Telegram Join My Telegram WhatsApp Join My WhatsApp

ಪಹಣಿ (RTC) ತಿದ್ದುಪಡಿ ಅದಾಲತ್ 2026 : ನಿಮ್ಮ ಹೊಲದ ಪಹಣೀಲಿ ಹೆಸರು ಎಕರೆ-ಗುಂಟೆ ತಪ್ಪಾಗಿದೆಯಾ ಇಲ್ಲಿದೆ ನೋಡಿ ಸುಲಭ ಪರಿಹಾರ

ಪಹಣಿ (RTC) ತಿದ್ದುಪಡಿ ಅದಾಲತ್ – 2026: ನಿಮ್ಮಹೊಲದ ಪಹಣೀಲಿ ಹೆಸ್ರು ಎಕರೆ-ಗುಂಟೆ ತಪ್ಪಾಗಿದೆಯಾ ಇಲ್ಲಿದೆ ನೋಡಿ ಸುಲಭ ಪರಿಹಾರ

ನಮಸ್ಕಾರ ರೈತ ಅಣ್ಣ-ತಮ್ಮಂದಿರೇ ಭೂಮಿ ತಾಯಿನೇ ನಂಬ್ಕೊಂಡು ಬದುಕ್ತಿರೋ ನಮ್ಮ ರೈತರಿಗೆ ಜಮೀನು ಅಂದ್ರೆ ಪ್ರಾಣ. ಆ ಜಮೀನಿನ ಪಹಣಿ (RTC) ಅಂದ್ರೆ ಅದು ಬರೀ ಕಾಗದ ಅಲ್ಲ. ಅದು ನಮ್ಮ ಉಸಿರು, ನಮ್ಮ ಆಸ್ತಿಯ ಕನ್ನಡಿ.

ಆದರೆ, ಎಷ್ಟೋ ಸಲ ಏನಾಗುತ್ತೆ ಅಂದ್ರೆ, ಪಹಣಿಯಲ್ಲಿ ನಮ್ಮ ಹೆಸರು ಒಂದಿರುತ್ತೆ, ಆಧಾರ್ ಕಾರ್ಡ್‌ನಲ್ಲಿ ಇನ್ನೊಂದಿರುತ್ತೆ. ಇಲ್ಲಾಂದ್ರೆ ನಮ್ಮ ಹೊಲ ಇರೋದು 2 ಎಕರೆ, ಆದ್ರೆ ಪಹಣೀಲಿ 1 ಎಕರೆ 30 ಗುಂಟೆ ಅಂತ ಬಿದ್ದಿರುತ್ತೆ.

ಒಂದು ಸಣ್ಣ ತಪ್ಪು ನೂರಾರು ಅಲೆದಾಟ

ನಾವೆಲ್ಲಾ ಅನುಭವಿಸಿದ ಹಾಗೆ, ಪಹಣಿಯಲ್ಲಿ ಒಂದು ಸಣ್ಣ ಅಕ್ಷರ ತಪ್ಪಿದ್ರೂ ಅಥವಾ ಗುಂಟೆ ಲೆಕ್ಕ ಹೆಚ್ಚು-ಕಡಿಮೆಯಾದ್ರೂ ಸಾಕು, ನಮ್ಮ ನೆಮ್ಮದಿನೇ ಹಾಳಾಗ್ತಿತ್ತು.ಈ ಕಾಗುಣಿತದ ತಪ್ಪುಗಳು ನಮ್ಮನ್ನ ಕಾಡುತ್ತಿದ್ದ ರೀತಿನೇ ಬೇರೆ. ಮೊದಲೆಲ್ಲಾ ಈ ತಪ್ಪುಗಳಾದಾಗ ನಾವು ಪಡಬಾರದ ಕಷ್ಟ ಪಡ್ತಿದ್ವಿ.

ಒಂದು ಸಣ್ಣ ತಿದ್ದುಪಡಿ ಮಾಡಿಸೋಕು ಕೂಡ, ನಮ್ಮೂರ ಕೆಲಸ ಬಿಟ್ಟು, ಬಸ್ಸಿಗೆ ದುಡ್ಡು ಕೊಟ್ಟುಕೊಂಡು ಎಸಿ (Assistant Commissioner) ಸಾಹೇಬ್ರ ಆಫೀಸಿಗೆ ಅರ್ಜಿ ಹಿಡ್ಕೊಂಡು ಹೋಗ್ಬೇಕಿತ್ತು.

ಹಿಂದೆ ನಾವು ಪಡುತ್ತಿದ್ದ ಕಷ್ಟಗಳು ಎಂಥವು ಗೊತ್ತಾ

  • ಊರಿಂದ ತಾಲೂಕಿಗೆ, ತಾಲೂಕಿಂದ ಜಿಲ್ಲೆಗೆ ಅಲೆದು-ಅಲೆದು ಕಂಗಾಲಾಗುವ ಪರಿಸ್ಥಿತಿ ನಮ್ಮದಾಗಿತ್ತು.

  • ಆಫೀಸ್ ಮೆಟ್ಟಿಲು ಹತ್ತಿ-ಇಳಿದು, ಕಚೇರಿಯವರ ಹಿಂದೆ ಸುತ್ತಿ ನಮ್ಮ ಕಾಲಿನ ಚಪ್ಪಲಿನೇ ಸವೆದು ಹೋಗ್ತಿತ್ತು.

  • ಇಷ್ಟೆಲ್ಲಾ ಕಷ್ಟಪಟ್ಟು ವಾರಗಟ್ಟಲೆ, ತಿಂಗಳುಗಟ್ಟಲೆ ಕಾದರೂ ನಮ್ಮ ಕೈಗೆ ಮಾತ್ರ ಸರಿಯಾದ ಪಹಣಿ ಸಿಗ್ತಿರಲಿಲ್ಲ.

