಂದು ಸೂಪರ್ ಯೋಜನೆ ತಂದೈತೆ. ಅದೇ ಪ್ರಧಾನಮಂತ್ರಿ ಕುಸುಮ್ ಯೋಜನೆ 

ಬನ್ನಿ, ಇದೇನಿದು ಯೋಜನೆ? ಇದರಿಂದ ನಮಗೇನು ಲಾಭ? ಅರ್ಜಿ ಹೆಂಗೆ ಹಾಕೋದು? ಅಂತ ನಿಧಾನಕ್ಕೆ ಒಂದೊಂದಾಗಿ ತಿಳ್ಕೊಳೋಣ.

ಕರೆಂಟ್ ಫ್ರೀ, ಸಬ್ಸಿಡಿ ಭರ್ಜರಿ! ಏನಿದು ಕುಸುಮ್ ಯೋಜನೆ?

ನಮ್ಮ ರೈತರು ಕರೆಂಟ್ ಇಲ್ಲ ಅಂತ ಪರದಾಡಬಾರದು, ಡೀಸೆಲ್ ಇಂಜಿನ್ ಇಟ್ಕೊಂಡು ಕಷ್ಟಪಟ್ಟು ಸಂಪಾದನೆ ಮಾಡಿದ್ದನ್ನೆಲ್ಲಾ ಖರ್ಚು ಮಾಡಬಾರದು. ಬೆಳಗ್ಗಿಂದ ಸಂಜೆವರೆಗೂ ಸುರಿಯೋ ಉಚಿತವಾದ ಸೂರ್ಯನ ಬಿಸಿಲಿಂದಲೇ ಕರೆಂಟ್ ತೆಗೆದು, ಹೊಲಕ್ಕೆ ನಿರಂತರವಾಗಿ ನೀರು ಹಾಯಿಸಬೇಕು ಅನ್ನೋದು ಈ ಯೋಜನೆಯ ಮುಖ್ಯ ಉದ್ದೇಶ.

ಈ ಯೋಜನೆಯಲ್ಲಿ ಬರೋಬ್ಬರಿ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ ಸೆಟ್ ಸಿಗ್ತೈತೆ! ಅಂದ್ರೆ, ನೀವೇನಾದ್ರೂ ನಿಮ್ಮ ಹೊಲಕ್ಕೆ ಲಕ್ಷಾಂತರ ರೂಪಾಯಿ ಬೆಲೆಯ ಸೋಲಾರ್ ಪಂಪ್ ಹಾಕಿಸಬೇಕು ಅಂದ್ರೆ, ನೀವು ಕಟ್ಟಬೇಕಾಗಿರೋದು ಬರೀ 20% ಹಣ ಅಷ್ಟೇ. ಬಾಕಿ ಉಳಿದ 80% ದುಡ್ಡನ್ನ ಸರ್ಕಾರನೇ ಭರಿಸುತ್ತೆ!

  • ಕೇಂದ್ರ ಸರ್ಕಾರದ ಪಾಲು: 30% ಸಬ್ಸಿಡಿ.

  • ರಾಜ್ಯ ಸರ್ಕಾರದ ಪಾಲು: 50% ಸಬ್ಸಿಡಿ.

  • ರೈತರು ಕಟ್ಟಬೇಕಾದ್ದು: ಕೇವಲ 20% ಮಾತ್ರ!

ಹೆಂಗೈತೆ ಆಫರ್? ಇದಕ್ಕಿಂತ ಒಳ್ಳೆ ಅವಕಾಶ ಮತ್ತೊಂದಿಲ್ಲ ಕಣ್ರೀ

ಇದನ್ನೂ ಓದಿ: ಉಚಿತ ಕರೆಂಟ್ ಇದೆ ಅಂತ ಕರೆಂಟ್ ಒಲೆ ತರೋಕೆ ಹೊರಟೀರಾ ಹಾಗಾದ್ರೆ ಅಂಗಡಿಗೆ ಹೋಗೋ ಮುನ್ನ ಈ ಅಸಲಿ ಲೆಕ್ಕಾಚಾರ ಒಮ್ಮೆ ನೋಡಿ!

ದಲ್ಲಾಳಿಗಳ ಹಂಗ್ಯಾಕೆ? ಮೊಬೈಲ್‌ನಲ್ಲೇ ಫ್ರೀಯಾಗಿ ಅರ್ಜಿ ಹಾಕಿ!

ನಮ್ಮ ಹಳ್ಳಿ ಕಡೆ ಸರ್ಕಾರದ ಯೋಜನೆ ಬಂತು ಅಂದ್ರೆ ಸಾಕು, ಈ ಮಧ್ಯವರ್ತಿಗಳು (Brokers) ತಾವೇ ಹುಟ್ಟಿಕೊಳ್ತಾರೆ. “ನಿಮಗೆ ಬೇಗ ಸೋಲಾರ್ ಪಂಪ್ ಸ್ಯಾಂಕ್ಷನ್ ಮಾಡಿಸ್ತೀವಿ, ನಮಗೊಂದಿಷ್ಟು ಕಮಿಷನ್ ಕೊಡಿ” ಅಂತ ರೈತರಿಗೆ ಪಂಗನಾಮ ಹಾಕೋಕೆ ಬರ್ತಾರೆ.

