ಗೃಹ ಜ್ಯೋತಿ ಯೋಜನೆ ಉಚಿತ ವಿದ್ಯುತ್ ಲೆಕ್ಕಾಚಾರ 200 ಯೂನಿಟ್ ಫ್ರೀ ಅಸಲಿ ಸತ್ಯ ಇಲ್ಲಿದೆ! | Gruha Jyothi Scheme
ಸಂಜೆಯಾದ್ರೆ ಸಾಕು, ನಮ್ಮೂರಿನ ಅಶ್ವತ್ಥಕಟ್ಟೆ ಮೇಲೆ ಕೂತು ಮಾತಾಡೋರಿಗೆ ಇಲ್ಲಾ ಟೀ ಅಂಗಡಿ ಹತ್ರ ಸೇರೋರಿಗೆ ಈಗ ಒಂದೇ ದೊಡ್ಡ ವಿಷಯ ಅದೇನಪ್ಪಾ ಅಂದ್ರೆ, ಈ ಗೃಹ ಜ್ಯೋತಿ ಯೋಜನೆ ಸರ್ಕಾರ 200 ಯೂನಿಟ್ ಉಚಿತ ಕರೆಂಟ್ ಕೊಡ್ತೀವಿ ಅಂತ ಹೇಳೈತೆ.
ಆದ್ರೆ ನಮ್ಮ ಮನೆಗೆ ಬಿಲ್ ಜೀರೋ ಬರುತ್ತಾ ಅಥವಾ ನಾವು ಬಿಲ್ ಕಟ್ಟಬೇಕಾ ಅನ್ನೋದೇ ಈಗ ಎಲ್ಲರ ತಲೆನೋವು. ಊರಲ್ಲಿ ಯಾರ್ಯಾರೋ ಏನೇನೋ ಲೆಕ್ಕ ಹೇಳ್ತಾರೆ. ಕೆಲವರು ನಮಗೇನು ಬಿಲ್ ಬರಲ್ಲ ಬಿಡು ಅಂತಾರೆ.
ಇನ್ನೊಬ್ಬರು ಇಲ್ಲ ಕಣಪ್ಪ ನಾವೆಲ್ಲಾ ಬಿಲ್ ಕಟ್ಟಲೇಬೇಕು ಅಂತಾರೆ.ಆದ್ರೆ ಈ ಕರೆಂಟ್ ಬಿಲ್ ಲೆಕ್ಕಾಚಾರದ ಅಸಲಿ ಗುಟ್ಟು ಏನು ಅಂತ ನಮಗ್ಯಾರಿಗೂ ಸರಿಯಾಗಿ ಗೊತ್ತಾಗ್ತಾ ಇಲ್ಲ ಅಲ್ವಾ
ಅದಕ್ಕೆ ಅಂದ್ಕೊಂಡೆ, ನಮ್ಮ ಜನಕ್ಕೆಆಪ್ತವಾಗಿ ಕಥೆ ಹೇಳಿದಂಗೆ ಈ ಲೆಕ್ಕಾನ ಬಿಡಿಸಿ ಹೇಳೋಣ ಅಂತ. ಈ ಲೇಖನಾನ ಪೂರ್ತಿಯಾಗಿ ನಿಧಾನಕ್ಕೆ ಓದಿ.ನಿಮ್ಮ ಕರೆಂಟ್ ಬಿಲ್ ಲೆಕ್ಕನ ನೀವೇ ನಿಮ್ಮ ಮೊಬೈಲ್‌ನಲ್ಲೋ ಕ್ಯಾಲ್ಕುಲೇಟರ್‌ನಲ್ಲೋ ಆರಾಮಾಗಿ ಮಾಡ್ಕೋಬಹುದು.
ಗೃಹ ಜ್ಯೋತಿ ಯೋಜನೆ 200 ಯೂನಿಟ್ ಅಸಲಿ ಸತ್ಯ
ಊರ ಕಟ್ಟೆ ಮೇಲೆ, ಟೀ ಅಂಗಡಿಗಳಲ್ಲಿ ಈಗ ಎಲ್ಲರೂ ಮಾತಾಡೋದು ಒಂದೇ ವಿಷಯ. ಅಣ್ಣಾ, ನಮಗೆಲ್ಲಾ 200 ಯೂನಿಟ್ ತನಕ ಕರೆಂಟ್ ಫ್ರೀ ಕಣಪ್ಪ ಇನ್ಮೇಲೆ ಎಷ್ಟೇ ಕರೆಂಟ್ ಉರಿಸಿದ್ರೂ ನಮಗೇನು ಕೇಳೋರಿಲ್ಲ, ಬಿಲ್ ಕಟ್ಟೋ ಹಾಗಿಲ್ಲ ಅಂತ.