  • ಕಚೇರಿಯ ಬಾಬುಗಳ ಹಿಂದೆ ಸುತ್ತಿ-ಸುತ್ತಿ ರೈತರ ಬೆವರು, ಸಮಯ, ಹಣ ಎಲ್ಲವೂ ಮಣ್ಣುಪಾಲಾಗುತ್ತಿತ್ತು.

ರೈತರಿಗೀಗ ಶುರುವಾಗಿದೆ ಒಳ್ಳೇ ಕಾಲ

ಆದ್ರೆ, ರೈತ ಬಾಂಧವರೇ.. ಈಗ ಆ ಹಳೆಯ ಕಷ್ಟದ ದಿನಗಳು ಮುಗಿದಿವೆ ಕಚೇರಿಗಳಿಗೆ ಅಲೆಯುವ ಆ ಹಳೇ ಚಿಂತೆಯೆಲ್ಲಾ ಇನ್ಮುಂದೆ ಬಿಟ್ಟುಬಿಡಿ. ರೈತರು ಪಡುತ್ತಿದ್ದ ಈ ಗೋಳನ್ನು ತಪ್ಪಿಸಲು ನಮ್ ಸರ್ಕಾರ ಈಗ ಭರ್ಜರಿಯಾದ ಸಿಹಿಸುದ್ದಿಯೊಂದನ್ನು ಕೊಟ್ಟೈತೆ.

ನಮ್ಮ ಕಷ್ಟಕ್ಕೆಂದೇ, ನಮ್ಮ ಕೆಲಸ ಸುಲಭ ಮಾಡಲೆಂದೇ ಈಗ ಸರ್ಕಾರ ಪಹಣಿ ತಿದ್ದುಪಡಿ ಅದಾಲತ್ 2026 ಅನ್ನು ನಮ್ಮೂರಲ್ಲೇ ಶುರು ಮಾಡಿದೆ

ಇದನ್ನೂ ಓದಿ: ಕೃಷಿ ಜಮೀನಿನಲ್ಲಿ ಮನೆ ಕಟ್ಟಿದವರಿಗೆ ಬಂತು ಸಿಹಿಸುದ್ದಿ: ನಮೂನೆ 11ಬಿ ಖಾತೆ ಪಡೆಯುವ ಸಂಪೂರ್ಣ ಮಾಹಿತಿ

ಏನಿದು ಪಹಣಿ ತಿದ್ದುಪಡಿ ಅದಾಲತ್

ಮುಂಚೆಲ್ಲಾ ಪಹಣೀಲಿ ಒಂದ್ ಅಕ್ಷರ ತಪ್ಪಿದ್ರೂ ನಾವು ಎಸಿ (Assistant Commissioner) ಸಾಹೇಬ್ರ ಕಚೇರಿ ಹತ್ರ ಹೋಗಿ ಕೈಕಟ್ಟಿ ನಿಲ್ಲಬೇಕಿತ್ತು. ಆದ್ರೆ ಈಗ ಸರ್ಕಾರ ಆ ದೊಡ್ಡ ಅಧಿಕಾರನ ಅವರಿಂದ ತೆಗೆದು, ನೇರವಾಗಿ ನಮ್ಮದೇ ತಾಲೂಕಿನ ತಹಸೀಲ್ದಾರ್ ಸಾಹೇಬ್ರ ಕೈಗೆ ಕೊಟ್ಟೈತೆ

ಇದರರ್ಥ ಏನು ಗೊತ್ತಾ ನಮ್ಮೂರಿನ ಪಂಚಾಯತಿ ಕಟ್ಟೆಯಲ್ಲೇ ಸಿಗೋ ನಮ್ಮ ವಿಎ (Village Accountant – ಗ್ರಾಮಲೆಕ್ಕಿಗರು) ಮುಖಾಂತರಾನೇ ನಾವು ಕೆಲಸ ಶುರು ಮಾಡ್ಬೋದು. ಇಲ್ಲಾಂದ್ರೆ, ನೇರವಾಗಿ ನಮ್ಮ ತಾಲೂಕು ಕಚೇರಿಗೆ ಹೋದ್ರೂ ಸಾಕು, ನಮ್ಮ ಅರ್ಜಿ ಸ್ವೀಕಾರ ಮಾಡ್ತಾರೆ. ನಮ್ಮ ಕೆಲಸ ಬಹಳ ಸುಲಭವಾಗಿ ಆಗುತ್ತೆ.

ಈ ಅದಾಲತ್‌ನಿಂದ ನಮ್ಮ ರೈತರಿಗೆ ಆಗೋ ಲಾಭಗಳೇನು

  • ಅಲೆದಾಟಕ್ಕೆ ಬ್ರೇಕ್: ದೂರದ ಕಚೇರಿಗಳಿಗೆ ಅಲೆಯುವ ಬದಲು ನಮ್ಮ ತಾಲೂಕು ಕಚೇರಿಯಲ್ಲಿಯೇ ತ್ವರಿತ ಪರಿಹಾರ ಸಿಗುತ್ತದೆ.

  • ಸುಲಭ ಪ್ರಕ್ರಿಯೆ: ನಮ್ಮೂರಿನ ವಿಎ (VA) ಮೂಲಕ ಅಥವಾ ನೇರವಾಗಿ ತಹಸೀಲ್ದಾರ್ ಕಚೇರಿಯಲ್ಲಿ ಯಾವುದೇ ಗೊಂದಲವಿಲ್ಲದೆ ಅರ್ಜಿ ಸಲ್ಲಿಸಬಹುದು.

  • ಶೀಘ್ರ ತಿದ್ದುಪಡಿ: ನಮ್ಮ ಆರ್ ಟಿ ಸಿ (RTC) ಯಲ್ಲಿರೋ ತಪ್ಪುಗಳನ್ನ ತಿಂಗಳುಗಟ್ಟಲೆ ಕಾಯದೆ, ಬೇಗನೆ ತಿದ್ದಿಸ್ಕೊಬಹುದು.