ಆದರೆ, ರೈತ ಬಾಂಧವರೇ ದಯವಿಟ್ಟು ಅಂಥವರ ಮಾತಿಗೆ ಮರುಳಾಗಿ ನಿಮ್ಮ ಕಷ್ಟದ ದುಡ್ಡನ್ನ ಕಳ್ಕೊಬೇಡಿ. ಈ ‘ಕುಸುಮ್ ಯೋಜನೆ’ಗೆ ನೀವು ಯಾರಿಗೂ ಕಾಸು ಕೊಡೋ ಹಾಗಿಲ್ಲ.

  • ಲಂಚಕ್ಕೆ ಜಾಗವಿಲ್ಲ: ಈ ಯೋಜನೆಗೆ ಅರ್ಜಿ ಹಾಕೋಕೆ ನೀವು ಯಾರಿಗೂ ಒಂದು ರೂಪಾಯಿ ಲಂಚ ಕೊಡೋ ಹಾಗಿಲ್ಲ. ಯಾವ ಆಫೀಸ್ ಮೆಟ್ಟಿಲು ಹತ್ತೋ ಹಾಗಿಲ್ಲ, ಯಾರ ಕಾಲಿಗೂ ಬೀಳೋ ಹಾಗಿಲ್ಲ.

  • ಸ್ಮಾರ್ಟ್‌ಫೋನ್‌ನಲ್ಲೇ ಅರ್ಜಿ ಹಾಕಿ: ಇದು ಪೂರ್ತಿಯಾಗಿ ಆನ್‌ಲೈನ್ (Online) ಪ್ರಕ್ರಿಯೆ. ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ರೆ, ನೀವೇ ಮನೆಯಲ್ಲಿ ಕೂತು ಫ್ರೀಯಾಗಿ ಅರ್ಜಿ ಹಾಕಬಹುದು.

  • ಕಂಪ್ಯೂಟರ್ ಸೆಂಟರ್‌ಗೆ ಹೋಗಿ: ಒಂದು ವೇಳೆ ನಿಮಗೆ ಮೊಬೈಲ್‌ನಲ್ಲಿ ಅರ್ಜಿ ಹಾಕೋಕೆ ಬರ್ಲಿಲ್ಲ ಅಂದ್ರೆ ಚಿಂತೆ ಬೇಡ. ನಿಮ್ಮೂರ ಹತ್ತಿರ ಇರೋ ಯಾವುದಾದರೂ ಆನ್‌ಲೈನ್ ಸೆಂಟರ್ (Cyber Center) ಅಥವಾ ಗ್ರಾಮ ಪಂಚಾಯತಿ ಹತ್ತಿರದ ಕಂಪ್ಯೂಟರ್ ಸೆಂಟರ್‌ಗೆ ಹೋಗಿ. ಅವರು ಅರ್ಜಿ ಹಾಕಿದ್ದಕ್ಕೆ ಮಾತ್ರ ಒಂದು 50-100 ರೂಪಾಯಿ ಚಾರ್ಜ್ ಮಾಡ್ತಾರೇನೋ ಬಿಟ್ರೆ, ಬೇರೆ ಯಾರಿಗೂ ಕಾಸು ಕೊಡೋಕೆ ಹೋಗ್ಬೇಡಿ.

  • ಎಲ್ಲಾ ರೈತರಿಗೂ ಅವಕಾಶ: “ನಮ್ಮ ಹತ್ರ ಎರಡೇ ಎಕರೆ ಹೊಲ ಐತೆ, ನಮಗೆ ಈ ಸೋಲಾರ್ ಪಂಪ್ ಕೊಡ್ತಾರಾ?” ಅನ್ನೋ ಅನುಮಾನ ಬೇಡ. ಸಣ್ಣ ರೈತರು, ದೊಡ್ಡ ರೈತರು ಅಂತೇನಿಲ್ಲ. ಎಲ್ಲಾ ವರ್ಗದ ರೈತರೂ ಕೂಡ ಯಾವುದೇ ಅನುಮಾನ ಇಲ್ಲದೆ ಅರ್ಜಿ ಹಾಕಬಹುದು.

ಕಡಿಮೆ ದುಡ್ಡಿಗೆ ಕೊಡ್ತಾರೆ ಅಂತ ಕಳಪೆ ಗುಣಮಟ್ಟ ಇರುತ್ತಾ?

ಬಹಳಷ್ಟು ಜನ ರೈತರಿಗೆ ಇದೊಂದು ದೊಡ್ಡ ಅನುಮಾನ ಕಾಡ್ತಾ ಇರುತ್ತೆ. “ಏನಪ್ಪಾ, ಸರ್ಕಾರದವ್ರು 80% ಡಿಸ್ಕೌಂಟ್ ಕೊಡ್ತಾವ್ರೆ ಅಂದ್ರೆ, ಯಾವುದೋ ಲೋ ಕ್ವಾಲಿಟಿ (Low Quality) ಪಂಪ್ ತಂದು ಹಾಕ್ತಾರೇನೋ.. ಎರಡೇ ದಿನಕ್ಕೆ ಮೋಟಾರ್ ಸುಟ್ಟುಹೋಗುತ್ತೇನೋ” ಅಂತ ಭಯ ಪಡ್ತಾರೆ.