ಆದ್ರೆ, ಸ್ವಲ್ಪ ನಿಲ್ಲಿ 200 ಯೂನಿಟ್ ಫ್ರೀ ಅಂದ್ಕೂಡಲೇ ನಿಮ್ಮ ಮನಸ್ಸಿನಲ್ಲಿರೋ ಈ ದೊಡ್ಡ ತಪ್ಪು ಕಲ್ಪನೆಯನ್ನ ಮೊದಲು ಆಚೆ ಹಾಕಿ. ಯಾಕಂದ್ರೆ, ಸರ್ಕಾರ ಕಣ್ಮುಚ್ಚಿಕೊಂಡು ಊರಲ್ಲಿರೋ ಎಲ್ಲರಿಗೂ ಒಂದೇ ಸಮನೆ 200 ಯೂನಿಟ್ ಫ್ರೀ ಕರೆಂಟ್ ಕೊಡ್ತಾ ಇಲ್ಲ ಕಣ್ರಪ್ಪಾ.
ಇಲ್ಲಿ ಸರ್ಕಾರ ಒಂದು ಸಣ್ಣ ಆದ್ರೆ ಕಟ್ಟುನಿಟ್ಟಾದ ಕಂಡೀಷನ್ ಹಾಕೈತೆ. ಅದೇನಪ್ಪಾ ಅಂದ್ರೆ, ನೀವು ಹೋದ ವರ್ಷದ ಲೆಕ್ಕದಲ್ಲಿ ಎಷ್ಟು ಕರೆಂಟ್ ಬಳಸಿದ್ದೀರೋ ಕೇವಲ ಅದರ ಆಧಾರದ ಮೇಲೆ ಮಾತ್ರ ನಿಮಗೆ ಫ್ರೀ ಕರೆಂಟ್ ಮಿತಿ ಎಷ್ಟು ಅಂತ ನಿರ್ಧಾರ ಆಗುತ್ತೆ. ಯಾರೋ ಪಕ್ಕದ ಮನೆಯವರು 200 ಯೂನಿಟ್ ಉರಿಸಿದ್ರು ಅಂತ, ನಮಗೂ 200 ಯೂನಿಟ್ ಫ್ರೀ ಸಿಗಲ್ಲ
ಇದನ್ನೂ ಓದಿ: PODI:ನಿಮ್ಮ ಜಮೀನಿನ ಪೋಡಿ ಆಗಿಲ್ಲವೇ? ಕಚೇರಿ ಅಲೆದಾಟ ತಪ್ಪಿಸಲು ಈ ಪ್ರಾಯೋಗಿಕ ಮಾಹಿತಿ ಓದಿ
ಸರ್ಕಾರದ ಲೆಕ್ಕಾಚಾರ ಶುರುವಾಗೋದು ಹೆಂಗೆ
ಬನ್ನಿ, ಈ ಲೆಕ್ಕಾನ ಬಿಡಿಸಿ ಹೇಳ್ತೀನಿ. ಸರ್ಕಾರ ಏನ್ ಮಾಡ್ತೈತೆ ಗೊತ್ತಾ ನಿಮ್ಮ ಹೊಸ ಬಿಲ್ ಲೆಕ್ಕ ಹಾಕೋಕೆ ಕಳೆದ ಆರ್ಥಿಕ ವರ್ಷದ ಹಳೆಯ ಲೆಕ್ಕ ತಗೋತೈತೆ. ಅಂದ್ರೆ,
ಹಿಂದಿನ ವರ್ಷದ (2024-2025ನೇ ಇಸವಿಯಲ್ಲಿ) ಪೂರ್ತಿ ಒಂದು ವರ್ಷ ನಿಮ್ಮ ಮನೆಯಲ್ಲಿ ನೀವು ಎಷ್ಟು ವಿದ್ಯುತ್ ಬಳಸಿದ್ದೀರಾ ಅಂತ ಆಫೀಸರ್ಸ್ ಮೊದಲು ನೋಡ್ತಾರೆ. ಹೋದ ವರ್ಷದ ಪೂರ್ತಿ 12 ತಿಂಗಳಲ್ಲಿ ನೀವು ಪ್ರತಿ ತಿಂಗಳು ಎಷ್ಟೆಷ್ಟು ಯೂನಿಟ್ ಕರೆಂಟ್ ಉರಿಸಿದ್ದೀರಾ,
ಬಿಲ್ ಎಷ್ಟೆಷ್ಟು ಬಂದಿತ್ತು ಅನ್ನೋದೇ ಇಲ್ಲಿ ಅತಿ ಮುಖ್ಯವಾದ ವಿಚಾರ. ಇದನ್ನೇ ಕರೆಂಟ್ ಆಫೀಸಿನ ಭಾಷೇಲಿ ಅಂದ್ರೆ ಅಧಿಕಾರಿಗಳ ಭಾಷೇಲಿ ವಾರ್ಷಿಕ ಸರಾಸರಿ ಬಳಕೆ (Annual Average Consumption) ಅಂತ ಕರೆಯೋದು.
ಅಂದ್ರೆ, ಹೋದ ವರ್ಷ ನೀವು ಕಡಿಮೆ ಕರೆಂಟ್ ಬಳಸಿ ಉಳಿತಾಯ ಮಾಡಿದ್ರೆ, ಈ ವರ್ಷ ನಿಮ್ಮ ಲೆಕ್ಕ ಬೇರೆ ಇರುತ್ತೆ. ಈ ಸರಾಸರಿ ಲೆಕ್ಕನ ನೀವು ಮನೆಯಲ್ಲೇ ಕೂತು ಹೆಂಗೆ ಮಾಡ್ಕೋಬಹುದು ಅನ್ನೋದನ್ನ ಇನ್ನಷ್ಟು ಸುಲಭವಾಗಿ ಬಿಡಿಸಿ ಹೇಳ್ತೀನಿ, ಮುಂದಕ್ಕೆ ಓದಿ.