ನಮ್ಮ ಪಹಣಿಯಲ್ಲಿರೋ ತಪ್ಪುಗಳನ್ನ ತಿದ್ದಿಸ್ಕೊಳ್ಳೋಕೆ ಇದಕ್ಕಿಂತ ಒಳ್ಳೆ ಟೈಮ್ ಇನ್ನೊಂದಿಲ್ಲ. ಇದೇ 2026-27ನೇ ಸಾಲಿನಲ್ಲಿ ಸರ್ಕಾರ ತಂದಿರೋ ಈ ವಿಶೇಷ ಅದಾಲತ್ ವ್ಯವಸ್ಥೆ ನಿಜಕ್ಕೂ ನಮ್ಮ ರೈತರ ಪಾಲಿಗೊಂದು ವರದಾನ. ಈ ಅವಕಾಶನ ಯಾರು ಕೂಡ ಮಿಸ್ ಮಾಡ್ಕೋಬ್ಯಾಡ್ರಿ.

ನಿರ್ಲಕ್ಷ್ಯ ಮಾಡ್ಬೇಡಿ

ಕೆಲವರು ಅನ್ಕೊಬಹುದು, ಹೋಗ್ಲಿ ಬಿಡಪ್ಪ, ಹೆಸ್ರಲ್ಲಿ ಒಂದ್ ಅಕ್ಷರ ತಾನೇ ತಪ್ಪಾಗಿರೋದು, ಅದ್ರಿಂದ ಏನಾಗುತ್ತೆ ಅಂತ. ಖಂಡಿತ ಹಂಗನ್ಕೋಬ್ಯಾಡ್ರಿ. ಈಗಿನ ಕಾಲದಲ್ಲಿ ಎಲ್ಲದಕ್ಕೂ ರೆಕಾರ್ಡ್ ಪಕ್ಕಾ ಇರ್ಬೇಕು. ನಿರ್ಲಕ್ಷ್ಯ ಮಾಡಿದ್ರೆ ಏನೇನು ತೊಂದರೆ ಆಗುತ್ತೆ ಅಂತೀರಾ ಇಲ್ಲಿದೆ ನೋಡಿ:

  • ಪಿಎಂ ಕಿಸಾನ್ ಹಣ ಬರಲ್ಲ: ನಿಮ್ಮ ಪಹಣೀಲಿ ಹೆಸ್ರು ತಪ್ಪಾಗಿದ್ರೆ, ಕೇಂದ್ರ ಸರ್ಕಾರ ಕೊಡೋ ಪಿಎಂ ಕಿಸಾನ್ (PM Kisan) ಯೋಜನೆಯ ದುಡ್ಡು ನಿಮ್ಮ ಅಕೌಂಟ್‌ಗೆ ಜಮಾ ಆಗಲ್ಲ.

  • ಬೆಳೆಹಾನಿ ಪರಿಹಾರ ಸಿಗಲ್ಲ: ಮಳೆ ಬಂದು ಬೆಳೆ ಹಾಳಾದಾಗ, ಸರ್ಕಾರ ಕೊಡೋ ಬೆಳೆಹಾನಿ ಪರಿಹಾರದ ಹಣನೂ ನಿಮ್ಮ ಕೈ ಸೇರಲ್ಲ.

  • ಬ್ಯಾಂಕ್ ಸಾಲಕ್ಕೆ ಕುತ್ತು: ಇನ್ನು ಕಷ್ಟ ಕಾಲಕ್ಕೆ ಬ್ಯಾಂಕಿಗೆ ಹೋಗಿ ಸಾಲ ಕೇಳ್ತೀವಿ ಅಂದ್ರೆ, ಅಲ್ಲಿ ಸಾಹೇಬ್ರು ನಿಮ್ಮ ಪಹಣೀಲಿ ಹೆಸ್ರು ಮ್ಯಾಚ್ ಆಗ್ತಿಲ್ಲಪ್ಪ ಅಂತ ವಾಪಸ್ ಕಳಿಸ್ತಾರೆ.

ಅದಕ್ಕೇ, ಮುಂದಾಗೋ ಈ ದೊಡ್ಡ ಅನಾಹುತಗಳನ್ನ ತಪ್ಪಿಸೋಕೆ ಈಗ್ಲೇ ಎಚ್ಚೆತ್ತುಕೊಂಡು ತಿದ್ದುಪಡಿ ಮಾಡಿಸ್ಕೊಳ್ಳಿ.

ಏನೇನು ತಿದ್ದುಪಡಿ ಮಾಡಿಸ್ಕೊಬಹುದು

ಈ ಅದಾಲತ್‌ನಲ್ಲಿ ಏನೇನು ಸರಿ ಮಾಡಿಸ್ಕೊಬಹುದು ಅಂತ ನೀವು ಕೇಳ್ಬೋದು. ನೀವು ಈ ಕೆಳಗಿನ ತಪ್ಪುಗಳನ್ನು ಬಹಳ ಸುಲಭವಾಗಿ ಸರಿಪಡಿಸಿಕೊಳ್ಳಬಹುದು:

  • ಹೆಸರಿನ ತಪ್ಪುಗಳು: ಅಕ್ಷರ ದೋಷಗಳು, ಕಾಗುಣಿತದ ತಪ್ಪುಗಳು, ಟೈಪಿಂಗ್ ಮಿಸ್ಟೇಕ್, ಒತ್ತಕ್ಷರಗಳು ತಪ್ಪಾಗಿದ್ರೆ ಸರಿ ಮಾಡ್ತಾರೆ.

  • ಇನಿಷಿಯಲ್ ಸೇರ್ಪಡೆ: ನಿಮ್ಮ ಹೆಸರಿನ ಮುಂದೆ ಇರೋ ಇನಿಷಿಯಲ್ (Initial) ಏನಾದ್ರೂ ಬಿಟ್ಟು ಹೋಗಿದ್ರೆ ಅದನ್ನ ಸೇರಿಸ್ಕೊಬಹುದು.