ಯಾಕಂದ್ರೆ, ಕಮ್ಮಿ ದುಡ್ಡಿಗೆ ಬರೋದೆಲ್ಲಾ ಕಳಪೆ ಗುಣಮಟ್ಟದ್ದೇ ಆಗಿರುತ್ತೆ ಅನ್ನೋದು ನಮ್ಮ ಜನರ ತಲೆಯಲ್ಲಿ ಕೂತುಬಿಟ್ಟೈತೆ. ಆದರೆ ಅಣ್ಣಾ, ಈ ಕುಸುಮ್ ಯೋಜನೆ ಯಲ್ಲಿ ಹಂಗಿಲ್ಲ ಕಣ್ರೀ!

ಇಲ್ಲಿ ಸರ್ಕಾರ ನಿಮಗೆ ಯಾವ್ದೋ ಒಂದು ಪಂಪ್ ತಂದು ನಿಮ್ಮ ತಲೆಗೆ ಕಟ್ಟಲ್ಲ. ಬದಲಾಗಿ, ನಿಮ್ಮ ಹೊಲಕ್ಕೆ ಯಾವ ಪಂಪ್ ಬೇಕು ಅಂತ ನಿರ್ಧಾರ ಮಾಡೋ ಸಂಪೂರ್ಣ ಹಕ್ಕು ನಿಮಗೇ ಇರುತ್ತೆ. ಇದರ ಬಗ್ಗೆ ನೀವು ತಿಳಿಯಲೇಬೇಕಾದ ಮುಖ್ಯವಾದ ವಿಷಯಗಳು ಇಲ್ಲಿದೆ:

  • ನಿಮ್ಮ ಆಯ್ಕೆ, ನಿಮ್ಮ ಇಷ್ಟ: ಅರ್ಜಿ ಹಾಕುವಾಗಲೇ ನಿಮಗೆ ಯಾವ ಕಂಪನಿಯ ಸೋಲಾರ್ ಪಂಪ್ ಸೆಟ್ ಬೇಕು ಅಂತ ನೀವೇ ಆಯ್ಕೆ (Select) ಮಾಡಿಕೊಳ್ಳುವ ಅವಕಾಶ ನಿಮಗಿರುತ್ತೆ. ಯಾರೋ ತಂದು ಹಾಕಿದ್ದನ್ನ ಸುಮ್ಮನೆ ಒಪ್ಪಿಕೊಳ್ಳುವ ಹಾಗಿಲ್ಲ.

  • ಸರ್ಕಾರದ ಪಟ್ಟಿ ಇರುತ್ತೆ: ಸರ್ಕಾರದವರು ಸುಮ್ಸುಮ್ಮನೆ ಯಾವ್ದೋ ಕಂಪನಿಗೆ ಪಂಪ್ ಸಪ್ಲೈ ಮಾಡೋಕೆ ಹೇಳಲ್ಲ. ಕೆಲವು ಒಳ್ಳೆ ಗುಣಮಟ್ಟದ, ನಂಬಿಕಸ್ಥ ಕಂಪನಿಗಳ ಪಟ್ಟಿ (Empanelled list) ಕೊಟ್ಟಿರ್ತಾರೆ. ಆ ಲಿಸ್ಟ್‌ನಲ್ಲಿರುವ ಕಂಪನಿಗಳಿಂದಲೇ ನೀವು ನಿಮಗೆ ಬೇಕಾದದ್ದನ್ನು ಆರಿಸಬೇಕು.

  • ಸ್ವಲ್ಪ ಜಾಣತನ ಇರಲಿ: ಅರ್ಜಿ ಹಾಕುವಾಗ ಸ್ವಲ್ಪ ಮುತುವರ್ಜಿ ವಹಿಸಿ. ಸುಮ್ನೆ ಯಾವುದೋ ಹೊಸ ಕಂಪನಿಗೆ ಅಥವಾ ಆತುರಕ್ಕೆ ಮರುಳಾಗಬೇಡಿ. ಕಂಪನಿಗಳ ಬಗ್ಗೆ ನಿಮ್ಮೂರ ಬೇರೆ ರೈತರಲ್ಲಿ ಅಥವಾ ಲೈನ್‌ಮನ್ ಹತ್ತಿರ ಕೇಳಿ ತಿಳ್ಕೊಳಿ.

ಹತ್ತಾರು ವರ್ಷದಿಂದ ನಮ್ಮ ರೈತರಿಗೆ ಒಳ್ಳೆ ಸೇವೆ ಕೊಡ್ತಿರೋ, ಮೋಟಾರ್ ಕೆಟ್ಟರೆ ಬಂದು ರಿಪೇರಿ ಮಾಡಿಕೊಡೋ, ಗ್ಯಾರಂಟಿ-ವಾರಂಟಿ (Warranty) ಕೊಡೋ ಕಂಪನಿನ ನೀವೇ ಹುಡ್ಕಿ ಆಯ್ಕೆ ಮಾಡ್ಕೋಬೇಕು.