ಕ್ಯಾಲ್ಕುಲೇಟರ್ ತಗೋಳಿ ಲೆಕ್ಕ ನೀವೇ ಮಾಡಿ
ಈಗ ನೀವೇನ್ ಮಾಡ್ಬೇಕು ಅಂದ್ರೆ, ಒಂದು ಕ್ಯಾಲ್ಕುಲೇಟರ್ ಇಲ್ಲಾ ಒಂದು ಪೆನ್ನು ಪೇಪರ್ ತಗೋಳಿ.ನಿಮ್ಮ ಮನೆಯ ಹೋದ ವರ್ಷದ ಕರೆಂಟ್ ಬಿಲ್ ನೋಡಿ, ಪ್ರತಿ ತಿಂಗಳು ಎಷ್ಟೆಷ್ಟು ಯೂನಿಟ್ ಬಳಸಿದ್ದೀರಾ ಅಂತ ಒಂದು ಕಡೆ ಬರ್ಕೊಳಿ. ಒಂದು ಸಣ್ಣ ಉದಾಹರಣೆ ಮೂಲಕ ಇದನ್ನ ಅರ್ಥ ಮಾಡ್ಕೊಳೋಣ ಬನ್ನಿ
-
ಮೊದಲನೇ ತಿಂಗಳು: 48 ಯೂನಿಟ್ ಬಳಕೆಯಾಗಿದೆ.
-
ಎರಡನೇ ತಿಂಗಳು: 52 ಯೂನಿಟ್ ಬಳಕೆಯಾಗಿದೆ.
-
ಮೂರನೇ ತಿಂಗಳು: 48 ಯೂನಿಟ್.
-
ನಾಲ್ಕನೇ ತಿಂಗಳು: 52 ಯೂನಿಟ್…
ಹೀಗೆ ಪೂರ್ತಿ 12 ತಿಂಗಳ ಯೂನಿಟ್ ಲೆಕ್ಕ ನಿಮ್ಮ ಮುಂದಿರಬೇಕು ಈಗ ಈ 12 ತಿಂಗಳ ಯೂನಿಟ್ ಗಳನ್ನ ಒಟ್ಟಿಗೆ ಸೇರಿಸಿ. ಅಂದ್ರೆ ಎಲ್ಲವನ್ನೂ ಕೂಡಿ. ಬಂದ ಒಟ್ಟು ಮೊತ್ತವನ್ನ 12 ರಿಂದ ಭಾಗ ಮಾಡಿ (Divide ಮಾಡಿ).
ಅವಾಗ ನಿಮಗೆ ಒಂದು ತಿಂಗಳ ಸರಾಸರಿ ಲೆಕ್ಕ ಎಷ್ಟಪ್ಪಾ ಅಂತ ನಿಖರವಾಗಿ ಸಿಗುತ್ತೆ.ಉದಾಹರಣೆಗೆ, ನಿಮ್ಮ 12 ತಿಂಗಳ ಒಟ್ಟು ಕರೆಂಟ್ 600 ಯೂನಿಟ್ ಆಗಿದ್ರೆ 600 ಅನ್ನು 12 ರಿಂದ ಭಾಗಿಸಿದರೆ, ತಿಂಗಳಿಗೆ 50 ಯೂನಿಟ್’ ಸರಾಸರಿ ಬಂತು ಅಂತ ಇಟ್ಕೊಳ್ಳೋಣ.
ಸರ್ಕಾರದಿಂದ ಸಿಗೋ 10% ಫ್ರೀ ಬೋನಸ್
ಇಲ್ಲೇ ನೋಡಿ ಅಸಲಿ ಮಜಾ ಇರೋದು. ಸರ್ಕಾರ ನಮ್ಮ ಮೇಲೆ ಸ್ವಲ್ಪ ಕರುಣೆ ತೋರೈತೆ.ನಿಮಗೆ ಸರಾಸರಿ 50 ಯೂನಿಟ್ ಬಂತು ಅಲ್ವಾ ಸರ್ಕಾರ ಏನ್ ಮಾಡುತ್ತೆ, ಈ 50 ಯೂನಿಟ್‌ಗೆ ಸುಮ್ನೆ ಬಿಡಲ್ಲ. ಅದರ ಜೊತೆಗೆ ಶೇಕಡಾ 10 ರಷ್ಟು (10%) ಹೆಚ್ಚುವರಿ ಯೂನಿಟ್ ಅನ್ನ ಉಚಿತವಾಗಿ ಬೋನಸ್ ಆಗಿ ಸೇರಿಸುತ್ತೆ.
-
50 ಯೂನಿಟ್‌ಗೆ 10% ಅಂದ್ರೆ ಎಷ್ಟು?
-
ಸರಿಯಾಗಿ 5 ಯೂನಿಟ್!