  • ಎಕರೆ-ಗುಂಟೆ ಲೆಕ್ಕ: ನಿಮ್ಮ ಜಮೀನಿನ ವಿಸ್ತೀರ್ಣ ಅಂದ್ರೆ ಎಕರೆ ಅಥವಾ ಗುಂಟೆ ತಪ್ಪಾಗಿ ನಮೂದಾಗಿದ್ರೆ ಸರಿಪಡಿಸಬಹುದು.

  • ಕರಾಬ್ ಜಾಗ ಮತ್ತು ಬೆಳೆ: ಕರಾಬ್ ಲ್ಯಾಂಡ್ ವಿವರ ಅಥವಾ ಬೆಳೆ ನಮೂದು ಆಗಿಲ್ಲ ಅಂದ್ರೆ ಅದನ್ನು ಕೂಡ ಈಗಲೇ ಅಪ್ಡೇಟ್ ಮಾಡಿಸ್ಕೊಬಹುದು.

ಇದನ್ನೂ ಓದಿ:  E-Chavadi: ಇ ಚಾವಡಿ ಮಾಹಿತಿ ನಮ್ಮೂರ ಜಮೀನಿನ ಜಾತಕ ಈಗ ನಿಮ್ಮ ಮೊಬೈಲ್‌ನಲ್ಲೇ

ಯಾವುದಕ್ಕೆ ಅವಕಾಶವಿಲ್ಲ

ಅರ್ಜಿ ಹಾಕೋಕೆ ಮುಂಚೆ ಈ ಒಂದು ವಿಚಾರ ನಿಮ್ಮ ತಲೇಲಿ ಪಕ್ಕಾ ಇರ್ಲಿ.

ಸರ್ಕಾರ ನಮಗೆ ಸಣ್ಣ-ಪುಟ್ಟ ತಪ್ಪುಗಳನ್ನ ಸರಿ ಮಾಡಿಕೊಳ್ಳೋಕೆ ಮಾತ್ರ ಈ ಸುವರ್ಣ ಅವಕಾಶ ಕೊಟ್ಟೈತೆ.

ಆದರೆ, ನಿಮ್ಮ ಪಹಣಿಯಲ್ಲಿರೋ ಪೂರ್ತಿ ಹೆಸರನ್ನೇ ತೆಗೆದುಹಾಕಿ, ಅದರ ಜಾಗದಲ್ಲಿ ಬೇರೆಯವರ ಹೆಸರನ್ನ ಹಾಕಿಸ್ತೀವಿ ಅಂದ್ರೆ ಅದು ಖಂಡಿತಾ ನಡೆಯಲ್ಲ.

ಉದಾಹರಣೆಗೆ ಸುಲಭವಾಗಿ ಅರ್ಥ ಮಾಡ್ಕೊಳಿ:

  • ಪಹಣಿಯಲ್ಲಿ ರಾಮಣ್ಣ ಅಂತ ಇದ್ರೆ, ಅದನ್ನ ಪೂರ್ತಿಯಾಗಿ ಅಳಿಸಿ ಭೀಮಣ್ಣಅಂತ ಹೊಸದಾಗಿ ಬರೆಯೋಕೆ ತಹಸೀಲ್ದಾರ್ ಆಫೀಸಲ್ಲಿ ಒಪ್ಪಲ್ಲ.

  • ಒಬ್ಬರ ಹೆಸರನ್ನು ಸಂಪೂರ್ಣವಾಗಿ ತೆಗೆದು, ಆ ಜಾಗಕ್ಕೆ ಇನ್ನೊಬ್ಬರ ಹೆಸರನ್ನು ಸೇರಿಸಲು ಇಲ್ಲಿ ಅಧಿಕಾರವಿಲ್ಲ.

ಹಾಗಾದ್ರೆ ಇಂತ ದೊಡ್ಡ ಬದಲಾವಣೆಗೆ ದಾರಿ ಏನು

  • ಈ ತರಹದ ಪೂರ್ತಿ ಹೆಸರು ಬದಲಾವಣೆ ಮಾಡ್ಬೇಕು ಅಂದ್ರೆ, ನೀವು ಕಡ್ಡಾಯವಾಗಿ ಕೋರ್ಟ್ (ನ್ಯಾಯಾಲಯದ) ಮೆಟ್ಟಿಲು ಹತ್ತಲೇಬೇಕು.

  • ನ್ಯಾಯಾಲಯದಿಂದ ತೀರ್ಪು ಅಥವಾ ಆದೇಶ ತಂದ್ರೆ ಮಾತ್ರ ಆ ಕೆಲಸ ಆಗುತ್ತೆ.

ಈ ಪಹಣಿ ತಿದ್ದುಪಡಿ ಅದಾಲತ್ಇ ರೋದು ಕೇವಲ ನಿಮ್ಮ ಹೆಸರಿನ ಕಾಗುಣಿತದ ತಪ್ಪು, ಇನಿಷಿಯಲ್ ಸೇರಿಸೋದು, ಅಥವಾ ಎಕರೆ-ಗುಂಟೆ ಲೆಕ್ಕದಲ್ಲಿ ಆಗಿರೋ ಸಣ್ಣ-ಪುಟ್ಟ ತಪ್ಪುಗಳನ್ನ ಸರಿಪಡಿಸೋಕೆ ಮಾತ್ರ.