ಹೀಗೆ ಒಳ್ಳೆ ಕಂಪನಿ ಆರಿಸಿಕೊಂಡ್ರೆ, ನಿಮ್ಮ ಸೋಲಾರ್ ಪ್ಯಾನೆಲ್ ಮತ್ತು ಪಂಪ್ ಸೆಟ್ ಹತ್ತಿಪ್ಪತ್ತು ವರ್ಷ ಆದ್ರೂ ಗಟ್ಟಿಮುಟ್ಟಾಗಿರುತ್ತೆ, ರಿಪೇರಿ ಖರ್ಚು ಕೂಡ ಇರಲ್ಲ!

ಕುಸುಮ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನಮ್ಮ ಕೈಲಿರೋ ಸ್ಮಾರ್ಟ್ ಫೋನ್ ಇದ್ರೆ ಸಾಕು, ಮನೇಲಿ ಕೂತೇ ಐದೇ ನಿಮಿಷದಲ್ಲಿ ಅರ್ಜಿ ಹಾಕಬಹುದು. ಒಂದು ವೇಳೆ ಮೊಬೈಲ್‌ನಲ್ಲಿ ಕಷ್ಟ ಅನ್ಸಿದ್ರೆ, ನಿಮ್ಮೂರ ಹತ್ತಿರದ ಯಾವುದಾದರೂ ಇಂಟರ್ನೆಟ್ ಸೆಂಟರ್‌ಗೆ ಹೋಗಿ ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ:

  • ಹಂತ 1 (ವೆಬ್‌ಸೈಟ್ ಓಪನ್ ಮಾಡಿ): ಮೊದಲು ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಓಪನ್ ಮಾಡಿ, ಅದರಲ್ಲಿ ‘ಸೌರ’ (SURA) ಅಂತ ಟೈಪ್ ಮಾಡಿ ಸರ್ಕಾರದ ವೆಬ್‌ಸೈಟ್ ಹುಡುಕಿ ಓಪನ್ ಮಾಡಿ.

  • ಹಂತ 2 (ರೈತರ ನೋಂದಣಿ): ವೆಬ್‌ಸೈಟ್ ಓಪನ್ ಆದ್ಮೇಲೆ, ಅಲ್ಲಿ ಮುಖಪುಟದಲ್ಲೇ (Home page) ‘ಫಾರ್ಮರ್ ರಿಜಿಸ್ಟ್ರೇಷನ್’ (Farmer Registration) ಅನ್ನೋ ಒಂದು ಆಯ್ಕೆ ಇರುತ್ತೆ, ಅದರ ಮೇಲೆ ನಿಧಾನಕ್ಕೆ ಕ್ಲಿಕ್ ಮಾಡಿ.

  • ಹಂತ 3 (ಮೊಬೈಲ್ ನಂಬರ್ ಮತ್ತು ಒಟಿಪಿ): ಈಗ ನಿಮ್ಮ ಹತ್ತಿರ ಚಾಲ್ತಿಯಲ್ಲಿರೋ (ವರ್ಕ್ ಆಗ್ತಿರೋ) ಮೊಬೈಲ್ ನಂಬರ್ ಕೇಳುತ್ತೆ, ಅದನ್ನ ಹಾಕಿ. ತಕ್ಷಣ ಕ್ರೆಡಾಲ್ (KREDL) ಇಲಾಖೆ ಕಡೆಯಿಂದ ನಿಮ್ಮ ಮೊಬೈಲ್‌ಗೆ ಒಂದು ಒಟಿಪಿ (OTP) ಬರುತ್ತೆ. ಆ 4 ಅಕ್ಷರದ ನಂಬರ್‌ನ ಅಲ್ಲಿ ಟೈಪ್ ಮಾಡಿ.

  • ಹಂತ 4 (ಮಾಹಿತಿ ತುಂಬೋದು): ಒಟಿಪಿ ಹಾಕಿದ್ಮೇಲೆ ದೊಡ್ಡದೊಂದು ಫಾರ್ಮ್ ಓಪನ್ ಆಗುತ್ತೆ. ಗಾಬರಿ ಆಗ್ಬೇಡಿ! ಅದರಲ್ಲಿ ನಿಮ್ಮ ಹೆಸರು, ತಂದೆ ಅಥವಾ ಗಂಡನ ಹೆಸರು, ಆಧಾರ್ ಕಾರ್ಡ್ ನಂಬರ್ (Aadhaar number) ಮತ್ತು ಇಮೇಲ್ ಐಡಿ (Email ID) ಕೇಳುತ್ತೆ. ಅದನ್ನೆಲ್ಲಾ ಸ್ಪೆಲ್ಲಿಂಗ್ ತಪ್ಪಿಲ್ಲದಂಗೆ ನೀಟಾಗಿ ತುಂಬಿ.

  • ಹಂತ 5 (ಊರಿನ ವಿಳಾಸ ಸೆಲೆಕ್ಟ್ ಮಾಡಿ): ಕೊನೆಯದಾಗಿ, ನೀವು ಯಾವ ಜಿಲ್ಲೆಯವರು? ಯಾವ ತಾಲೂಕು? ಹೋಬಳಿ ಯಾವುದು? ನಿಮ್ಮ ಹಳ್ಳಿಯ ಹೆಸರೇನು? ಮತ್ತೆ ನಿಮ್ಮೂರಿನ ಪಿನ್ ಕೋಡ್ (Pin code) ಏನು? ಅನ್ನೋದನ್ನ ಅಲ್ಲಿ ಬರುವ ಲಿಸ್ಟ್‌ನಲ್ಲಿ ಹುಡ್ಕಿ ಸರಿಯಾಗಿ ಆಯ್ಕೆ (Select) ಮಾಡಿ.