ಅಂದ್ರೆ ಲೆಕ್ಕ ಹೆಂಗಾಯ್ತು ಈಗ ನಿಮ್ಮ ಸರಾಸರಿ 50 ಯೂನಿಟ್ + ಸರ್ಕಾರದ ಹೆಚ್ಚುವರಿ 5 ಯೂನಿಟ್ = ಒಟ್ಟು 55 ಯೂನಿಟ್.ಈಗ ನಿಮ್ಮ ಮನೆಗೆ ಫಿಕ್ಸ್ ಆದ ಉಚಿತ ಕರೆಂಟ್ ಮಿತಿ ಬಂದು ಸರಿಯಾಗಿ 55 ಯೂನಿಟ್ ಅಂದ್ರೆ ನೀವು ಪ್ರತಿ ತಿಂಗಳು 55 ಯೂನಿಟ್ ವರೆಗೆ ಕರೆಂಟ್ ಬಳಸಿದ್ರೆ, ಒಂದು ರೂಪಾಯಿ ಕೂಡ ಬಿಲ್ ಕಟ್ಟೋ ಹಾಗಿಲ್ಲ ಪೂರ್ತಿಯಾಗಿ ನಿಮ್ಮ ಕರೆಂಟ್ ಬಿಲ್ ಜೀರೋ (Zero) ಬರುತ್ತೆ.
ಹಾಗಾದ್ರೆ 200 ಯೂನಿಟ್ ಫ್ರೀ ಯಾರಿಗೆ ಸಿಗುತ್ತೆ
ಇಷ್ಟೆಲ್ಲಾ ಓದಿದ ಮೇಲೆ, ಈಗ ನಿಮ್ಮ ತಲೇಲಿ ಒಂದು ದೊಡ್ಡ ಹುಳ ಬಿಟ್ಟಿರಬೇಕು ಅಲ್ವಾ ಏನ್ರೀ ಅಣ್ಣಾ ನೀವು ನಮಗೆ ಬರೀ 55 ಯೂನಿಟ್ 77 ಯೂನಿಟ್ ಅಂತ ಲೆಕ್ಕ ಹೇಳ್ತಿದ್ದೀರಾ ಆದ್ರೆ ಟಿವಿಯಲ್ಲಿ, ನ್ಯೂಸ್ ಪೇಪರ್ ಅಲ್ಲಿ ದಿನಾ 200 ಯೂನಿಟ್ ಫ್ರೀ 200 ಯೂನಿಟ್ ಫ್ರೀ ಅಂತ ಬೊಬ್ಬೆ ಹೊಡಿತಿದ್ದಾರಲ್ಲ, ಹಾಗಾದ್ರೆ ಅದು ಯಾರಿಗೆ ಅಂತ ನಿಮಗೆ ಅನ್ನಿಸ್ತಿರಬಹುದು.
ನಿಮ್ಮ ಡೌಟ್ ನೂರಕ್ಕೆ ನೂರು ಸರಿ ಕಣ್ರಪ್ಪಾ. ಆದ್ರೆ ಆ 200 ಯೂನಿಟ್ ಕಥೆನೇ ಬೇರೆ ಬಿಡಿಸಿ ಹೇಳ್ತೀನಿ ಕೇಳಿ.ಈ ಪೂರ್ತಿ 200 ಯೂನಿಟ್ ಫ್ರೀ ಅನ್ನೋದು ಊರಲ್ಲಿರೋ ಪ್ರತಿಯೊಬ್ಬರಿಗೂ ಸಿಗಲ್ಲ.ಮತ್ತೆ ಯಾರಿಗೆ ಸಿಗುತ್ತೆ
ಯಾರ ಮನೆಯಲ್ಲಿ ಮೊದಲಿನಿಂದಲೂ ಕರೆಂಟ್ ಬಳಕೆ ಭಾರಿ ಜಾಸ್ತಿ ಇರುತ್ತೋ, ಯಾರು ಶ್ರೀಮಂತರೋ ಅವರಿಗೆ ಮಾತ್ರ ಈ ಲೆಕ್ಕ ಅನ್ವಯ ಆಗುತ್ತೆ. ಅಂದ್ರೆ, ದೊಡ್ಡ ದೊಡ್ಡ ಬಂಗಲೆ ಇರೋರು, ದಿನಾಪೂರ್ತಿ ಎಸಿ (AC) ಓಡಿಸೋರು, ಇಲ್ಲಾ ಗೀಸರ್, ದೊಡ್ಡ ಫ್ರಿಡ್ಜ್ ಅಂತ ಕರೆಂಟ್ ನೀರಂಗೆ ಸುರಿಯೋರು ಇರ್ತಾರಲ್ಲ ಅಂತವರಿಗೆ ಮಾತ್ರ ಇದು.