ಇದನ್ನ ಬಿಟ್ಟು ಪೂರ್ತಿ ಜಮೀನಿನ ಮಾಲೀಕತ್ವವನ್ನೇ ಬದಲಾಯಿಸುವಂತಹ ದೊಡ್ಡ-ದೊಡ್ಡ ಬದಲಾವಣೆಗೆ ಇಲ್ಲಿ ಅವಕಾಶ ಕಲ್ಪಿಸಿಲ್ಲ. ಇದನ್ನ ನೆನಪಲ್ಲಿ ಇಟ್ಕೊಂಡು, ಸರಿಯಾದ ದಾಖಲೆಗಳನ್ನ ಕೊಟ್ಟು ನಿಮ್ಮ ಕೆಲಸ ಮಾಡಿಸ್ಕೊಳಿ.

ಬೇಕಾಗುವ ಮುಖ್ಯ ದಾಖಲೆಗಳು

ಸುಮ್ನೆ ಆಫೀಸ್‌ಗೆ ಹೋದ್ರೆ ಕೆಲಸ ಆಗಲ್ಲ ನೋಡ್ರಿ. ಈ ಕೆಳಗಿನ ನಾಲ್ಕು ಕಾಗದ-ಪತ್ರಗಳನ್ನ ಸರಿಯಾಗಿ ರೆಡಿ ಮಾಡ್ಕೊಂಡು ಹೋಗ್ಬೇಕು:

  • ಪ್ರಸ್ತುತ ಪಹಣಿ (Current RTC): ಈಗ ನಿಮ್ಮ ಹತ್ರ ಇರೋ, ತಪ್ಪು ನಮೂದಾಗಿರೋ ಪಹಣಿಯ ಒರಿಜಿನಲ್ ಅಥವಾ ಪ್ರಿಂಟ್ ಔಟ್.

  • ಆಧಾರ್ ಕಾರ್ಡ್: ನಿಮ್ಮ ಸರಿಯಾದ ಹೆಸರಿರುವ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ.

  • ಸ್ವಯಂ ದೃಢೀಕರಣ ಪತ್ರ: 20 ರೂಪಾಯಿ ಅಥವಾ 100 ರೂಪಾಯಿ ಸ್ಟಾಂಪ್ ಪೇಪರ್ (Stamp Paper) ತಗೊಂಡು, ನೀವು ಅದರಲ್ಲಿ ವಿವರಗಳನ್ನ ಭರ್ತಿ ಮಾಡಿಸಬೇಕು.

  • ಲಿಖಿತ ಅರ್ಜಿ: ತಹಸೀಲ್ದಾರ್ ಅವರಿಗೆ ಮ್ಯಾನುವಲ್ ಆಗಿ ನಿಮ್ಮ ಕೈಯಾರೆ ಒಂದು ಅರ್ಜಿ ಬರೆಯಬೇಕು.

ಇದನ್ನೂ ಓದಿ: ನಿಮ್ಮ ಜಮೀನಿನ ಪಹಣಿಯಲ್ಲಿ ಬೇರೆಯವರ ಹೆಸರಿದೆಯಾ ಹುಷಾರ್ ಆರ್.ಟಿ.ಸಿ ಕಾಲಂ3 9 ಮತ್ತು 12ರ ಅಸಲಿ ಕಥೆ ಇಲ್ಲಿದೆ.

ಅರ್ಜಿ ಹಾಕೋದು ಹೆಂಗೆ? ಇಲ್ಲಿದೆ ನೋಡಿ ಸುಲಭ ದಾರಿ

ರೈತ ಬಾಂಧವರೇ, ಅರ್ಜಿ ಹಾಕೋದು ದೊಡ್ಡ ಬ್ರಹ್ಮವಿದ್ಯೆ ಏನಲ್ಲ. ಯಾರಿಗೋ ದುಡ್ಡು ಕೊಟ್ಟು ಅಲೆಯೋ ಬದಲು, ಬಹಳ ಸುಲಭವಾಗಿ ನೀವೇ ಖುದ್ದಾಗಿ ಹೋಗಿ ಅರ್ಜಿ ಕೊಡಬಹುದು.

ಹೇಗೆ ಅಂತೀರಾ ಈ ಕೆಳಗಿನಂತಿವೆ ನೋಡಿ ಸುಲಭದ ಹೆಜ್ಜೆಗಳು:

  • ಕಾಗದಗಳನ್ನ ಜೋಡಿಸಿ: ಮೊದಲು ನಾವು ಮೇಲೆ ಹೇಳಿದ ಎಲ್ಲಾ ಕಾಗದ-ಪತ್ರಗಳನ್ನ (ಪಹಣಿ, ಆಧಾರ್, ಸ್ಟಾಂಪ್ ಪೇಪರ್) ಸರಿಯಾಗಿ ಒಂದರ ಮೇಲೊಂದು ಇಟ್ಟು, ಜಾರದ ಹಾಗೆ ಭದ್ರವಾಗಿ ಒಂದು ಪಿನ್ ಹಾಕ್ರಿ.

  • ತಾಲೂಕು ಕಚೇರಿಗೆ ನಡೀರಿ: ಆಮೇಲೆ ಆ ಅರ್ಜಿ ಹಿಡ್ಕೊಂಡು ನೇರವಾಗಿ ನಿಮ್ಮ ಹತ್ತಿರದ ತಾಲೂಕು ಕಚೇರಿಗೆ (Taluk Office) ಹೋಗಿ.

  • ಇನ್ವರ್ಡ್ ವಿಭಾಗ ಹುಡ್ಕಿ: ಕಚೇರಿ ಒಳಗೆ ಹೋದ ಮೇಲೆ, ಈ ಪಹಣಿ ಅದಾಲತ್‌ಗಾಗಿನೇ ಒಂದು ಪ್ರತ್ಯೇಕವಾದ ಇನ್ವರ್ಡ್ ವಿಭಾಗ (Inward Section) ಅಂತ ಒಂದು ರೂಮ್ ಓಪನ್ ಮಾಡಿರ್ತಾರೆ. ಅದನ್ನ ಕೇಳಿ ತಿಳಿದುಕೊಳ್ಳಿ.