ಇದನ್ನೂ ಓದಿ: ಬ್ಯಾಂಕ್ ಎಫ್‌ಡಿಯಲ್ಲಿ FD ಹೆಚ್ಚು ಲಾಭ ಗಳಿಸುವ ಲ್ಯಾಡರಿಂಗ್ ಟ್ರಿಕ್: ಹಳ್ಳಿಗರಿಗಾಗಿ ಸರಳ ಮಾಹಿತಿ.

ಜಮೀನಿನ ಮಾಹಿತಿ ಹೆಂಗೆ ಕೊಡೋದು?

ನಿಮ್ಮ ಸ್ವಂತ ಜಮೀನಿನ ವಿವರ ಕೊಡೋದು ಭಾಳ ಮುಖ್ಯ. ಯಾಕಂದ್ರೆ ಪಂಪ್ ಕೂರಿಸೋದು ಅಲ್ಲೇ ಅಲ್ವಾ?

  • ನಿಮ್ಮ ಜಮೀನಿನ ನಿಖರವಾದ ಸರ್ವೆ ನಂಬರ್ (Survey Number) ಹಾಕಿ.

  • ಎಷ್ಟು ಎಕರೆ, ಎಷ್ಟು ಗುಂಟೆ ಜಮೀನಿದೆ ಅಂತ ನಮೂದಿಸಿ.

  • ನಿಮ್ಮ ಜಮೀನಿಗೆ ಹತ್ತಿರವಿರುವ ವಿದ್ಯುತ್ ಕಂಬ (ಬೆಸ್ಕಾಂ, ಹೆಸ್ಕಾಂ ಅಥವಾ ಜೆಸ್ಕಾಂ ಲೈನ್) ಎಷ್ಟು ದೂರದಲ್ಲಿದೆ ಅಂತ ಮೀಟರ್‌ಗಳಲ್ಲಿ ತಿಳಿಸಿ. (ಇದು ಗೊತ್ತಿಲ್ಲ ಅಂದ್ರೆ ನಿಮ್ಮೂರ ಲೈನ್ ಮನ್ ಕೇಳಿ ತಿಳ್ಕೊಳಿ).

  • ನಿಮ್ಮ ವಿಭಾಗ (Division), ಸಬ್-ಡಿವಿಷನ್ ಯಾವುದು ಅಂತ ಕೂಡ ಅಲ್ಲಿ ಆಯ್ಕೆ ಮಾಡಬೇಕು.

ಪಂಪ್ ಸೆಟ್ ಸಾಮರ್ಥ್ಯ ಮತ್ತು ಬೇಕಾಗುವ ದಾಖಲೆಗಳು

ನಿಮಗೆ ಎಷ್ಟು ಹೆಚ್‌ಪಿ (HP) ಸಾಮರ್ಥ್ಯದ ಪಂಪ್ ಸೆಟ್ ಬೇಕು? ನಿಮ್ಮ ಬೋರ್‌ವೆಲ್ ಎಷ್ಟು ಅಡಿ ಆಳ ಇದೆ? ನೀರಾವರಿ ಮೂಲ ಯಾವುದು? ಇದೆಲ್ಲಾ ವಿವರಗಳನ್ನ ಅಲ್ಲಿ ಕೇಳಿರುತ್ತಾರೆ. ಅದೆಲ್ಲಾ ತುಂಬಿದ ಮೇಲೆ, ನಿಮ್ಮ ಕೆಲವು ಕಾಗದ ಪತ್ರಗಳನ್ನ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು:

  • ನಿಮ್ಮ ಜಮೀನಿನ ಪಹಣಿ (RTC).

  • ನಿಮ್ಮ ಆಧಾರ್ ಕಾರ್ಡ್ (Aadhaar Card).

  • ನಿಮ್ಮ ಪ್ಯಾನ್ ಕಾರ್ಡ್ (PAN Card).

ಇವೆಲ್ಲವನ್ನೂ ಪಿಡಿಎಫ್ (PDF) ಅಥವಾ ಫೋಟೋ (JPEG) ರೂಪದಲ್ಲಿ ಅಪ್‌ಲೋಡ್ ಮಾಡಬೇಕು.

ವೆಂಡರ್ (ಕಂಪನಿ) ಆಯ್ಕೆ ಮಾಡುವಾಗ ಇರಲಿ ಹುಷಾರು!

