Gramin Dak Sevak ನೇಮಕಾತಿ 2026: ಗ್ರಾಮೀಣ ಯುವಕರಿಗೆ ಸರ್ಕಾರಿ ಉದ್ಯೋಗದ ದೊಡ್ಡ ಅವಕಾಶ
ಭಾರತದ ಗ್ರಾಮೀಣ ಪ್ರದೇಶದ ಯುವಕರಿಗೆ ಸ್ಥಿರ ಆದಾಯ ಹಾಗೂ ಸರ್ಕಾರಿ ಸೇವೆಯ ಗೌರವ ದೊರಕಿಸಿಕೊಡುವ ಪ್ರಮುಖ ಅವಕಾಶವೆಂದರೆ ಗ್ರಾಮೀಣ ಡಾಕ್ ಸೇವಕ್ (GDS) ನೇಮಕಾತಿ. 2026ರ ಜನವರಿಯಲ್ಲಿ ಭಾರತೀಯ ಅಂಚೆ ಇಲಾಖೆ ಹೊಸ ಅಧಿಸೂಚನೆಯನ್ನು ಪ್ರಕಟಿಸಿದ್ದು, ದೇಶದ ವಿವಿಧ ರಾಜ್ಯಗಳ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಉದ್ಯೋಗದ ಜೊತೆಗೆ ಸಾಮಾಜಿಕ ಗೌರವವನ್ನೂ ಒದಗಿಸುತ್ತದೆ.
ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ?
ಈ ನೇಮಕಾತಿಯಡಿ ಬ್ರಾಂಚ್ ಪೋಸ್ಟ್ಮಾಸ್ಟರ್ (BPM), ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್ (ABPM) ಹಾಗೂ ಡಾಕ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. BPM ಹುದ್ದೆಯವರು ಶಾಖಾ ಅಂಚೆ ಕಚೇರಿಯ ಸಂಪೂರ್ಣ ಜವಾಬ್ದಾರಿ ವಹಿಸಬೇಕಾಗುತ್ತದೆ. ABPM ಹಾಗೂ ಡಾಕ್ ಸೇವಕರು ಅಂಚೆ ವಿತರಣೆ, ಸ್ಟಾಂಪ್ ಮಾರಾಟ, ಐಪಿಪಿಬಿ ವ್ಯವಹಾರಗಳಂತಹ ಕಾರ್ಯಗಳನ್ನು ನಿರ್ವಹಿಸಬೇಕು. ಈ ಹುದ್ದೆಗಳು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಒದಗಿಸುತ್ತವೆ.
ಅರ್ಹತಾ ಮಾನದಂಡಗಳು ಏನು?
GDS ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯಸ್ಸಿನೊಳಗಿರಬೇಕು. ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಶೈಕ್ಷಣಿಕ ಅರ್ಹತೆಯಾಗಿ ಮಾನ್ಯತೆಯಾದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಗಣಿತ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ಪಾಸ್ ಆಗಿರುವುದು ಕಡ್ಡಾಯ. ಜೊತೆಗೆ, ಸಂಬಂಧಿಸಿದ ರಾಜ್ಯದ ಸ್ಥಳೀಯ ಭಾಷೆ ಓದಿರಬೇಕು.
ಸಂಬಳ ಮತ್ತು ಭತ್ಯೆಗಳ ವಿವರ
ಗ್ರಾಮೀಣ ಡಾಕ್ ಸೇವಕರಿಗೆ ಟೈಮ್ ರಿಲೇಟೆಡ್ ಕಂಟಿನ್ಯುಯಿಟಿ ಅಲವಾನ್ಸ್ (TRCA) ರೂಪದಲ್ಲಿ ಸಂಬಳ ನೀಡಲಾಗುತ್ತದೆ. BPM ಹುದ್ದೆಗೆ ರೂ.12,000 ರಿಂದ ರೂ.29,380 ವರೆಗೆ, ABPM ಹಾಗೂ ಡಾಕ್ ಸೇವಕ್ ಹುದ್ದೆಗೆ ರೂ.10,000 ರಿಂದ ರೂ.24,470 ವರೆಗೆ ಸಂಬಳ ನಿಗದಿಯಾಗಿದೆ. ಪ್ರತಿ ವರ್ಷ ಶೇಕಡಾ 3ರಷ್ಟು ಹೆಚ್ಚಳವೂ ದೊರೆಯುತ್ತದೆ. ಜೊತೆಗೆ ಮಹಂಗಾಯಿ ಭತ್ಯೆ ಹಾಗೂ ಇತರೆ ಸಾಮಾಜಿಕ ಭದ್ರತಾ ಸೌಲಭ್ಯಗಳೂ ಲಭ್ಯ.