  • ಖುದ್ದಾಗಿ ಅರ್ಜಿ ಕೊಡಿ: ಆಫೀಸ್ ಹೊರಗಡೆ ಸಿಗೋ ದಲ್ಲಾಳಿಗಳ (Brokers) ಕೈಗೆಲ್ಲಾ ಅರ್ಜಿ ಕೊಡೋಕೆ ಹೋಗ್ಬ್ಯಾಡ್ರಿ. ಆ ರೂಮಿಗೆ ನೀವೇ ಕುದ್ದಾಗಿ ಹೋಗಿ, ಸಾಹೇಬ್ರ ಕೈಗೆ ನಿಮ್ಮ ಅರ್ಜಿಯನ್ನ ಕೊಡಿ.

ಇದನ್ನ ಮರಿಬ್ಯಾಡ್ರಿ

ಅರ್ಜಿ ಕೊಟ್ಟೆ ಬಿಟ್ಟೆನಪ್ಪಾ, ನನ್ ಕೆಲ್ಸ ಮುಗೀತು ಅಂತ ಸುಮ್ನೆ ಖಾಲಿ ಕೈಯಲ್ಲಿ ಮನೆಗೆ ವಾಪಸ್ ಬರ್ಬ್ಯಾಡ್ರಿ ನೀವು ಅರ್ಜಿ ಕೊಟ್ಟ ತಕ್ಷಣ, ಅಲ್ಲಿರೋ ಸಾಹೇಬ್ರ ಕಡೆಯಿಂದ ನಿಮ್ಮ ಅರ್ಜಿ ತಗೊಂಡಿದ್ದಕ್ಕೆ ಒಂದು ಸ್ವೀಕೃತಿ ಪತ್ರ (Acknowledgement) ಕೊಡ್ತಾರೆ. ಅದನ್ನ ಕಡ್ಡಾಯವಾಗಿ ಇಸ್ಕೊಂಡೇ ಬನ್ನಿ.

ಯಾಕಂದ್ರೆ, ನಾಳೆ ದಿನ ಕಚೇರಿಗೆ ಹೋದಾಗ ನಮ್ಮ ಕೆಲಸ ಎಲ್ಲಿಯವರೆಗೆ ಬಂತು ಅಂತ ಕೇಳೋಕೆ ಈ ಚೀಟಿನೇ ನಮಗೆ ದೊಡ್ಡ ಆಧಾರ. ಇದನ್ನ ಮಾತ್ರ ಹುಷಾರಾಗಿ ಮಡಚಿ ಇಟ್ಕೊಳಿ.

ಕೇವಲ 15 ದಿನ ಸಾಕು, ಖರ್ಚು ಬರೀ 50 ರೂಪಾಯಿ

ರೈತ ಬಾಂಧವರೇ, ಅರ್ಜಿ ಕೊಟ್ಟ ತಕ್ಷಣ ಕೆಲಸ ಆಗುತ್ತಾ ಎಷ್ಟು ದಿನ ಕಾಯ್ಬೇಕಪ್ಪಾ ಅಂತ ನೀವು ಕೇಳ್ಬೋದು. ಮೊದಲೆಲ್ಲಾ ಒಂದು ಸಣ್ಣ ಕೆಲಸಕ್ಕೂ ತಿಂಗಳುಗಟ್ಟಲೆ ಆಫೀಸ್‌ಗೆ ಅಲೀಬೇಕಿತ್ತು. ಆದ್ರೆ ಈಗ ಹಂಗಲ್ಲ ನಿಮ್ಮ ಕೆಲಸ ಬಹಳ ಬೇಗ ಆಗುತ್ತೆ.

  • ಬರೀ 15 ದಿನದೊಳಗೆ ಪರಿಹಾರ: ನೀವು ಸರಿಯಾದ ಕಾಗದ-ಪತ್ರ ಕೊಟ್ಟು, ಸ್ವೀಕೃತಿ ಪತ್ರ (Acknowledgement) ತಂದ್ಮೇಲೆ, ಬರೀ 15 ದಿನದೊಳಗೆ ನಿಮ್ಮ ಕೆಲಸ ಪಕ್ಕಾ ಆಗುತ್ತೆ.

  • ಹೊಸ ಪಹಣಿ ನಿಮ್ಮ ಕೈಗೆ: 15 ದಿನ ಕಳೀತು ಅಂದ್ರೆ ಸಾಕು, ನಿಮ್ಮ ಹೆಸರು ಅಥವಾ ಗುಂಟೆ ಲೆಕ್ಕ ಸರಿಯಾಗಿ ತಿದ್ದುಪಡಿಯಾಗಿರೋ ಹೊಸ ಪಹಣಿ ನಿಮ್ಮ ಕೈ ಸೇರುತ್ತೆ ನೋಡ್ರಿ. ಇದೇನು ತಿಂಗಳುಗಟ್ಟಲೆ ಕಾಯೋ ಕೆಲಸ ಅಲ್ಲ.

  • ಸರ್ಕಾರಿ ಫೀಸ್ ಎಷ್ಟಪ್ಪಾ: ಈ ಕೆಲಸಕ್ಕೆ ಸರ್ಕಾರ ನಿಗದಿ ಮಾಡಿರೋ ಶುಲ್ಕ ಬರೀ 50 ರೂಪಾಯಿ ಅಷ್ಟೇ

ಹುಷಾರ್ ಮೋಸ ಹೋಗ್ಬ್ಯಾಡ್ರಿ ಆಫೀಸ್ ಹೊರಗಡೆ ನಿಂತ್ಕೊಂಡು ನಾನು ಬೇಗ ಮಾಡಿಸ್ಕೊಡ್ತೀನಿ ಅನ್ನೋ ದಲ್ಲಾಳಿಗಳ (Brokers) ಮಾತು ಕೇಳಿ ಸಾವಿರಾರು ರೂಪಾಯಿ ಸುರಿದು ಮೋಸ ಹೋಗ್ಬ್ಯಾಡ್ರಿ. ಬರೀ 50 ರೂಪಾಯೀಲಿ ಆಗೋ ಕೆಲಸಕ್ಕೆ ಸುಮ್ನೆ ಯಾಕೆ ದಂಡ ಕಟ್ತೀರಾ ನೀವೇ ಖುದ್ದಾಗಿ ಹೋಗಿ ಕೆಲಸ ಮಾಡಿಸ್ಕೊಳಿ.