ಫಾರ್ಮ್‌ನಲ್ಲಿ ಎಲ್ಲಾ ಮಾಹಿತಿ ತುಂಬಿದ್ಮೇಲೆ ನಮ್ಮ ಕೆಲಸ ಮುಗೀತು ಅಂತ ಸುಮ್ನಾಗಬ್ಯಾಡಿ. ಅರ್ಜಿಯ ಕೊನೆಯಲ್ಲಿ ಒಂದು ಅತಿ ಮುಖ್ಯವಾದ ಕೆಲಸ ಐತೆ. ಅದೇ ‘ಎಂಪೆನಲ್ಡ್ ಏಜೆನ್ಸಿ’ (Empanelled Agency) ಸೆಲೆಕ್ಟ್ ಮಾಡೋದು. ಅಂದ್ರೆ, ನಿಮಗೆ ಸೋಲಾರ್ ಪಂಪ್ ಸೆಟ್ ಯಾವ ಕಂಪನಿಯಿಂದ ಬೇಕು ಅಂತ ಆಯ್ಕೆ ಮಾಡೋದು.

ಅಲ್ಲಿ ನೋಡಿದ್ರೆ ಸುಮಾರು 13ಕ್ಕೂ ಹೆಚ್ಚು ಬೇರೆ ಬೇರೆ ಕಂಪನಿಗಳ ದೊಡ್ಡ ಲಿಸ್ಟ್ ಇರುತ್ತೆ. ಅದರಲ್ಲಿ ನಿಮಗೆ ಯಾವ ಕಂಪನಿ ಪಂಪ್ ಬೇಕು ಅಂತ ನೀವೇ ಸೆಲೆಕ್ಟ್ ಮಾಡ್ಕೋಬೇಕು. ಇಲ್ಲೇ ನೋಡ್ರಿ ರೈತರು ಜಾಣತನ ತೋರಿಸಬೇಕು!

  • ಯಾಮಾರೋಕೆ ಹೋಗ್ಬ್ಯಾಡಿ: ಸುಮ್ನೆ ಕಣ್ಣಿಗೆ ಕಂಡ ಯಾವ್ದೋ ಹೊಸ ಕಂಪನಿ, ಹೆಸರೇ ಕೇಳಿರದ ಕಂಪನಿನ ಆರಿಸಿಕೊಂಡು ಆಮೇಲೆ ಪಂಪ್ ಕೆಟ್ಟಾಗ ರಿಪೇರಿಗೆ ಪರದಾಡಬ್ಯಾಡಿ.

  • ಒಳ್ಳೆ ಕಂಪನಿ, ಭರ್ಜರಿ ಪಂಪ್: ಒಳ್ಳೆ ಕಂಪನಿ ಆರಿಸಿಕೊಂಡರೆ, ಸೋಲಾರ್ ಪ್ಯಾನೆಲ್ ಮತ್ತು ಪಂಪ್ ಸೆಟ್ ಕೂಡ ಒಳ್ಳೇದೇ ಸಿಗುತ್ತೆ.

  • ಸೇವೆ (Service) ಭಾಳ ಮುಖ್ಯ: ಹತ್ತಾರು ವರ್ಷದಿಂದ ನಮ್ಮ ಕರ್ನಾಟಕದಲ್ಲಿ ಸಾವಿರಾರು ರೈತರಿಗೆ ಸೋಲಾರ್ ಪಂಪ್ ಹಾಕಿಕೊಟ್ಟು, ಮೋಟಾರ್ ಏನಾದ್ರೂ ಕೆಟ್ಟರೆ ಹಳ್ಳಿಗೆ ಬಂದು ರಿಪೇರಿ ಮಾಡಿಕೊಡೋ ಒಳ್ಳೆ ಸರ್ವಿಸ್ (Good Service) ಕೊಡ್ತಿರೋ ನಂಬಿಕಸ್ಥ ಕಂಪನಿಗಳನ್ನೇ ಹುಡುಕಿ ಆಯ್ಕೆ ಮಾಡಿ.

  • ಗೊತ್ತಿಲ್ಲ ಅಂದ್ರೆ ಕೇಳಿ ತಿಳ್ಕೊಳಿ: ನಿಮಗೆ ಯಾವ ಕಂಪನಿ ಒಳ್ಳೇದು ಅಂತ ಗೊತ್ತಾಗ್ಲಿಲ್ಲ ಅಂದ್ರೆ, ಆಗ್ಲೇ ಸೋಲಾರ್ ಪಂಪ್ ಹಾಕಿಸ್ಕೊಂಡಿರೋ ನಿಮ್ಮೂರ ಬೇರೆ ರೈತರನ್ನ ಕೇಳಿ ತಿಳ್ಕೊಂಡು ಆಮೇಲೆ ಸೆಲೆಕ್ಟ್ ಮಾಡಿ.

ಕೊನೆಯ ಹಂತ ಅರ್ಜಿ ಸಲ್ಲಿಕೆ:

ಎಲ್ಲಾ ಸರಿಯಾಗಿ ನೋಡ್ಕೊಂಡು, ಒಳ್ಳೆ ಕಂಪನಿನ ಸೆಲೆಕ್ಟ್ ಮಾಡಿದ್ಮೇಲೆ ಕೊನೆಯದಾಗಿ ಕೆಳಗಡೆ ಇರೋ ‘ಸಬ್ಮಿಟ್’ (Submit) ಬಟನ್ ಒತ್ತಿ. ಅಬ್ಬಾ! ಇಷ್ಟ್ ಮಾಡಿದ್ರೆ ನಿಮ್ಮ ಅರ್ಜಿ ನೇರವಾಗಿ ಸರ್ಕಾರಕ್ಕೆ ತಲುಪಿತು ಅಂತ ಅರ್ಥ. ನಿಮ್ಮ ಅರ್ಜಿ ಸಲ್ಲಿಕೆ ಕೆಲಸ ಯಶಸ್ವಿಯಾಗಿ ಮುಗೀತು ಕಣ್ರೀ!