ಯಾರು ಹೋದ ವರ್ಷ ಪ್ರತಿ ತಿಂಗಳೂ ಬಿಡದೆ ಸುಮಾರು 180 ರಿಂದ 200 ಯೂನಿಟ್ ಕರೆಂಟ್ ಸುಟ್ಟಿದ್ದಾರೋ, ಅವರ ‘ಸರಾಸರಿ ಲೆಕ್ಕ’ ತಾನಾಗೇ 200ರ ಹತ್ರ ಬಂದು ನಿಲ್ಲುತ್ತೆ. ಸರ್ಕಾರದ ನಿಯಮದ ಪ್ರಕಾರ, ಆ ರೀತಿ ಮೊದಲೇ ಜಾಸ್ತಿ ಕರೆಂಟ್ ಉರಿಸಿದವರಿಗೆ ಮಾತ್ರ ಈ ಪೂರ್ತಿ ‘200 ಯೂನಿಟ್’ ಫ್ರೀ ಮಿತಿ ಸಿಗುತ್ತೆ.
ಆದ್ರೆ ನಮ್ಮಂತ ಸಾಮಾನ್ಯ ಹಳ್ಳಿ ಜನಕ್ಕೆ, ಬರೀ ಒಂದೆರಡು ಬಲ್ಬು, ಒಂದು ಟಿವಿ ಉರಿಸೋರಿಗೆ ಆ 200 ಯೂನಿಟ್ ಲೆಕ್ಕಕ್ಕೆ ಬರೋದೇ ಇಲ್ಲ ಕಣ್ರಣ್ಣ ಯಾಕಂದ್ರೆ ನಮ್ಮ ಬಳಕೆ ಎಷ್ಟಿದೆಯೋ ಅಷ್ಟಕ್ಕೆ (ಅದಕ್ಕೆ 10% ಸೇರಿಸಿ) ಮಾತ್ರ ನಮಗೆ ಫ್ರೀ ಸಿಗುತ್ತೆ ಅನ್ನೋದೇ ಇದರ ಅಸಲಿ ಸತ್ಯ
ನಮ್ಮಂತ ಹಳ್ಳಿ ಜನಕ್ಕೆ, ಮಧ್ಯಮ ವರ್ಗಕ್ಕೆ ಎಷ್ಟು ಫ್ರೀ
ನಮ್ಮಂತ ಹಳ್ಳಿ ಜನ, ಕೂಲಿ ಮಾಡೋರು, ಮಧ್ಯಮ ವರ್ಗದೋರು, ರೈತರು ತಿಂಗಳಿಗೆ ಬಳಸೋದೇ 70 ರಿಂದ 80 ಯೂನಿಟ್ ಕರೆಂಟ್ ಅಷ್ಟೇ. ನಮ್ಮ ಮನೆಗಳಲ್ಲಿ ಏನಿರುತ್ತೆ ಹೇಳಿ
-
ಒಂದೆರಡು ಬಲ್ಬು.
-
ಒಂದು ಸಣ್ಣ ಟಿವಿ.
-
ಮಕ್ಳು ಓದಕ್ಕೆ ಅಂತ ಒಂದು ಲೈಟು.
-
ಫ್ಯಾನ್.
ಇಷ್ಟೇ ಅಲ್ವಾ ಇರೋದು ಅದಕ್ಕೆ ನಮ್ಮ ಸರಾಸರಿ 70 ಯೂನಿಟ್ ಇದ್ರೆ, ಅದರ ಜೊತೆ 10% (ಅಂದ್ರೆ 7 ಯೂನಿಟ್) ಸೇರಿ ಒಟ್ಟು 77 ಯೂನಿಟ್ ಫ್ರೀ ಸಿಗುತ್ತೆ.ಅಷ್ಟೇ ಹೊರತು ನಾವೇನೋ ಯಾವತ್ತೂ 70 ಯೂನಿಟ್ ಬಳಸ್ತಾ ಇದ್ದುಈಗ ಒಮ್ಮೆಗೆ 200 ಯೂನಿಟ್ ತನಕ ಉಚಿತವಾಗಿ ಉರಿಸ್ತೀವಿ ಅಂದ್ರೆ ಸರ್ಕಾರ ಒಪ್ಪಲ್ಲ ಕಣ್ರಿ ಯಾರ ಸರಾಸರಿ ಎಷ್ಟಿದೆಯೋ, ಅಷ್ಟಕ್ಕೆ ಮಾತ್ರ ಫ್ರೀ.
ಮಿತಿ ಮೀರಿ ಕರೆಂಟ್ ಉರಿಸಿದ್ರೆ ಏನಾಗುತ್ತೆ? ಹುಷಾರು
ಈಗ ನಿಮ್ಮ ಮನೆಯ ಫ್ರೀ ಕರೆಂಟ್ ಲೆಕ್ಕ 77 ಯೂನಿಟ್ ಅಂತಾನೇ ಫಿಕ್ಸ್ ಆಯ್ತು ಅಂತ ಇಟ್ಕೊಳಿ.ನೀವು ಪ್ರತಿ ತಿಂಗಳು ಆ 77 ಯೂನಿಟ್ ಒಳಗಡೆನೇ ಕರೆಂಟ್ ಬಳಸಿದ್ರೆ, ನೀವು ಪೂರ್ತಿ ಸೇಫ್ ನಿಮಗೆ ಯಾವ ಟೆನ್ಷನ್ ಇರಲ್ಲ, ಬಿಲ್ ಕೂಡ ಜೀರೋ ಬರುತ್ತೆ.