ಅರ್ಜಿ ಹಾಕೋಕೆ ಕೊನೆ ದಿನಾಂಕ ಯಾವಾಗ

ಈ ಪಹಣಿ ತಿದ್ದುಪಡಿ ಅದಾಲತ್ ಈಗಾಗಲೇ ಇದೇ ಮಾರ್ಚ್ ತಿಂಗಳಿಂದಾನೇ ಭರ್ಜರಿಯಾಗಿ ಶುರುವಾಗಿದೆ. ತಾಲೂಕು ಕಚೇರಿಯಲ್ಲಿ ಅರ್ಜಿ ತಗೋಳೋಕೆ ಶುರು ಮಾಡಿದ್ದಾರೆ.

  • ಕೊನೆಯ ದಿನಾಂಕ: ಈ ಸುವರ್ಣ ಅವಕಾಶ ಈ ವರ್ಷದ ಕೊನೆ ತನಕ, ಅಂದ್ರೆ ಡಿಸೆಂಬರ್ 31, 2026 ರ ವರೆಗೂ ಇರುತ್ತೆ.

ಇನ್ನೂ ಡಿಸೆಂಬರ್ ತನಕ ಟೈಮ್ ಐತಲ್ಲ ಬಿಡು ಅಂತ ಉಡಾಫೆ ಮಾಡ್ಬ್ಯಾಡ್ರಿ. ನಾಳೆ ಏನಾದ್ರೂ ಕಷ್ಟ ಬಂದಾಗ ಒದ್ದಾಡೋ ಬದಲು, ಈಗ್ಲೇ ಒಂದು ದಿನ ಟೈಮ್ ಮಾಡ್ಕೊಂಡು ಹೋಗಿ ನಿಮ್ಮ ಹೊಲದ ಪಹಣೀಲಿರೋ ತಪ್ಪುಗಳನ್ನ ಕೂಡಲೇ ಸರಿ ಮಾಡಿಸ್ಕೊಳ್ಳಿ. ನೆಮ್ಮದಿಯಾಗಿರಿ.

ಈ ಅದಾಲತ್ ಯಾವ ಜಿಲ್ಲೆಗಳಿಗೆ ಅನ್ವಯ ಆಗಲ್ಲ? ಇಲ್ಲಿದೆ ಪಕ್ಕಾ ಮಾಹಿತಿ

ರೈತ ಬಾಂಧವರೇ, ಸರ್ಕಾರ ಈ ಬಗ್ಗೆ ಒಂದು ಪಕ್ಕಾ ಆದೇಶ ಹೊರಡಿಸಿದೆ ನೋಡ್ರಿ. ಆದ್ರೆ, ಒಂದು ಸಣ್ಣ ವಿಚಾರ ನೀವು ತಿಳ್ಕೊಳ್ಬೇಕು. ಈ ಅದಾಲತ್ ಯೋಜನೆ ನಮ್ಮ ರಾಜ್ಯದ ಮೂರು ಜಿಲ್ಲೆಗಳಿಗೆ ಮಾತ್ರ ಅನ್ವಯ ಆಗಲ್ಲ.

ಆ ಮೂರು ಜಿಲ್ಲೆಗಳು ಯಾವ್ಯಾವು ಗೊತ್ತಾ

  • ದಕ್ಷಿಣ ಕನ್ನಡ

  • ಬೆಂಗಳೂರು ನಗರ

  • ಬೆಂಗಳೂರು ಗ್ರಾಮಾಂತರ

ಈ ಮೂರು ಜಿಲ್ಲೆಗಳನ್ನ ಹೊರತುಪಡಿಸಿ, ನಮ್ಮ ಯಾದಗಿರಿ, ಶೋರಾಪುರದ ಕಡೆಯ ರೈತರು ಸೇರಿದಂತೆ ಕರ್ನಾಟಕದ ಮೂಲೆ-ಮೂಲೆಯಲ್ಲಿರೋ ಉಳಿದೆಲ್ಲಾ ಜಿಲ್ಲೆಗಳ ರೈತರಿಗೆ ಈ ಅದಾಲತ್‌ನ ಲಾಭ ಭರ್ಜರಿಯಾಗಿ ಸಿಗತೈತೆ.

ಇದರ ಬಗ್ಗೆ ಸರ್ಕಾರದಿಂದ ಈಗಾಗಲೇ ಅಧಿಕೃತ ಆದೇಶ ಕೂಡ ಹೊರಬಿದ್ದೈತೆ. ಹಿಂಗಾಗಿ, ಯಾವ್ದೇ ಗೊಂದಲ ಇಟ್ಕೋಬ್ಯಾಡ್ರಿ. ನೇರವಾಗಿ ನಿಮ್ಮ ತಾಲೂಕು ಕಚೇರಿಗೆ ಹೋಗಿ ನಿಮ್ಮ ಕೆಲಸ ಮಾಡಿಸ್ಕೊಳಿ.