ರೈತರ ಪಾಲಿನ 20% ದುಡ್ಡು ಯಾವಾಗ, ಯಾರಿಗೆ ಕಟ್ಟಬೇಕು?

ಬಹಳ ಜನ ಇಲ್ಲೇ ಕನ್‌ಫ್ಯೂಸ್ ಆಗ್ತಾರೆ. ಅರ್ಜಿ ಹಾಕಿದ ತಕ್ಷಣ ದುಡ್ಡು ಕಟ್ಟೋ ಹಾಗಿಲ್ಲ. ನೀವು ಯಾವ ಕಂಪನಿನ ಸೆಲೆಕ್ಟ್ ಮಾಡಿರ್ತೀರೋ, ಆ ಕಂಪನಿಯವರು ಮೊದಲು ನಿಮ್ಮ ಹೊಲಕ್ಕೆ ಬರ್ತಾರೆ. ನಿಮ್ಮ ಬೋರ್‌ವೆಲ್, ಸೋಲಾರ್ ಪ್ಯಾನೆಲ್ ಹಾಕೋ ಜಾಗ (GPS Location) ಎಲ್ಲವನ್ನೂ ಪರಿಶೀಲನೆ (Verfication) ಮಾಡ್ತಾರೆ. ಅದೆಲ್ಲಾ ಓಕೆ ಆಗಿ ಅವರು ಅಪ್ರೂವಲ್ ಕೊಟ್ಟಮೇಲೆ, ಸರ್ಕಾರದಿಂದ (KREDL) ನಿಮ್ಮ ಮೊಬೈಲ್‌ಗೆ ಮೆಸೇಜ್ ಬರುತ್ತೆ; “ಈಗ ನಿಮ್ಮ ಪಾಲಿನ 20% ದುಡ್ಡು ಕಟ್ಟಿ” ಅಂತ.

ಆಗ ನೀವು ಮತ್ತೆ ಮೊದಲು ಹೋದ ವೆಬ್‌ಸೈಟ್‌ಗೇ ಹೋಗಬೇಕು:

  • ಅಲ್ಲಿ ‘ಪೇ ಫಾರ್ಮರ್ ಶೇರ್’ (Pay Farmer Share) ಮೇಲೆ ಕ್ಲಿಕ್ ಮಾಡಬೇಕು.

  • ಮೊಬೈಲ್ ನಂಬರ್ ಹಾಕಿ OTP ಹಾಕಿದ್ರೆ, ನೀವು ಆಯ್ಕೆ ಮಾಡಿದ ಪಂಪ್ ಸೆಟ್‌ಗೆ ತಕ್ಕಂತೆ ನೀವು ಕಟ್ಟಬೇಕಾದ ಹಣ ಎಷ್ಟು ಅಂತ ಡಿಸ್ಪ್ಲೇ ಆಗುತ್ತೆ.

  • ಅದನ್ನ ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಗೂಗಲ್ ಪೇ, ಫೋನ್ ಪೇ (UPI Scanner) ಮೂಲಕ ಆನ್‌ಲೈನ್‌ನಲ್ಲೇ ಕಟ್ಟಬಹುದು.

  • ಹಣ ಕಟ್ಟಿದ ತಕ್ಷಣ ಒಂದು ರಶೀದಿ (Payment Receipt) ಬರುತ್ತೆ. ಅದನ್ನ ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದು ಜೋಪಾನವಾಗಿ ಇಟ್ಕೋಳಿ.

ಇದನ್ನೂ ಓದಿ: ರೈತರ ಪಾಲಿಗೆ ಒಲಿಯಿತು ಭರ್ಜರಿ ಜಾಕ್‌ಪಾಟ್! ಡಿಸಿ ಆಫೀಸ್ ಅಲೆಯುವ ಕಷ್ಟಕ್ಕೀಗ ಬಿದ್ದಿದೆ ಬ್ರೇಕ್!

ನಿಮ್ಮ ಹೊಲದಲ್ಲಿ ಹಸಿರು ನಳನಳಿಸಲಿ

ಇಷ್ಟು ಕೆಲಸ ಮಾಡ್ಬಿಟ್ರೆ, ನಿಮ್ಮ ಅರ್ಧ ಕಷ್ಟ ತೀರ್ತು ಅನ್ಕೊಳಿ ಕಣ್ರೀ. ಆಮೇಲೆ ಆ ನೀವು ಆರಿಸಿದ ಕಂಪನಿಯವರೇ ನಿಮ್ಮ ಹೊಲಕ್ಕೆ ಬರ್ತಾರೆ. ಅವರೇ ಜಾಗ ನೋಡಿ, ಒಳ್ಳೆ ಗುಣಮಟ್ಟದ ಸೋಲಾರ್ ಪ್ಯಾನೆಲ್ ಮತ್ತು ಪಂಪ್ ಸೆಟ್ ಎರಡನ್ನೂ ಗಟ್ಟಿಮುಟ್ಟಾಗಿ ಅಳವಡಿಸಿಕೊಟ್ಟು ಹೋಗ್ತಾರೆ. ಒಮ್ಮೆ ಆ ಸೋಲಾರ್ ಪಂಪ್ ನಿಮ್ಮ ಹೊಲದಲ್ಲಿ ನಿಲ್ತು ಅಂದ್ರೆ, ಆಮೇಲೆ ಪೂರ್ತಿ ನಿಮ್ಮದೇ ದರ್ಬಾರ್ ಶುರು!