ಇದೇ ರೀತಿಯ ಹೊಸ ಉದ್ಯೋಗ ಅಧಿಸೂಚನೆಗಳು ಮತ್ತು ಅಪ್ಡೇಟ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Gramin Dak Sevak (GDS) 2026 – ಅರ್ಜಿ ಸಲ್ಲಿಸುವ ಸವಿವರ ವಿಧಾನ
GDS ನೇಮಕಾತಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಪೋಸ್ಟ್ ಮೂಲಕ ಅಥವಾ ನೇರವಾಗಿ ಕಚೇರಿಗೆ ಹೋಗಿ ಅರ್ಜಿ ಕೊಡುವ ಅವಕಾಶ ಇಲ್ಲ. ಮೊದಲು ನೋಂದಣಿ, ನಂತರ ಅರ್ಜಿ ಸಲ್ಲಿಕೆ ಎಂಬ ಎರಡು ಮುಖ್ಯ ಹಂತಗಳಿವೆ.
♦ ಹಂತ–1: One Time Registration (ಒಮ್ಮೆ ಮಾತ್ರ ನೋಂದಣಿ)
ಇದು ಅತ್ಯಂತ ಮುಖ್ಯ ಹಂತ. ಒಬ್ಬ ಅಭ್ಯರ್ಥಿಗೆ ಒಂದೇ ಬಾರಿ ನೋಂದಣಿ ಮಾಡಲು ಅವಕಾಶ ಇದೆ.
1.ಅಧಿಕೃತ ವೆಬ್ಸೈಟ್ ತೆರೆಯಿರಿ
♦ https://indiapost.gov.in/gdsonlineengagement
2.“New Candidate Registration” ಕ್ಲಿಕ್ ಮಾಡಿ
ಮೊದಲ ಬಾರಿ ಅರ್ಜಿ ಹಾಕುವವರು ಇದನ್ನೇ ಆಯ್ಕೆ ಮಾಡಬೇಕು.
3.ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ
-
ನಿಮ್ಮದೇ ಆಗಿರುವ, ಕಾರ್ಯನಿರ್ವಹಿಸುವ ಮೊಬೈಲ್ ಸಂಖ್ಯೆ ಬಳಸಿ
-
OTP ಬರುತ್ತದೆ, ಅದನ್ನು ಸರಿಯಾಗಿ ಹಾಕಿ
⇒ ಒಂದು ಮೊಬೈಲ್ ನಂಬರ್/ಇಮೇಲ್ ಒಂದೇ ಬಾರಿ ಬಳಸಬಹುದು
4.ವೈಯಕ್ತಿಕ ವಿವರಗಳನ್ನು ತುಂಬಿ
ಇವುಗಳನ್ನು 10ನೇ ತರಗತಿ ಮಾರ್ಕ್ಸ್ ಕಾರ್ಡ್ ಪ್ರಕಾರವೇ ಬರೆಯಬೇಕು
-
ಅಭ್ಯರ್ಥಿಯ ಹೆಸರು
-
ತಂದೆಯ ಹೆಸರು
-
ತಾಯಿಯ ಹೆಸರು
-
ಜನ್ಮ ದಿನಾಂಕ
-
ಲಿಂಗ
-
ವರ್ಗ (SC/ST/OBC/EWS/General)
!ಇಲ್ಲಿ ಸಣ್ಣ ತಪ್ಪಾದರೂ ಮುಂದಿನ ಹಂತದಲ್ಲಿ ಅರ್ಜಿ ತಿರಸ್ಕಾರ ಆಗಬಹುದು.