ಇದನ್ನೂ ಓದಿ: Super El Nino Impact: ಈ ವರ್ಷವೂ ಮಳೆರಾಯ ಕೈಕೊಡ್ತಾನಾ ರೈತರೇ ಎಚ್ಚರ ಬರ್ತಿದೆ ಸೂಪರ್ ಎಲ್ ನಿನೋ

ಈ ಸುವರ್ಣ ಅವಕಾಶ ಮಿಸ್ ಮಾಡ್ಕೋಬ್ಯಾಡ್ರಿ

ರೈತ ಅಣ್ಣ-ತಮ್ಮಂದಿರೇ, ದಿನಬೆಳಗಾದ್ರೆ ಹೊಲದಲ್ಲಿ ದುಡಿಯೋ ನಮಗೆ, ಈ ಕಚೇರಿಗಳಿಗೆ ಅಲೆಯೋದು ಅಂದ್ರೆ ಜೀವ ಬಾಯಿಗೆ ಬರುತ್ತೆ. ಆದ್ರೆ ಈಗ ಸರ್ಕಾರವೇ ನಮ್ಮ ಮನೆ ಬಾಗಿಲಿಗೆ ಒಂದು ಸುವರ್ಣ ಅವಕಾಶ ತಂದುಕೊಟ್ಟೈತೆ.

ನಾಳೆ ಪಿಎಂ ಕಿಸಾನ್ ದುಡ್ಡು ಬರಲಿಲ್ಲ, ಬೆಳೆ ವಿಮೆ ಸಿಗಲಿಲ್ಲ, ಬ್ಯಾಂಕ್ ಸಾಲ ಸಿಗಲಿಲ್ಲ ಅಂತ ಕಷ್ಟ ಬಂದಾಗ ಪರದಾಡೋದು ಬೇಡ.

ನೆನಪಿರಲಿ, ನಿಮ್ಮ ಜಮೀನು ನಿಮ್ಮ ಹಕ್ಕು:

  • ಒಂದು ದಿನ ಮೀಸಲಿಡಿ: ಈಗ್ಲೇ ಒಂದೇ ಒಂದು ದಿನ ನಿಮ್ಮ ಹೊಲದ ಕೆಲಸ ಬದಿಗಿಟ್ಟು ತಾಲೂಕ್ ಆಫೀಸ್‌ಗೆ ಹೋಗಿ ಬನ್ನಿ.

  • ಕೂಡಲೇ ಸರಿಪಡಿಸಿಕೊಳ್ಳಿ: ನಿಮ್ಮ ಪಹಣೀಲಿರೋ ತಪ್ಪುಗಳನ್ನ ಈಗಲೇ, ಸುಲಭವಾಗಿ ಸರಿ ಮಾಡಿಸ್ಕೊಳ್ಳಿ. ಮುಂದಾಗೋ ಅನಾಹುತ ತಪ್ಪಿಸಿ.

  • ಮಧ್ಯವರ್ತಿಗಳ ಹಾವಳಿ ಬೇಡ: ಕೇವಲ 50 ರೂಪಾಯಿ ಕಟ್ಟಿ ನೀವೇ ನೇರವಾಗಿ ಅರ್ಜಿ ಕೊಡಿ. ಯಾರಿಗೋ ದುಡ್ಡು ಕೊಟ್ಟು ಮೋಸ ಹೋಗ್ಬ್ಯಾಡ್ರಿ.

ನಮ್ಮೂರ ಕಡೆ ಒಂದು ಮಾತೈತೆ, ಒಳ್ಳೆ ವಿಷಯನ ಹಂಚಿದ್ರೆ ಪುಣ್ಯ ಬರುತ್ತೆ ಅಂತ. ಹಾಗಾಗಿ, ಈ ಉಪಯುಕ್ತ ಮಾಹಿತಿಯನ್ನ ಬರೀ ನೀವೊಬ್ಬರೇ ಓದಿ ಸುಮ್ಮನಾಗಬ್ಯಾಡ್ರಿ.

ಸಂಜೆ ನಿಮ್ಮೂರಿನ ಅರಳಿಕಟ್ಟೆಯಲ್ಲಿ ಕೂತಾಗ, ಚಹಾ ಅಂಗಡಿಯಲ್ಲಿ ಸಿಕ್ಕಾಗ, ಅಥವಾ ನಿಮ್ಮ ಪಕ್ಕದ ಹೊಲದ ರೈತ ಮಿತ್ರರಿಗೂ ಈ ವಿಷಯ ತಿಳಿಸಿ. ಅವರಿಗೂ ಕೂಡ ಇದರ ಲಾಭ ಸಿಗುವಂತೆ ಮಾಡೋಣ. ನಾಡಿಗೆ ಅನ್ನ ಹಾಕೋ ನಮ್ಮ ರೈತ ಕುಲಕ್ಕೆ ಯಾವತ್ತೂ ಒಳ್ಳೆದಾಗಲಿ.

ನಿಮ್ಮ ಹೊಲದ ಪಹಣಿಯಲ್ಲಿ ತಪ್ಪುಗಳಿವಿಯೇ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಬೆಂಬಲವೇ ನಮಗೆ ಶ್ರೀರಕ್ಷೆ:

  • ನಿಮಗೆ ಈ ಲೇಖನ ಇಷ್ಟವಾಗಿದ್ದರೆ, ದಯವಿಟ್ಟು ಈ ಪೋಸ್ಟ್ ಅನ್ನು ನಿಮ್ಮ ವಾಟ್ಸಾಪ್ (WhatsApp) ಗ್ರೂಪ್‌ಗಳಲ್ಲಿ ಮತ್ತು ಇತರ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ (Share ಮಾಡಿ)!

  • ಇನ್ನು ನಿಮಗೆ ಕೃಷಿಗೆ ಸಂಬಂಧಿಸಿದ ಅಥವಾ ಬೇರೆ ಯಾವುದಾದರೂ ಸರ್ಕಾರಿ ಯೋಜನೆಯ ಮಾಹಿತಿ ಬೇಕಿದ್ದರೆ, ದಯವಿಟ್ಟು ಕೆಳಗೆ ಕಾಮೆಂಟ್ (Comment) ಮಾಡಿ ತಿಳಿಸಿ.

Leave a Comment