  • ಕರೆಂಟ್ ಚಿಂತೆಗೊಂದು ಮುಕ್ತಿ: ಬೆಳಗ್ಗೆ ಆ ಸೂರ್ಯ ಭಗವಂತ ಹುಟ್ಟಿದಾಗಿಂದ ಹಿಡಿದು, ಸಂಜೆ ಮುಳುಗೋವರೆಗೂ ಕರೆಂಟ್ ಬಂತಾ? ಹೋಯ್ತಾ? ಅನ್ನೋ ಚಿಂತೆನೇ ನಿಮಗೆ ಇರಲ್ಲ.

  • ರಾತ್ರಿ ನಿದ್ದೆಗೆಡೋ ಕಷ್ಟ ತಪ್ಪುತ್ತೆ: ಮಧ್ಯರಾತ್ರಿ ಚಳೀಲಿ ನಡುಗುತ್ತಾ, ಕತ್ತಲಲ್ಲಿ ಜೀವ ಕೈಲಿಡ್ಕೊಂಡು ಹೊಲಕ್ಕೆ ಹೋಗಿ ಕಾಯೋ ಕಷ್ಟ ಇನ್ಮುಂದೆ ಖಂಡಿತಾ ಇರಲ್ಲ.

  • ಹೊಲದಲ್ಲಿ ಹಸಿರು, ಮನಸ್ಸಲ್ಲಿ ನೆಮ್ಮದಿ: ದಪ್ಪ ಪೈಪಿಂದ ಗಣಗಣ ಅಂತ ನೀರು ಹರಿಯೋದನ್ನ ನೋಡ್ತಾ ಇದ್ರೆ, ಆ ಕಡೆ ಬೆಳೆ ಹಸಿರಾಗಿ ನಳನಳಿಸ್ತಾ ಇದ್ರೆ.. ಅಬ್ಬಾ! ರೈತನ ಮನಸ್ಸಿಗೆ ಸಿಗೋ ನೆಮ್ಮದಿ ಬೇರೆ ಯಾವ ದುಡ್ಡು ಕೊಟ್ಟರೂ ಸಿಗಲ್ಲ.

ಏನಂತೀರಾ ರೈತ ಬಾಂಧವರೇ? ಇನ್ನೇಕೆ ಸುಮ್ನೆ ಯೋಚನೆ ಮಾಡ್ತಾ ಕೂರ್ತೀರಾ? ಕೂಡಲೇ ನಿಮ್ಮ ಪಹಣಿ, ಆಧಾರ್ ಕಾರ್ಡ್ ದಾಖಲೆಗಳನ್ನ ಹಿಡ್ಕೊಂಡು ಈ ಬಂಪರ್ ಕುಸುಮ್ ಯೋಜನೆ ಗೆ ಅರ್ಜಿ ಹಾಕಿ.

ತಿಂಗಳಾ-ತಿಂಗಳಾ ಕರೆಂಟ್ ಬಿಲ್ ಕಟ್ಟೋ ಗೋಳನ್ನ ತಪ್ಪಿಸ್ಕೊಳಿ. ಸರ್ಕಾರದ ಈ ಯೋಜನೆಯಿಂದ ನಮ್ಮ ಹಳ್ಳಿ ರೈತರಿಗೆಲ್ಲ ಒಳ್ಳೇದಾಗಲಿ, ನಿಮ್ಮ ಕೃಷಿ ಬದುಕು ಬಂಗಾರವಾಗಲಿ ಅನ್ನೋದೇ ನಮ್ಮ ಆಸೆ.

ಈ ಉಪಯುಕ್ತ ಮಾಹಿತಿ ನಿಮ್ಮೂರ ಬೇರೆ ರೈತರಿಗೂ, ನಿಮ್ಮ ಸ್ನೇಹಿತರಿಗೂ, ಅಕ್ಕ-ಪಕ್ಕದ ಹೊಲದವರಿಗೂ ತಲುಪಲಿ. ಇದನ್ನ ವಾಟ್ಸಾಪ್ (WhatsApp) ಮತ್ತು ಫೇಸ್‌ಬುಕ್‌ನಲ್ಲಿ ಎಲ್ಲರಿಗೂ ಶೇರ್ (Share) ಮಾಡಿ, ಅವರಿಗೂ ಸಹಾಯ ಮಾಡಿ. ಭೂಮಿತಾಯಿ ತಣ್ಣಗಿರಲಿ, ನಿಮ್ಮೆಲ್ಲರ ಬೆಳೆ ಹುಲುಸಾಗಿ ಬರಲಿ, ಸುಖವಾಗಿರಿ

Leave a Comment