5.ಪಾಸ್ವರ್ಡ್ ರಚಿಸಿ
-
ಪಾಸ್ವರ್ಡ್ ಅನ್ನು ನೆನಪಿಟ್ಟುಕೊಳ್ಳಿ
-
ನೋಂದಣಿ ಪೂರ್ಣವಾದ ನಂತರ Registration Number ಸಿಗುತ್ತದೆ
ಇದನ್ನು ಕಡ್ಡಾಯವಾಗಿ ನೋಟ್ ಮಾಡಿ ಇಟ್ಟುಕೊಳ್ಳಿ
♦ ಹಂತ–2: Online Application Form (ಅರ್ಜಿ ಸಲ್ಲಿಕೆ)
ನೋಂದಣಿ ಆದ ನಂತರ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ.
6.ಲಾಗಿನ್ ಆಗಿ
-
Registration Number
-
Password
ಬಳಸಿ ಲಾಗಿನ್ ಆಗಿ
7.Personal Details ಪರಿಶೀಲಿಸಿ
ನೋಂದಣಿಯ ಸಮಯದಲ್ಲಿ ಕೊಟ್ಟ ವಿವರಗಳು ಇಲ್ಲಿ ಕಾಣಿಸುತ್ತವೆ
-
ತಪ್ಪಿದ್ದರೆ “Edit Registration” ಮೂಲಕ ಸರಿಪಡಿಸಿ
-
ಮೊಬೈಲ್ ನಂಬರ್ ಮತ್ತು ಇಮೇಲ್ ಬದಲಾಯಿಸಲು ಅವಕಾಶ ಇಲ್ಲ
8.ಶಿಕ್ಷಣ ವಿವರಗಳನ್ನು ತುಂಬಿ
-
10ನೇ ತರಗತಿ ಬೋರ್ಡ್ ಹೆಸರು
-
ಉತ್ತೀರ್ಣವಾದ ವರ್ಷ
-
ವಿಷಯವಾರು ಅಂಕಗಳು / ಗ್ರೇಡ್
ಊಹೆ ಮಾಡಿ ಅಂಕ ಬರೆಯಬೇಡಿ
9.ರಾಜ್ಯ, ವಿಭಾಗ ಮತ್ತು ಹುದ್ದೆ ಆಯ್ಕೆ
-
ನಿಮ್ಮ ಸ್ಥಳೀಯ ಭಾಷೆ ಆಧಾರವಾಗಿ ಹುದ್ದೆಗಳು ತೋರಿಸುತ್ತವೆ
-
ಒಂದೇ ವಿಭಾಗದಲ್ಲಿ ಹಲವು ಹುದ್ದೆಗಳಿಗೆ preference ಕೊಡಬಹುದು
-
ಆದರೆ ಆಯ್ಕೆ ಆದರೆ ಒಂದೇ ಹುದ್ದೆ ಸಿಗುತ್ತದೆ
10.ಫೋಟೋ ಮತ್ತು ಸಹಿ ಅಪ್ಲೋಡ್
ಫೋಟೋ:
-
JPG/JPEG
-
30 KB – 100 KB
-
ಬೆಳಕು ಸ್ಪಷ್ಟವಾಗಿರಬೇಕು
ಸಹಿ:
-
ಬಿಳಿ ಕಾಗದದಲ್ಲಿ ನೀಲಿ/ಕಪ್ಪು ಪೆನ್
-
ಸ್ಕ್ಯಾನ್ ಮಾಡಿದದ್ದು
-
20 KB – 100 KB
! ಫೋಟೋ ಅಥವಾ ಸಹಿ ಸ್ಪಷ್ಟವಾಗದಿದ್ದರೆ ಅರ್ಜಿ ರದ್ದು
11.ಅರ್ಜಿ ಶುಲ್ಕ ಪಾವತಿ
-
ಸಾಮಾನ್ಯ / OBC / EWS ಅಭ್ಯರ್ಥಿಗಳು: ₹100
-
ಮಹಿಳೆ, SC/ST, PwBD, ಟ್ರಾನ್ಸ್ಜೆಂಡರ್: ಶುಲ್ಕ ಇಲ್ಲ
-
UPI / Debit Card / Net Banking ಮೂಲಕ ಪಾವತಿ
12.Preview ಮಾಡಿ Final Submit
-
ಎಲ್ಲ ವಿವರಗಳನ್ನು ಮತ್ತೊಮ್ಮೆ ಚೆಕ್ ಮಾಡಿ
-
ತಪ್ಪಿಲ್ಲ ಅಂದ್ರೆ Final Submit ಒತ್ತಿ
-
ಅರ್ಜಿಯ ಪ್ರಿಂಟ್ ಅಥವಾ PDF ಉಳಿಸಿ
ಅರ್ಜಿ ದಿನಾಂಕಗಳು (ಮತ್ತೊಮ್ಮೆ ನೆನಪಿಗೆ)