ಆದ್ರೆ, ಒಂದು ವೇಳೆ ನೀವು ಮುಂದಿನ ದಿನಗಳಲ್ಲಿ ಹೊಸದಾಗಿ ಏನಾದ್ರು ಕರೆಂಟ್ ಎಳೆಯೋ ಎಲೆಕ್ಟ್ರಾನಿಕ್ ವಸ್ತು ತಂದ್ರೆ, ಕಥೆ ಪೂರ್ತಿ ಉಲ್ಟಾ ಆಗುತ್ತೆ.ಯಾವ ತರಹದ ವಸ್ತುಗಳು ಅಂತೀರಾ ಉದಾಹರಣೆಗೆ ಇಲ್ಲಿದೆ ನೋಡಿ
-
ಹೊಸ ಎಲೆಕ್ಟ್ರಿಕ್ ಗಾಡಿ: ಪೆಟ್ರೋಲ್ ರೇಟ್ ಭಾರಿ ಜಾಸ್ತಿ ಆಯ್ತು ಅಂತ, ಹೊಸದಾಗಿ ಎಲೆಕ್ಟ್ರಿಕ್ ಸ್ಕೂಟರ್ (EV Scooter) ತಗೊಂಡು ಬಂದು ಮನೆಲೇ ಚಾರ್ಜ್‌ಗೆ ಹಾಕಿದ್ರೆ…
-
ದೊಡ್ಡ ಫ್ರಿಡ್ಜ್: ಬಿರು ಬೇಸಿಗೆ ಬಂತು, ನೀರು ತಣ್ಣಗಿರಲಿ ಅಂತ ಅಂಗಡಿಯಿಂದ ದೊಡ್ಡ ಫ್ರಿಡ್ಜ್ ತಂದು ಇಟ್ಕೊಂಡ್ರೆ…
-
ವಾಷಿಂಗ್ ಮೆಷಿನ್: ಬಟ್ಟೆ ಒಗೆಯೋಕೆ ಕಷ್ಟ ಅಂತ ವಾಷಿಂಗ್ ಮೆಷಿನ್ ತಂದು, ದಿನಾ ಕರೆಂಟ್ ಜಾಸ್ತಿ ಉರಿಸಿದ್ರೆ…
ಈ ತರಹ ಮಾಡಿದಾಗ ಏನಾಗುತ್ತೆ ಗೊತ್ತಾ ನಿಮ್ಮ ಕರೆಂಟ್ ಬಳಕೆ, ಪ್ರತಿ ತಿಂಗಳು ಬರುತ್ತಿದ್ದ 77 ಯೂನಿಟ್ ಇಂದ ಒಮ್ಮೆಲೇ 90 ಯೂನಿಟ್ ಗೆ ಏರಿತು ಅಂತ ಇಟ್ಕೊಳಿ. ಆಗ ಅಸಲಿ ಆಟ ಶುರುವಾಗುತ್ತೆ ನಿಮ್ಮ ಫ್ರೀ ಮಿತಿ ಇರೋದು ಕೇವಲ 77 ಯೂನಿಟ್. ಆದ್ರೆ ನೀವು ಬಳಸಿದ್ದು 90 ಯೂನಿಟ್.
ಆಗ ಆ ಹೆಚ್ಚುವರಿಯಾಗಿ ಬಳಸಿದ ಕರೆಂಟ್‌ಗೆ (ಅಂದ್ರೆ ಆ ಎಕ್ಸ್ಟ್ರಾ 13 ಯೂನಿಟ್‌ಗೆ) ನೀವೇ ನಿಮ್ಮ ಕೈಯಿಂದ ದುಡ್ಡು ಕೊಟ್ಟು ಕರೆಂಟ್ ಬಿಲ್ ಕಟ್ಟಲೇ ಬೇಕಾಗುತ್ತೆ ಯಾಕಂದ್ರೆ, ಸರ್ಕಾರ ನಿಮಗೆ ಕೊಟ್ಟಿರೋ ಗಡಿ ದಾಟಿದ್ರೆ ಬಿಲ್ ಕಟ್ಟಿಸ್ಕೊತಾರೆ.
ಅದಕ್ಕಿಂತ ಒಂದೇ ಒಂದು ಯೂನಿಟ್ ಮೇಲೆ ಹೋದರೂ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಕಣ್ರಪ್ಪಾ.ಹಾಗಾಗಿ, ಸರ್ಕಾರ ಫ್ರೀ ಕೊಟ್ಟೈತೆ ಬಿಡು ಅಂತ ಬೇಕಾಬಿಟ್ಟಿ ಕರೆಂಟ್ ಉರಿಸಬೇಡಿ, ಬುದ್ಧಿವಂತಿಕೆಯಿಂದ ಹುಷಾರಾಗಿ ಕರೆಂಟ್ ಬಳಸಿ.
ಇದನ್ನೂ ಓದಿ: ಆಯುರ್ವೇದ ಚಿಕಿತ್ಸೆಗೂ ಇನ್ಮುಂದೆ ನಗದು ರಹಿತ ವಿಮಾ ಸೌಲಭ್ಯ: 32 ಕಂಪನಿಗಳೊಂದಿಗೆ ಐತಿಹಾಸಿಕ ಒಪ್ಪಂದ
ಹಳೆಯ ಕರೆಂಟ್ ಬಿಲ್ ಸಿಕ್ಕಿಲ್ಲ ಅಂದ್ರೆ ಏನ್ ಮಾಡೋದು?
ಕೆಲವರು ಕೇಳ್ತಾರೆ, ಅಣ್ಣಾ ನಮ್ ಹತ್ರ ಹೋದ ವರ್ಷದ ಬಿಲ್ ಗಳೆಲ್ಲಾ ಎಲ್ಲೈತೆ ನಾವೆಲ್ಲಾ ಹಳೇ ಪೇಪರ್ ಗೆ ಹಾಕಿದ್ದೀವಿ ಇಲ್ಲಾ ಬಿಸಾಕಿಬಿಟ್ಟೀವಿ ಅಂತ.ಅದಕ್ಕೂ ಯೋಚನೆ ಮಾಡ್ಬೇಡಿ, ತಲೆ ಕೆಡಿಸ್ಕೊಬೇಡಿ. ನಿಮ್ಮ ಮನೆಗೆ ಕರೆಂಟ್ ಬಿಲ್ ಕೊಡೋಕೆ ಬರ್ತಾರಲ್ಲ ಆ ಲೈನ್ ಮ್ಯಾನ್ (Lineman) ಅಥವಾ ಮೀಟರ್ ರೀಡರ್ ಹತ್ರ ಕೇಳಿದ್ರೆ ಸಾಕು.
ಅಥವಾ ನಿಮ್ಮ ಹತ್ತಿರದ ಬೆಸ್ಕಾಂ (GESCOM) ಅಥವಾ ಮೆಸ್ಕಾಂ ಕರೆಂಟ್ ಆಫೀಸ್‌ಗೆ ಹೋಗಿ.ಅಲ್ಲಿ ನಿಮ್ಮ ಮನೆಯ ಆರ್.ಆರ್. ನಂಬರ್ (RR Number) ಇದು ಕರೆಂಟ್ ಬಿಲ್ ಮೇಲಿರುತ್ತೆ) ಹೇಳಿದ್ರೆ, ಅವರೇ ನಿಮ್ಮ ಹಳೆಯ ಲೆಕ್ಕಾನ ಕಂಪ್ಯೂಟರ್ ಅಲ್ಲಿ ನೋಡಿ ಪ್ರಿಂಟ್ ತೆಗೆದು ಕೊಡ್ತಾರೆ.
ಅರ್ಜಿ ಹಾಕೋದು ಮಾತ್ರ ಮರಿಬೇಡಿ ಕಣ್ರಪ್ಪಾ
ಇನ್ನೊಂದು ಮುಖ್ಯವಾದ ವಿಷಯ ನೆನಪಿರಲಿ ಸರ್ಕಾರನೇ ಕರೆಂಟ್ ಬಿಲ್ ಫ್ರೀ ಅಂದೈತೆ ಇನ್ನೇನು ನಮ್ಮ ಬಿಲ್ ತಾನಾಗೇ ಜೀರೋ ಆಗುತ್ತೆ ಅಂತ ಸುಮ್ನೆ ಮನೇಲಿ ಕೂತ್ರೇ ಬಿಲ್ ಜೀರೋ ಆಗಲ್ಲ ಗೃಹ ಜ್ಯೋತಿ ಯೋಜನೆಗೆ ನೀವು ಆನ್‌ಲೈನ್‌ನಲ್ಲಿ ಅರ್ಜಿ (Application) ಹಾಕಲೇಬೇಕು.
ಇದು ಕಡ್ಡಾಯ ಅರ್ಜಿ ಹಾಕಿದ್ರೆ ಮಾತ್ರ ಫ್ರೀ ಕರೆಂಟ್. ನಿಮ್ಮ ಊರಿನ ಗ್ರಾಮ ಒನ್, ನಾಡ ಕಚೇರಿ, ಅಥವಾ ಯಾವುದೇ ಕಂಪ್ಯೂಟರ್ ಸೆಂಟರ್ ಗೆ ಹೋಗಿ.ಸೇವಾ ಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಹಾಕಬಹುದು.
ಅರ್ಜಿ ಹಾಕಲು ಏನೇನು ಬೇಕು?
-
ನಿಮ್ಮ ಆಧಾರ್ ಕಾರ್ಡ್ (Aadhaar Card).
-
ನಿಮ್ಮ ಮನೆಯ ಕರೆಂಟ್ ಬಿಲ್ (RR Number ಇರೋದು).
-
ನಿಮ್ಮ ಮೊಬೈಲ್ ನಂಬರ್.
ಇಷ್ಟನ್ನ ಕೊಟ್ಟು ಒಮ್ಮೆ ಅಪ್ಲೈ ಮಾಡಿಬಿಟ್ರೆ, ಆಮೇಲೆ ನಿಮಗೆ ಈ ಉಚಿತ ಕರೆಂಟ್ ಸಿಗೋಕೆ ಶುರುವಾಗುತ್ತೆ. ಇದನ್ನ ಮಾತ್ರ ಯಾವತ್ತೂ ಮರಿಬೇಡಿ. ಆದಷ್ಟು ಬೇಗ ಅರ್ಜಿ ಹಾಕಿ.