♦ ಅರ್ಜಿ ಆರಂಭ: 31 ಜನವರಿ 2026
♦ ಕೊನೆಯ ದಿನಾಂಕ: 16 ಫೆಬ್ರವರಿ 2026 (ಸಂಜೆ 5 ಗಂಟೆ)
♦ ತಿದ್ದುಪಡಿ ಅವಕಾಶ: 18–19 ಫೆಬ್ರವರಿ 2026
⇒ ಗ್ರಾಮೀಣ ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆ
-
ಕೊನೆಯ ದಿನ ಇಂಟರ್ನೆಟ್ ಸಮಸ್ಯೆ ಆಗಬಹುದು, ಮುಂಚಿತವಾಗಿ ಅರ್ಜಿ ಹಾಕಿ
-
ಸೈಬರ್ ಸೆಂಟರ್ಗೆ ಹೋದರೂ, ವಿವರ ನೀವು ಸ್ವತಃ ಚೆಕ್ ಮಾಡಿ
-
Registration Number ಕಳೆದುಕೊಳ್ಳಬೇಡಿ
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
GDS ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. 10ನೇ ತರಗತಿಯ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ಅಂಕಗಳ ಸಮಾನತೆ ಬಂದರೆ, ವಯಸ್ಸು ಹಾಗೂ ಮೀಸಲಾತಿ ವರ್ಗದ ಆಧಾರದ ಮೇಲೆ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗಾಗಿ ಕರೆಸಲಾಗುತ್ತದೆ. ದಾಖಲೆಗಳು ಸರಿಯಾಗಿದ್ದರೆ, ತಾತ್ಕಾಲಿಕ ನೇಮಕಾತಿ ಆದೇಶ ನೀಡಲಾಗುತ್ತದೆ.
ಗ್ರಾಮೀಣ ಜನರಿಗೆ ಇದರ ಪ್ರಯೋಜನ
ಈ ನೇಮಕಾತಿ ಗ್ರಾಮೀಣ ಯುವಕರಿಗೆ ತಮ್ಮ ಊರಿನಲ್ಲೇ ಉದ್ಯೋಗ ಸಿಗುವ ಅಪರೂಪದ ಅವಕಾಶ. ರೈತ ಕುಟುಂಬಗಳ ಮಕ್ಕಳಿಗೆ ಹೆಚ್ಚುವರಿ ಆದಾಯದ ಮೂಲ ಸೃಷ್ಟಿಯಾಗುತ್ತದೆ. ಸರ್ಕಾರದ ಸೇವೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಹಾಗೂ ಬ್ಯಾಂಕಿಂಗ್ ಸೇವೆಗಳು ಇನ್ನಷ್ಟು ಬಲವಾಗುತ್ತವೆ. ಇದರಿಂದ ಜನಸಾಮಾನ್ಯರಿಗೆ ಸುಲಭವಾಗಿ ಸರ್ಕಾರಿ ಸೇವೆಗಳು ದೊರೆಯುತ್ತವೆ.
ಅಭ್ಯರ್ಥಿಗಳಿಗೆ ಕಿವಿಮಾತು
Gramin Dak Sevak ನೇಮಕಾತಿ 2026 ಗ್ರಾಮೀಣ ಭಾರತದ ಉದ್ಯೋಗ ಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ಮಹತ್ವದ ಯೋಜನೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸರಿಯಾದ ಮಾಹಿತಿಯೊಂದಿಗೆ ಸಮಯಕ್ಕೆ ಸರಿಯಾಗಿ ಅರ್ಜಿ ಹಾಕಿದರೆ, ಸರ್ಕಾರಿ ಸೇವೆಯ ಕನಸು ನನಸಾಗುವ ಸಾಧ್ಯತೆ ಹೆಚ್ಚಿರುತ್ತದೆ.