ಇದನ್ನೂ ಓದಿ: ಅಮ್ಮನ ದುಡ್ಡು 300 ರೂ.ಮಗನಿಗೆ ಸಿಕ್ಕಿದ್ದು 634 ಕೋಟಿ! ಇಂಟರ್ನೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ.
ಗೃಹ ಜ್ಯೋತಿ ಲೆಕ್ಕಾಚಾರ
ಊರಲ್ಲಿ ಯಾರ್ಯಾರೋ ಏನೋ ಹೇಳ್ತಾರೆ ಅಂತ, ಅವರ ಬಾಯಿ ಮಾತಿಗೆ ಕಿವಿಕೊಟ್ಟು ಸುಮ್ನೆ ಗೊಂದಲ ಮಾಡ್ಕೋಬೇಡಿ. ನಿಮ್ಮ ಹಳೇ ಕರೆಂಟ್ ಬಿಲ್ ತಗೊಳ್ಳಿ, ನಿಮ್ಮ ಮನೆಯ ಲೆಕ್ಕ ನೀವೇ ಪಕ್ಕಾ ಮಾಡ್ಕೊಳಿ.
ನಿಮ್ಮ ಮನೆಗೆ ಎಷ್ಟು ಯೂನಿಟ್ ಫ್ರೀ ಅಂತ ಗೊತ್ತಾದ್ಮೇಲೆ ಅಷ್ಟರಲ್ಲೇ ಬುದ್ಧಿವಂತಿಕೆಯಿಂದ ಕರೆಂಟ್ ಬಳಸಿ ಇಲ್ಲಿ ನಾವು ಮುಖ್ಯವಾಗಿ ನೆನಪಿಡಬೇಕಾದದ್ದು.
-
ಫ್ರೀ ಇದೆ ಅಂತ ಪೋಲು ಮಾಡ್ಬೇಡಿ: ಸರಕಾರ ಉಚಿತವಾಗಿ ಕೊಡ್ತೈತೆ ಬಿಡಪ್ಪಾ ಅಂತ ಹಗಲೊತ್ತಲ್ಲೂ ಲೈಟು, ಫ್ಯಾನ್ ಬೇಕಾಬಿಟ್ಟಿ ಉರಿಸೋಕೆ ಹೋಗ್ಬೇಡಿ.
-
ವಿದ್ಯುತ್ ಉಳಿಸಿ: ನಾವು ಕರೆಂಟ್ ಉಳಿಸಿದ್ರೆ, ಅದು ನಮಗೂ ಒಳ್ಳೇದು, ನಮ್ಮ ದೇಶಕ್ಕೂ ಒಳ್ಳೇದು. ಜೊತೆಗೆ ನಾಳೆ ನಮ್ಮ ಮಕ್ಕಳ ಭವಿಷ್ಯಕ್ಕೂ ಒಳ್ಳೇದು.
-
ಒಂದು ಒಳ್ಳೆ ರೂಢಿ ಮಾಡ್ಕೊಳಿ: ಮನೆ ಬಿಟ್ಟು ಆಚೆ ಬರೋವಾಗ ಲೈಟ್, ಫ್ಯಾನ್, ಟಿವಿ ಸ್ವಿಚ್ ಆಫ್ ಮಾಡಿದ್ದೀನಾ ಅಂತ ಒಮ್ಮೆ ನೋಡ್ಕೊಳೋದನ್ನ ಅಭ್ಯಾಸ ಮಾಡ್ಕೊಳಿ.
ಈ ಲೇಖನ ಓದಿ ನಿಮಗೇನಾದ್ರು ಸ್ವಲ್ಪ ಅರ್ಥ ಆಗಿದ್ರೆ, ಇದು ಉಪಯೋಗ ಆಗುವಂತದ್ದು ಅಂತ ಅನ್ನಿಸಿದ್ರೆ, ಸುಮ್ನೆ ನೀವೊಬ್ಬರೇ ಓದಿ ಸುಮ್ಮನಾಗಬೇಡಿ’ ನಿಮ್ಮ ಅಕ್ಕ-ಪಕ್ಕದ ಮನೆಯವರಿಗೂ, ನೆಂಟರಿಗೂ, ದೋಸ್ತರಿಗೂ ಇದನ್ನ ಅರ್ಥ ಮಾಡಿಸಿ.
ನಿಮ್ಮ ಮೊಬೈಲ್‌ನಲ್ಲಿರೋ ವಾಟ್ಸಾಪ್ (WhatsApp) ಗ್ರೂಪ್‌ಗಳಿಗೆ, ಫೇಸ್‌ಬುಕ್‌ನಲ್ಲಿ (Facebook) ಈ ಲೇಖನಾನ ತಕ್ಷಣ ಶೇರ್ (Share) ಮಾಡಿ ನಮ್ಮ ಊರವರೆಲ್ಲರಿಗೂ ಈ ಅಸಲಿ ಲೆಕ್ಕಾಚಾರ ಸರಿಯಾಗಿ ಸುಲಭವಾಗಿ ಅರ್ಥ ಆಗ್ಲಿ.